Advertisements

25 ವರ್ಷಗಳ ನಂತರ ಗುಡಿಸಲು ಬಾಗಿಲು ತೆರೆದು ನೋಡಿದ ವ್ಯಕ್ತಿಗೆ ಶಾಕ್! ಏನಿತ್ತು ಗೊತ್ತಾ..?

Kannada Mahiti

ನಮಸ್ತೇ ಸ್ನೇಹಿತರೆ.. ಇತಿಹಾಸದಲ್ಲಿ ನಡೆದಿರುವ ಕೆಲವೊಂದು ಘಟನೆಗಳು ರಹಸ್ಯವಾಗಿ ಉಳಿದುಕೊಂಡು ಗೊತ್ತಾಗದೆ ಆಗೆ ಇದೆ.. ಇನ್ನೂ ಕೆಲವೊಂದು ರಹಸ್ಯಗಳನ್ನು ಬೇದಿಸುವಲ್ಲಿ ಸಂಶೋದಕರು ಯಶಸ್ವಿಯಾಗಿದ್ದಾರೆ.. ಇತಿಹಾಸದಲ್ಲಿ ನಮಗೆ ಅಚ್ಚರಿ ಮೂಡಿಸುವಂತಹ ವಸ್ತುಗಳನ್ನು, ಹಾಗೂ ಪುರಾವೆಗಳನ್ನು ನಾವು ಕೆಲವೊಂದನ್ನು ನೋಡಿರಬಹುದು ಹಾಗೂ ತಿಳಿದುಕೊಂಡಿರಬಹುದು.. ನಿಮಗೆಲ್ಲ ತಿಳಿದಿರುವ ಹಾಗೆ ರಾಜರ ಕಾಲದಲ್ಲಿ ಶತ್ರುಗಳಿಂದ ತಪ್ಪಿಸಿಕೊಳ್ಳಲು ಸುರಂಗ ಮಾರ್ಗ ಹಾಗೂ ಇನ್ನೂ ಹಲವು ರೀತಿಯ ವಿಧಾನವನ್ನು ಕಂಡುಕೊಂಡಿದ್ದರು…

Advertisements

ಇನ್ನೂ ನಿಮ್ಮ ಮನೆ ಒಂದಾನೊಂದು ಕಾಲದಲ್ಲಿ ರಾಜ ಮನೆತನ ಆಳಿದ್ದು ಎಂದು ಗೊತ್ತಾದರೆ ಅಂತಹ ಅದ್ಬುತ ಘಟನೆ ನಡೆದದ್ದು ಟರ್ಕಿ ದೇಶದಲ್ಲಿ.. ಟರ್ಕಿ ದೇಶಕ್ಕೆ ಸೇರಿದ ಒಬ್ಬ ಮುಸ್ತಪ್ಪ ಎನ್ನುವ ವ್ಯಕ್ತಿ ಗುಡಿಸಿಲಿನಂತಿರುವ ಮನೆಯನ್ನು ಡಿರಂಕ್ಯೂ ಎಂಬ ಸ್ಥಳದಲ್ಲಿ ಖರೀದಿ ಮಾಡುತ್ತಾನೆ.. ನಂತರ ಈ ಮನೆಯಲ್ಲಿ ಹಲವು ವರ್ಷಗಳ ಕಾಲ ವಾಸ ಮಾಡತ್ತಾನೆ.. ಇನ್ನೂ ಮುಸ್ತಪ್ಪ ಕೆಲಸದ ನಿಮಿತ್ತ ಈ ಮನೆಯನ್ನು ಬಿಟ್ಟು ಬೇರೆಯ ಕಡೆಗೆ ಹೋಗಿ ವಾಸವಾಗಿದ್ದರು..

ಸುಮಾರು 25 ವರ್ಷಗಳ‌ ನಂತರ ಮೊದಲು ವಾಸವಿದ್ದ ಗುಡಿಸಲನ್ನು ನವೀಕರಣ ಮಾಡಿಸಲು ಮುಸ್ತಪ್ಪ ಅವರು ಮುಂದಾಗುತ್ತಾರೆ.. ಇನ್ನೂ ಈ ಮನೆಗೆ ಕೂಲಿಯವರನ್ನು ಕರೆಸಿ ನವೀಕರಣ ಮಾಡಿಸುತ್ತಿದ್ದ ಸಮಯದಲ್ಲಿ ಮುಸ್ತಪ್ಪ ಅವರಿಗೆ ಒಂದು ಬಾಗಿಲು ಕಾಣಿಸುತ್ತದೆ.. ಈ ಬಾಗಿಲನ್ನು ಮುಸ್ತಪ್ಪ ಅವರು ಎಂದಿಗೂ ಕೂಡ ನೋಡಿಯೇ ಇರಲಿಲ್ಲ.. ಇದೇ ಮೊದಲಬಾರಿಗೆ ಕಾಣಿಸಿಕೊಂಡ ಆ ಬಾಗಿಲನಲ್ಲಿ ಏನಿರಬಹುದು ಎಂಬ ಕುತೂಹಲದಿಂದ ಬಾಗಿಲನ್ನು ಓಪನ್ ಮಾಡುತ್ತಾನೆ.. ಈ ಬಾಗಿಲನ್ನು ಓಪನ್ ಮಾಡಿದ ಮುಸ್ತಪ್ಪ ಒಂದು ಕ್ಷಣ ಬೆಚ್ಚಿಬಿದ್ದರು..

