ಕನ್ನಡದ ಬಿಗ್ ಬಾಸ್ ವಿನ್ನರ್ ರ್ಯಾಪರ್ ಚಂದನ್ ಶೆಟ್ಟಿ ಮತ್ತೆ ವಿವಾದ ಮಾಡಿಕೊಂಡಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಚಂದನ್ ಮೇಲೆ ಕೇಳಿಬಂದಿದ್ದು ಈ ಬಾರಿ ಮಲೆ ಮಹದೇಶ್ವರ ಭಕ್ತರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಹೌದು, ಮೊನ್ನೆಯಷ್ಟೇ ನಡೆದ ಗಣೇಶ ಚತುರ್ಥಿಯೆಂದು ಮಲೆ ಮಹದೇಶ್ವರ ಸ್ವಾಮಿಯ ಕುರಿತಂತೆ ಕೋಲು ಮಂಡೆ ಜಂಗಮ ದೇವರು ಎಂಬ ಹೊಸ ಹಾಡನ್ನ ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿದ್ದು ಇದೆ ವಿವಾದವಾಗಲು ಕಾರಣವಾಗಿದೆ.
ಮಲೆ ಮಹದೇಶ್ವರ ಸ್ವಾಮಿ ಕುರಿತ ಹಾಡನ್ನ ಅ’ಶ್ಲೀ’ಲವಾಗಿ ಆರೋಪ ಚಂದನ್ ಮೇಲೆ ಬಂದಿದೆ. ಇನ್ನು ಈ ಭಕ್ತಿ ಗೀತೆಯನ್ನ ತಿರುಚಲಾಗಿದ್ದು ಮಾದಪ್ಪನ ಭಕ್ತೆಯಾಗಿರುವ ಸುಂಕಮ್ಮನ ಬಗ್ಗೆ ಅ’ಶ್ಲೀ’ಲವಾಗಿ ತೋರಿಸಲಾಗಿದ್ದು ಮಾದಪ್ಪನ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎನ್ನಲಾಗಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಶೆಟ್ಟೀ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ.

ಹಣಕೋಸ್ಕರ ಹಳೆ ಜಾನಪದ ಹಾಡನ್ನ ಬಳಸಿಕೊಂಡಿದ್ದಾರೆ ಎನ್ನುವ ಆರೋಪ ಕೂಡ ಚಂದನ್ ಮೇಲೆ ಮಾಡಲಾಗಿದ್ದು ಈಗಾಗಲೇ ವೈರಲ್ ಆಗಿರುವ ಈ ಹಾಡನ್ನ ಈ ಕೂಡಲೇ ಯೂಟ್ಯೂಬ್ ನಿಂದ ತೆಗೆದುಹಾಕಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಆಗಸ್ಟ್ ೨೩ರಂದು ಬಿಡುಗಡೆಯಾದ ಈ ಹಾಡು ಈಗಾಗಲೇ ೩೫ ಲಕ್ಷಕ್ಕೂ ಹೆಚ್ಚು ವೀಕ್ಷಣೆ ಆಗಿದೆ.