Advertisements

ಕಡೆಗೂ ಫಲಿಸಿತು ಪ್ರಾರ್ಥನೆ..SPBಯವರ ಆರೋಗ್ಯದ ವಿಚಾರದಲ್ಲಿ ಗುಡ್ ನ್ಯೂಸ್ ಕೊಟ್ಟ ವೈದ್ಯರು

Cinema

ನಮಸ್ತೇ ಸ್ನೇಹಿತರೆ, ಭಾರತದ ಗಾನಕೋಗಿಲೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಇದೇ ಆಗಸ್ಟ್ ೫ ರಂದು ಚೆನ್ನೈನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಕೊರೋನಾ ಪಾಸಿಟಿವ್ ಇರುವುದಾಗಿ ವರದಿ ಬಂದಿತ್ತು. ಬಳಿಕ ನುರಿತ ವೈದ್ಯರಿಂದ ಚಿಕಿತ್ಸೆ ಮುಂದುವರಿದಿದ್ದು ಶೀಘ್ರದಲ್ಲೇ ಕೊರೋನಾ ಗೆದ್ದು ಮರಳಿ ಬರುವುದಾಗಿ ಸ್ವತಃ SPBಯವರು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು. ಆದ್ರೆ ಆಗಸ್ಟ್ ೧೩ರ ನಂತರ ಅವರ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದ್ದು ಗಂಭೀರ ಸ್ಥಿತಿಯಲ್ಲಿದ್ದರು. ಅಂತಾರಾಷ್ಟ್ರೀಯ ನುರಿದ ವೈದ್ಯರಿಂದ ವೆಂಟಿಲೇಟರ್ ಮೂಲಕ ನಿರಂತರವಾಗಿ ಚಿಕಿತ್ಸೆ ನೀಡಲಾಗುತಿತ್ತು.

ಇನ್ನು ಬಾಲಸುಬ್ರಹ್ಮಣ್ಯಂ ರವರ ಪುತ್ರ SP ಚರಣ್ ತಂದೆಯ ಆರೋಗ್ಯದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತೀ ದಿನ ಅಪ್ಡೇಟ್ ಮಾಡುತ್ತಿದ್ದರು. ತಂದೆಯ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿಲ್ಲ..ಆ ಭಗವಂತನೇ ಕಾಪಾಡಬೇಕು ಎಂದು ತಮ್ಮ ನೋವನ್ನ ತೋಡಿಕೊಂಡಿದ್ದರು. ಇನ್ನು ದೇಶದ ಸಿನಿಮಾ ರಂಗ, ಸಂಗೀತ ದಿಗ್ಗಜರು, ಅಭಿಮಾನಿಗಳು ಎಲ್ಲಾ ಸೇರಿ ಎಸ್ಪಿಬಿಯವರ ಹಾಡುಗಳ ಮೂಲಕವೇ ಆ ದೇವರಲ್ಲಿ ಮೊರೆಯಿಟ್ಟರು. ಬಾಲಸುಬ್ರಹ್ಮಣ್ಯಂರವರು ಬೇಗ ಗುಣಮುಖರಾಗಿ ಬರಲೆಂದು, ಗಾನಕೋಗಿಲೆ ಮತ್ತೆ ಹಾಡಬೇಕೆಂದು..

Advertisements

ನಿಸ್ವಾರ್ಥ ಪ್ರಾರ್ಥನೆಗೆ ದೇವರು ಒಲಿಯದೆ ಇರುತ್ತಾನೆಯೇ..ಕೊನೆಗೂ ಎಲ್ಲರ ಪ್ರಾರ್ಥನೆ ಫಲಿಸಿದೆ. ಬಾಲಸುಬ್ರಹ್ಮಣ್ಯಂ ರವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಕೊರೊನಾ ಟೆಸ್ಟ್ ನಲ್ಲಿ ನೆಗಟೀವ್ ಬಂದಿದೆ..ಇನ್ನು ಈ ಖುಷಿ ಸುದ್ದಿಯ ಬಗ್ಗೆ ಸಾಹಿತಿ ಕೆ.ಕಲ್ಯಾಣ್ ರವರು ಮಾಹಿತಿ ನೀಡಿದ್ದಾರೆ. SPBಯವರ ಬಾಲ್ಯ ಗೆಳೆಯನೊಬ್ಬನ ಜೊತೆ ಮಾತನಾಡಿದ್ದು ಎರಡು ಬಾರಿ ಅವರಿಗೆ ಕರೆ ಮಾಡಿ ಖಚಿತಪಡಿಸಿಕೊಂಡಿದ್ದು ವರದಿ ನೆಗಟೀವ್ ಬಂದಿದೆ ಎಂದು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ವಿಶ್ವದಾದ್ಯಂತ ಅವರ ಅಭಿಮಾನಿಗಳು, ಸೆಲೆಬ್ರೆಟಿಗಳು ಮಡಿದ ಪ್ರಾರ್ಥನೆಯಿಂದ ಇಂದು ಬಾಲಸುಬ್ರಹ್ಮಣ್ಯಂ ರವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಬೇಗ ಗುಣಮುಖರಾಗಿ ಮತ್ತೆ SPBಯವರ ಮಧುರ ಕಂಠದಿಂದ ಹಾಡುಗಳು ಕೇಳುವಂತಾಗಬೇಕು ಎಂದು ನಾವೆಲ್ಲಾ ಪ್ರಾರ್ಥನೆ ಮಾಡೋಣ..