ಅಬ್ಬಾಬ್ಬಾ ಅಂದ್ರೆ ಮನುಷ್ಯ ಎಷ್ಟು ವರ್ಷ ಬದುಕಬಹುದು ಹೇಳಿ? 90 ಇಲ್ಲ 100 ಅನ್ನೋದು ಹಿಂದೆಯಿಂದ ಪೂರ್ವಜರು ಹೇಳ್ತಾಯಿದ್ದದ್ದು, ಅಲ್ವಾ.. ಆದರೆ ಇಲ್ಲೊಬ್ಬ ಮನುಷ್ಯ 100ಅಲ್ಲ, 150 ಅಲ್ಲ ಬರೋಬ್ಬರಿ 256 ವರ್ಷಗಳ ಕಾಲ ಜೀವಂತವಾಗಿದ್ದ. ಆಶ್ಚರ್ಯ ಎನಿಸಿದ್ರು, ಇದು ಸತ್ಯ ಕತೆ. ಸಾಮಾನ್ಯವಾಗಿ ಒತ್ತಡದ ಜೀವನದಲ್ಲಿ ದಿನ ಕಳೀತಿರುವ ಈ ಮಾಡರ್ನ್ ಯುಗದಲ್ಲಿ 60, 70 ವರ್ಷಗಳ ಗಡಿ ದಾಟಿದ್ರೆ ಗ್ರೇಟ್ ಅನಿಸುತ್ತೆ, ಅಪ್ಪಿ ತಪ್ಪಿ ಸೆಂಚೂರಿ ಹೊಡೆದ್ರಂತು ಹಂಡ್ರೆಡ್ ಪರ್ಸಂಟ್ ಸೆಲೆಬ್ರೇಷನ್ಗೆ ಕೊರತೆಯಿಲ್ಲ. ಆದ್ರೆ ನಾವಿವತ್ತು ಹೇಳ್ತಾಯಿರುವ, ನೀವು ಫೋಟೊದಲ್ಲಿ ಕಾಣ್ತಾಯಿರುವ ಈ ವ್ಯಕ್ತಿ ಸೆಂಚೂರಿಯಲ್ಲ, ಡಬಲ್ಸೆಂಚೂರಿಯಲ್ಲ, 256 ವರ್ಷ ಬದುಕಿದ್ದ ಅಂದ್ರೆ ನೀವು ಹುಬ್ಬೇರಿಸಬಹುದು.. ಆದರೆ ಇದು ಸತ್ಯ ಈ ವಿಚಾರಕ್ಕೆ ಸಂಬಂಧಪಟ್ಟ ಸುದ್ದಿ ಇಂಗ್ಲೀಷ್ ಪತ್ರಿಕೆಯೊಂದರಲ್ಲಿ ಸಹ ಬಂದಿತ್ತು.
[widget id=”custom_html-3″]

ಅಷ್ಟಕ್ಕೂ ಈತನ ಹೆಸರು ಲೀಚೀಂಗ್ ಯುಎನ್, ಮೂಲತಃ ಚೀನಾದವನಾಗಿದ್ದ ಲೀಚಿಂಗ್ 180 ಮಕ್ಕಳಿಗೆ ಜನ್ಮ ಕೊಟ್ಟಿದ್ದನಂತೆ, ಜೊತೆಗೆ 23 ಪತ್ನಿಯರನ್ನು ಸಹ ಸಮಾಧಿ ಮಾಡಿದ್ದನಂತೆ. ಈ ಲೀಚಿಂಗ್ ಒಬ್ಬ ನಾಟಿವೈದ್ಯನಾಗಿದ್ದು ಆರೋಗ್ಯಕರವಾದ ಜೀವನವನ್ನು ನಡೆಸುತ್ತಿದ್ದ, ಆತನಿಗೆ 11ವರ್ಷಗಳಿರುವಾಗಿನಿಂದಾನೂ ಸಹ ಗಿಡ ಬಳ್ಳಿಗಳ ಸಂಗ್ರಹ ಮಾಡಿ ನಾಟಿ ಔಷಧಿಗೆ ಬೇಕಾಗುವಂತಹ ಸಹಾಯವನ್ನು ಮಾಡ್ತಿದ್ದನಂತೆ, ಹೀಗೆ ಲೀಚಿಂಗ್ ಸಹ ಕಾಲ ಕ್ರಮೇಣ ನಾಟಿ ವೈದ್ಯದಲ್ಲಿ ನೈಪುಣ್ಯತೆಯನ್ನು ಪಡೆದುಕೊಳ್ಳುತ್ತಾನೆ. ಅಪಾರ ಜನರಿಗೆ ಆರೋಗ್ಯದಲ್ಲಿ ಏರುಪೇರಾದಾಗ ತನಗೆ ಗೊತ್ತಿರುವ ಈ ನಾಟಿ ವೈದ್ಯವನ್ನು ಬಳಸಿ ಸಮಸ್ಯೆಯನ್ನ ಶಮನ ಮಾಡುತ್ತಿದ್ದ. ಜೊತೆಗೆ ತಾನು ಜೀವಿಸುವ ರೀತಿಯನ್ನು ಸಹ ಬಹಳ ಶಿಸ್ತಿನಿಂದ ಪಾಲಿಸುತ್ತಿದ್ದ.
[widget id=”custom_html-3″]

ಆಹಾರ ಪದ್ದತಿಯಲ್ಲಿಯೂ ಸಹ ಒಂದಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುತ್ತಿದ್ದನಂತೆ, ಸಿಕ್ಕ ಸಿಕ್ಕದ್ದನ್ನೆಲ್ಲ ತಿನ್ನದೇ, ಆರೋಗ್ಯಕರವಾದ ಆಹಾರವನ್ನು ಮಾತ್ರ ತಿನ್ನುತ್ತಿದ್ದನಂತೆ, ಒಂದಷ್ಟು ಪಥ್ಯವನ್ನು ಸಹ ಅನುಸರಿಸುತ್ತಿದ್ದನಂತೆ.
ಇನ್ನು ಈ ಲೀಚಿಂಗ್ 150ನೇ ವರ್ಷವನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಚೀನಾ ಸರ್ಕಾರ ಈತನ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಣೆ ಮಾಡಿದ್ದಂತೆ. ಸತ್ಯಯುಗ, ತ್ರೇತಾಯುಗಗಳಲ್ಲೆಲ್ಲ ಮನುಷ್ಯನ ಆಯಸ್ಸು ನೂರರ ಗಡಿದಾಟಿತ್ತು, ಐನೂರು ವರ್ಷಗಳಿಗೂ ಅಧಿಕಕಾಲ ಬದುಕಿದ್ದಾರೆ ಅಂತ ಪುರಾಣದ ಪುಟಗಳಲ್ಲಿ ಉಲ್ಲೇಖವಾಗಿತ್ತು, ಆದ್ರೆ ಈ ಕಲಿಯುಗದಲ್ಲಿ ಇನ್ನೂರು ವರ್ಷಗಳನ್ನು ದಾಟಿ ಇನ್ನೂರ ಐವತ್ತು ವರ್ಷಗಳನ್ನು ಪೂರೈಸಿ ತನ್ನ 256ನೇ ವರ್ಷದಲ್ಲಿ ಉಸಿರು ಚೆಲ್ಲಿದ ಈ ಲೀಚಿಂಗ್ ನಿಜಕ್ಕೂ ಗ್ರೇಟ್ ಅಲ್ಲವೇ..