Advertisements

ತಪ್ಪಾಗಿದೆ ಎಂದು ಕ್ಷಮೆ ಕೇಳಿದ ಚಂದನ್ ಶೆಟ್ಟಿ..ಜನರಲ್ಲಿ ಮನವಿ ಮಾಡಿ ಕೇಳಿಕೊಂಡಿದ್ದೇನು ಗೊತ್ತಾ ?

Cinema

ಮಲೆಮಹದೇಶ್ವರ ಸ್ವಾಮಿಯ ಕುರಿತಂತೆ ರ್ಯಾಪ್ ಸಾಂಗ್ ನ್ನ ಮಾಡಿ ವಿವಾದಕ್ಕೆ ಸಿಲುಕಿರುವ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ವಿರುದ್ಧ ಭಕ್ತರ ಭಾವನೆಗಳಿಗೆ ಧಕ್ಕೆ ಮಾಡಿದ ಆರೋಪ ಕೇಳಿಬಂದಿದ್ದು ಸಾಮಾಜಿಕ ಜಾಲಾತಾಣಗಳಲ್ಲಿ ಬಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರ ಹಿನ್ನಲೆಯಲ್ಲಿ ಚಂದನ್ ವಿಡಿಯೋವೊಂದನ್ನ ಮಾಡಿ ಜನರಲ್ಲಿ ಕ್ಷಮೆ ಕೇಳಿದ್ದಾರೆ. ಇಂದಿನ ಯುವ ಪೀಳಿಗೆಗೆ ಜಾನಪದ ತಲುಪಲಿ ಎಂಬ ಕಾರಣದಿಂದ ಜಾನಪದ ಗೀತೆಗೆ ರ್ಯಾಪರ್ ರೂಪ ಕೊಟ್ಟಿದ್ದಾನೆ ಹೊರತು ಯಾರ ಭಾವನೆಗಳಿಗೂ ಧಕ್ಕೆ ಮಾಡುವ ಉದ್ದೇಶ ನನಗಿಲ್ಲ.

Advertisements

ಮಾದಪ್ಪನ ಕುರಿತಂತೆ ರ್ಯಾಪರ್ ಸಾಂಗ್ ಮಾಡಿದ್ದ ಚಂದನ್ ಶೆಟ್ಟಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದರು. ಬಾರೀ ವೈರಲ್ ಆಗಿದ್ದ ಈ ಹಾಡು ೩೫ ಲಕ್ಷಕ್ಕಿಂತ ಹೆಚ್ಚು ವೀಕ್ಷಣೆ ಕಂಡಿದ್ದು ನಂಬರ್ ಒನ್ ಟ್ರೆಂಡಿಂಗ್ ನಲ್ಲಿ ಇತ್ತು. ಆದರೆ ಜಾನಪದ ಭಕ್ತಿಗೀತೆಯನ್ನ ತಿರುಚಲಾಗಿದ್ದು ಮಾದಪ್ಪನ ಪರಮ ಭಕ್ತೆ ಸುಂಕಮ್ಮನ ಬಗ್ಗೆ ಅ’ಶ್ಲೀ’ಲವಾಗಿ ಹಾಡಿನಲ್ಲಿ ತೋರಿಸಲಾಗಿದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಬಾರೀ ವಿರೋಧ ವ್ಯಕ್ತವಾಗಿತ್ತು. ಕೂಡಲೇ ಯೂಟ್ಯೂಬ್ ನಿಂದ ಹಾಡನ್ನ ತೆಗೆದು ಹಾಕಿ ಎಂದು ಚಾಮರಾಜನಗರದ ಜನರು ಗಾಯಕ ಚಂದನ್ ಶೆಟ್ಟಿ ವಿರುದ್ಧ ಕಿಡಿಕಾರಿದ್ದರು.

ಇದು ನಮ್ಮ ಗಮನಕ್ಕೆ ಬಾರದಂತೆ ನಡೆದ ತಪ್ಪಾಗಿದ್ದು ನಮ್ಮ ತಂಡದ ಕಡೆಯಿಂದ ಕ್ಷಮೆ ಯಾಚಿಸುತ್ತೇನೆ. ಒಂದು ಒಳ್ಳೆಯ ಉದ್ದೇಷ ಇಟ್ಟುಕೊಂಡು ಮಾಡಿದ ಈ ಹಾಡಿನ ಶೂಟಿಂಗ್ ಸಮಯದಲ್ಲಿ ತಪ್ಪಾಗಿದೆ. ಮ್ಯೂಸಿಕ್ ಮಿಕ್ಸ್ ಮಾಡಿದ್ದೇನೆಯೇ ಹೊರತು ಹಾಡನ್ನ ಎಲ್ಲಿಯೂ ತಿರುಚಿಲ್ಲ. ಯಾರಿಗಾದರೂ ಇದರಿಂದ ಬೇಜಾರಾಗಿದ್ದರೆ ಅವರಲ್ಲಿ ನಾನು ಕ್ಷಮೆ ಕೇಳುತ್ತೇನೆ. ದೇಶ ವಿದೇಶಗಳಲ್ಲಿ ಓಡುತ್ತಿರುವ ಈ ಹಾಡಿಗೆ ಸಪೋರ್ಟ್ ಮಾಡಿ. ನಿಮ್ಮ ಮನೆ ಮಗನೆಂದು ಕ್ಷಮಿಸಿಬಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ ಚಂದನ್ ಶೆಟ್ಟಿ. ಯಾವ ದೃಶ್ಯದಲ್ಲಿ ತಪ್ಪಾಗಿದೆಯೋ ಅದನ್ನ ಬದಲಾವಣೆ ಮಾಡುತ್ತೇನೆ ಎಂದು ಕೂಡ ಹೇಳಿದ್ದಾರೆ.