Advertisements

ಶಿವನ ದರ್ಶನಕ್ಕೆ ಬಂದ ಪರಶುರಾಮರನ್ನ ತಡೆದ ಗಣೇಶ ! ಬಳಿಕ ಆಗಿದ್ದೇನು ? ಮಾತೆ ಪಾರ್ವತೀ ಕೋಪಗೊಂಡಿದ್ದೇಕೆ ?

Adyathma

ನಮಸ್ತೇ ಸ್ನೇಹಿತರೇ, ಹಿಂದೂ ದೇವತೆಗಳಲ್ಲಿ ಪ್ರಥಮ ಪೂಜ್ಯ ವಿಘ್ನಹರ್ತ ಗಣೇಶನಿಗೆ ಅಗ್ರಸ್ಥಾನ. ತ್ರಿದೇವತೆಗಳು ಕೂಡ ವಿನಾಯಕನಿಗೆ ಪ್ರಥಮ ಪೂಜೆ ಸಲ್ಲಿಸುತ್ತಾರೆ. ವಿಘನಿವಾರಕನಾಗಿರುವ ಶಿವಪುತ್ರ ಬುದ್ದಿವಂತ ದೇವತೇ ಕೂಡ. ಆದರೆ ಒಮ್ಮೆ ಪರಮೇಶ್ವರನ ಪರಮ ಭಕ್ತನಾದ ಭಗವಾನ್ ಪರುಶುರಾಮರು ಹಾಗೂ ವಿನಾಯಕನ ನಡುವೆ ಭ’ಯಂಕರ ಯು’ದ್ಧವೇ ನಡೆಯುತ್ತದೆ. ಸ್ವಯಂ ನಾರಾಯಣನ ಅವತಾರವಾದ ಪರುಶುರಾಮರು ಮಹಾದೇವನ ಪರಮ ಭಕ್ತನಲ್ಲದೆ ಶಿಷ್ಯ ಕೂಡ ಹೌದು. ಶಿವನ ತಪಸ್ಸು ಮಾಡಿ ಅನುಗ್ರಹಿತನಾದ ಪರುಶುರಾಮ ಭಗವಾನ್ ಶಿವನಿಂದ ಪರುಶು ಆಯುಧವನ್ನ ಪಡೆಯುತ್ತಾನೆ. ಇದರಿಂದಲೇ ಪರಶುರಾಮ ಎಂಬ ಹೆಸರು ಬಂತು ಎಂದು ಪುರಾಣಗಳಲ್ಲಿ ಉಲ್ಲೇಖ ಮಾಡಲಾಗಿದೆ.

ಪರಶು ಅಸ್ತ್ರವಿನಿಂದಲೇ ಪರಶುರಾಮರು ಭೂಮಿಯ ಮೇಲಿನ ತನ್ನ ಅವತಾರದ ಉದ್ದೇಶಗಳನ್ನ ಪೂರ್ಣಗೊಳಿಸುತ್ತಾರೆ. ಒಮ್ಮೆ ಮಹಾದೇವನ ದರ್ಶನ ಪಡೆಯುವ ಸಲುವಾಗಿ ಪರಶುರಾಮರು ಕೈಲಾಸಕ್ಕೆ ಪ್ರಯಾಣ ಮಾಡುತ್ತಾರೆ. ಆಗ ಕೈಲಾಸದಲ್ಲಿ ಭಗವಾನ್ ಪರಶುರಾಮರನ್ನ ತಡೆದ ಗಣೇಶ ಮಹಾದೇವನ ಭೇಟಿಗೆ ನಿರಾಕರಿಸುತ್ತಾರೆ. ಧ್ಯಾನದಲ್ಲಿದ್ದ ಪರಮೇಶ್ವರ ತನ್ನ ಬಳಿ ಯಾರನ್ನು ಕಳಿಸಬಾರದು ಎಂದು ವಿನಾಯಕನಿಗೆ ಕಟ್ಟಪ್ಪಣೆ ಮಾಡಿರುತ್ತಾರೆ. ಆದರೆ ಮೊದಲೇ ಮಹಾ ಕೋಪಿಷ್ಠನಾದ ಪರಶುರಾಮರು ವಿನಾಯಕ ತನ್ನ ದಾರಿಗೆ ಅಡ್ಡ ಬಂದಿದಕ್ಕೆ ಕೋಪಗೊಳ್ಳುತ್ತಾನೆ.