ಆ ಡೋರ್ ಓಪನ್ ಮಾಡಿದ ತಕ್ಷಣ ದೊಡ್ಡ ದೊಡ್ಡದಾದ ದ್ವಾರಗಳು ಕಾಣಿಸಿಕೊಂಡವು.. ನಂತರ ಈ ದ್ವಾರಗಳ ಮೂಲಕ ಇನ್ನೂ ಒಳಗೆ ಹೋಗಿ ನೋಡಿದ ಮುಸ್ತಪ್ಪನಿಗೆ ದೊಡ್ಡ ನಗರವೇ ಕಾಣಿಸಿಕೊಂಡಿತು.. ನಡೆದುಕೊಂಡು ಹೋದಷ್ಟು ಅದೆಷ್ಟೋ ರೂಮ್ ಗಳು ಹಾಗೂ ಮನೆಗಳು ಕಾಣಿಸಿಕೊಂಡವು.. ಇನ್ನೂ ಈ ವಿಷಯವನ್ನು ತಿಳಿದ ಮುಸ್ತಪ್ಪ ತಕ್ಷಣ ಸರ್ಕಾರಕ್ಕೆ ಮಾಹಿತಿಯನ್ನು ನೀಡುತ್ತಾರೆ.. ಈ ಮಾಹಿತಿ ತಿಳಿದ ತಕ್ಷಣವೇ ಅಧಿಕಾರಿಗಳು ಅಲ್ಲಿಗೆ ಬಂದು  ಪರಿಶೀಲನೆ ನಡೆಸಿದಾಗ ಗೊತ್ತಾದ ವಿಷಯವೇನೆಂದರೆ.. 2000 ವರ್ಷಗಳ ಹಿಂದೆ ಇದೊಂದು ಅಂಡರ್ ಗ್ರೌಂಡ್ ನಗರವಾಗಿದ್ದು.. ಇದನ್ನು ಟರ್ಕಿಯ ರಾಜಮನೆತನದವರು ಪರಿಪಾಲನೆ ಮಾಡತ್ತಿದ್ದರು ಎನ್ನಲಾಗಿದೆ‌‌..

ಇದು ಭೂಮಿಯ ಒಳಗಡೆ 18 ಅಂತಸ್ತಿನ ಮನೆಯಾಗಿದ್ದು ಸುಮಾರು 20 ಸಾವಿರ ಜನರು ವಾಸವಿದ್ದರು ಎಂದು ಅಂದಾಜಿಸಲಾಗಿದೆ..  ಶ’ತ್ರು ಗಳ ಆ’ಕ್ರಮ, ಯು’ದ್ದ ಹಾಗೂ ಪ್ರಕೃತಿಯ ವಿಕೋ’ಪದಿಂದ ತಪ್ಪಿಸಿಕೊಳ್ಳಲು ಇಲ್ಲಿ ವಾಸವಾಗಿದ್ದರು ಎಂದು ಹೇಳಲಾಗಿದೆ.. ಈ ದೊಡ್ಡ ನಗರದಂತಿರುವ ಅಂಡರ್ ಗ್ರೌಂಡ್ ನಲ್ಲಿ ರಹಸ್ಯ ಸುರಂಗಮಾರ್ಗ, ಅಂಗಡಿಗಳು, ಶಾಲೆಗಳು ಪತ್ತೆಯಾಗಿದೆ.. ಈ ಸ್ಥಳವನ್ನು ಈಗ ಪ್ರವಾಸಿ ತಾಣವನ್ನಾಗಿ ಮಾರ್ಪಾಟು ಮಾಡಲಾಗಿದ್ದು.. ಮುಸ್ತಪ್ಪ ಅವರಿಗೆ ಸರ್ಕಾರ ಬೇರೆ ಕಡೆ ಜಾಗವನ್ನು ನೀಡಿದ್ದಾರೆ.. ನೋಡಿದರಲ್ವಾ ಸ್ನೇಹಿತರೆ ಮುಸ್ತಪ್ಪ ಅವರು ಬಾಗಿಲನ್ನು ತೆರೆಯದೆ ಇದ್ದಿದ್ದರೆ ಈ ರಹಸ್ಯಮಯ ಜಾಗ ಗೊತ್ತಾಗುತ್ತಿರಲಿಲ್ಲವೆನೋ ಅನಿಸುತ್ತದೆ.. ಈ ಸ್ಥಳ ಈಗ ಪ್ರವಾಸಿ ತಾಣವಾಗಿದ್ದು ಹಲವು ಕಡೆಯಿಂದ ಜನರು ಈ  ಸ್ಥಳವನ್ನು ನೋಡಲು ಬರುತ್ತಿದ್ದಾರೆ‌..