Advertisements

ನಾನು ಶಿವ ಶಂಕರನ ಪರಮ ಭಕ್ತ..ಪ್ರಭುವಿನ ದರ್ಶನ ಪಡೆಯದೇ ನಾನು ಹಿಂತಿರುಗುವುದಿಲ್ಲ ಎಂದು ಗಣೇಶನಿಗೆ ಹೇಳುತ್ತಾರೆ. ಆದರೆ ತಂದೆಯ ಆಜ್ಞೆ ಇದ್ದ ಕಾರಣ ಗಣೇಶ ಪರುಶುರಾಮರ ಮಾತನ್ನ ಕೇಳುವುದಿಲ್ಲ. ಇದರಿಂದ ಕೆರಳಿ ಕೆಂಡವಾದ ಪರಶುರಾಮರು ವಿನಾಯಕನ ಮೇಲೆ ಯು’ದ್ಧ ಸಾರುತ್ತಾರೆ. ಬೇರೆ ದಾರಿಯಲ್ಲದೆ ಗಣಪ ಕೂಡ ಪರುಶುರಾಮರ ಜೊತೆ ಯು’ದ್ಧಕ್ಕೆ ನಿಂತಿದ್ದು ಇಬ್ಬರ ನಡುವೆ ಘ’ನಘೋ’ರವಾದ ಯು’ದ್ಧ ನಡೆಯುತ್ತದೆ. ಇನ್ನು ಪರಶುರಾಮರು ತಮ್ಮ ಬಳಿ ಇದ್ದ ಎಲ್ಲಾ ದಿವ್ಯಾಸ್ತ್ರಗಳನ್ನ ಗಣೇಶನ ಮೇಲೆ ಪ್ರಯೋಗ ಮಾಡಿದರು ಕೂಡ ವಿನಾಯಕನಿಗೆ ಏನೂ ಆಗಲಿಲ್ಲ. ಕೊನೆಗೆ ಶಿವನೇ ಕೊಟ್ಟ ಪರಶುವಿನಿಂದ ಶಿವಪುತ್ರನ ಮೇಲೆ ದಾಳಿ ಮಾಡುತ್ತಾರೆ.

ಆದರೆ ಇದನ್ನ ಎದುರಿಸುವ ಶಕ್ತಿಯಿದ್ದರೂ ತಂದೆ ಪರಶುರಾಮರಿಗೆ ಕೊಟ್ಟಿದ್ದ ವರವನ್ನ ಅಪಮಾನ ಮಾಡಲು ಗಣೇಶ ಮುಂದಾಗಲಿಲ್ಲ. ಇದೆ ಕಾರಣದಿಂದ ಪರಷುವನ್ನ ತಮ್ಮ ಒಂದು ದಂತದಿಂದ ತಡೆದಿದ್ದು ಈ ಕಾರಣದಿಂದ ಒಂದು ದಂತ ತುಂಡಾಗಿಹೋಯಿತು. ಕೂಡಲೇ ನೋವಿನಿಂದ ಅಮ್ಮಾ ಎಂದು ತನ್ನ ತಾಯಿ ಪಾರ್ವತೀ ದೇವಿಯನ್ನ ಗಣೇಶ ಕರೆಯುತ್ತಾನೆ. ಸ್ಟಳಕ್ಕೆ ಬಂದ ಮಾತೆ ಪಾರ್ವತೀ ದೇವಿಯು ಮಗನ ಸಂಕಷ್ಟವನ್ನ ಕಂಡು ಪರುಶುರಾಮರ ಮೇಲೆ ಕೋಪಗೊಂಡು ದುರ್ಗಾ ದೇವಿ ರೂಪವನ್ನ ತಾಳುತ್ತಾರೆ. ಅಷ್ಟೊತ್ತಿಗೆ ಭಗವಾನ್ ಪರಶುರಾಮರಿಗೂ ಕೂಡ ತನ್ನ ತಪ್ಪಿನ ಬಗ್ಗೆ ಅರಿವಾಗಿರುತ್ತದೆ. ಗಣೇಶ ಕೂಡ ತಾಯಿಯನ್ನ ಸಮಾಧಾನ ಮಾಡಲು ಪ್ರಯತ್ನ ಮಾಡುತ್ತಾರೆ. ನಾನು ಪರಶುರಾಮರ ಆರಾಧ್ಯ ದೈವ ಮಹದೇವನನ್ನ ಭೇಟಿ ಮಾಡುವುದನ್ನ ತಡೆದಿದ್ದೆ. ಈಗಾಗಿ ಅವರಿಗೆ ಕೋಪ ಬಂದಿರುವುದು ಸ್ವಾಭಾವಿಕವೇ ಸರಿ ಎಂದು ಮತ್ತೆ ಪಾರ್ವತೀ ದೇವಿಯಲ್ಲಿ ಗಣೇಶ ಮನವಿ ಮಾಡಿಕೊಳ್ಳುತ್ತಾನೆ.

ಕೊನೆಗೂ ಪಾರ್ವತೀ ದೇವಿಯು ಶಾಂತರಾಗುತ್ತಾರೆ. ಇನ್ನು ಗಣೇಶನ ವರ್ತನೆ ಕಂಡು ಪರಶುರಾಮರಿಗು ಸಂತಸವಾಗಿದ್ದು ಇಷ್ಟೊಂದು ಸಹನಶೀಲತೆಯನ್ನ ಯಾವುದೇ ದೇವರಲ್ಲಿ ನಾನು ಕಂಡಿಲ್ಲ. ಗಣೇಶನ ತುಂಡಾಗಿರುವ ದಂತವಂತೂ ವ್ಯರ್ಥವಾಗುವುದಿಲ್ಲ. ಇದರಿಂದಲೇ ಮಹಾನ್ ಕಾವ್ಯ ಮಹಾಭಾರತವನ್ನ ಬರೆಯಲಾಗುತ್ತದೆ ಎಂದು ಪರಶುರಾಮರು ಹೇಳುತ್ತಾರೆ. ಇನ್ನು ದಂತ ತುಂಡಾಗಿ ಒಂದೇ ದಂತ ಉಳಿದಿದ್ದರಿಂದ ಗಣೇಶನಿಗೆ ಏಕದಂತ ಅಂತಲೂ ಕರೆಯಲಾಗುತ್ತದೆ.