ಇತ್ತೀಚೆಗಷ್ಟೇ ಮಡಿಕೇರಿಯಲ್ಲಾದ ಬಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿತ್ತು. ಇನ್ನು ತಲಾ ಕಾವೇರಿ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ನಾರಾಯಣ ಚಾರ್ ಅವರ ಕುಟುಂಬ ಬ್ರಹ್ಮಗಿರಿ ಗುಡ್ಡದಲ್ಲಿ ವಾಸವಾಗಿತ್ತು. ಬಾರೀ ಮಳೆ ಉಂಟಾದ ಕಾರಣ ಭೂಕುಸಿತದಿಂದಾಗಿ ಮನೆ ಸಮೇತ ನಾರಾಯಣ ಚಾರ್ ಅವರ ಕುಟುಂಬ ಭೂಸಮಾಧಿಯಾಗಿತ್ತು. ಇನ್ನು ವಿದೇಶದಲ್ಲಿ ವಾಸವಾಗಿದ್ದ ನಾರಾಯಣ ಚಾರ್ ಅವರ ಇಬ್ಬರು ಪುತ್ರಿಯರು ಘಟನೆ ಬಳಿಕ ಮಡಿಕೇರಿಗೆ ಬಂದಿದ್ದು ಸರ್ಕಾರದ ವತಿಯಿಂದ ಸಚಿವ ವಿ ಸೊಮ್ಮಣ್ಣನವರು ಇಬ್ಬರು ಪುತ್ರಿಯರಿಗೂ ತಲಾ ೨.೫ ಲಕ್ಷ ಮೌಲ್ಯದ ಪರಿಹಾರದ ಚೆಕ್ ನ್ನ ವಿತರಣೆ ಮಾಡಿದ್ದರು.
ನಾರಾಯಣ ಚಾರ್ ಅವರ ಇಬ್ಬರು ಪುತಿಯರಾದ ನಮಿತಾ ಆಚಾರ್, ಶಾರದಾ ಆಚಾರ್ ಅವರು ಈ ಪರಿಹಾರದ ಚೆಕ್ ನ್ನ ಪಡೆದಿದ್ದು ಈಗ ಹಿಂತಿರುಗಿಸಗಿದ್ದಾರೆ ಎನ್ನಲಾಗಿದೆ. ಹೌದು, ಇದಕ್ಕೆ ಕಾರಣವೂ ಇದೆ. ಈಗಾಗಲೇ ನಾರಾಯಣ ಚಾರ್ ಅವರ ಇಬ್ಬರು ಪುತ್ರಿಯರು ಬೇರೆ ಧರ್ಮಕ್ಕೆ ಮತಾಂತರವಾಗಿದ್ದು ಅವರ ಹೆಸರು ಚೇಂಜ್ ಆಗಿದೆ. ಇಬ್ಬರು ಪುತ್ರಿಯರು ವಿದೇಶದಿಂದ ಬಂದಾಗ ತಮ್ಮ ಪೋಷಕರು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಆ ದೂರಿನಲ್ಲಿ ನಮಿತಾ ಆಚಾರ್ ಹಾಗೂ ಶಾರದಾ ಆಚಾರ್ ಎಂದೇ ತಮ್ಮ ಹೆಸರನ್ನ ಬರೆದಿದ್ದರು.

ಬಳಿಕ ಅದೇ ಹೆಸರುಗಳಿಗೆ ಸ್ಥಳೀಯ ಜಿಲ್ಲಾಡಳಿತ ಚೆಕ್ ವಿತರಣೆ ಮಾಡಿದ್ದು ಈಗ ನಾರಾಯಣ ಚಾರ್ ಅವರ ಇಬ್ಬರು ಪುತ್ರಿಯರು ಆ ಚೆಕ್ ಗಳನ್ನ ಸ್ಥಳೀಯ ನಾಡಕಚೇರಿಗೆ ಹಿಂತಿರುಗಿಸಿದ್ದಾರೆ. ಅವರು ಅನ್ಯ ಧರ್ಮಕ್ಕೆ ಮತಾಂತರವಾದ ಕಾರಣ ಅವರ ಹೆಸರುಗಳು ನಮಿತಾ ನಜೇರತ್, ಶೆನೋನ್ ಫರ್ನಾಂಡಿಸ್ ಎಂಬುದಾಗಿ ಬದಲಾವಣೆ ಆಗಿದೆ. ಇನ್ನು ಈ ಹೆಸರುಗಳುಗೆ ಚೆಕ್ ನೀಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಹೆಸರು ಬದಲಾವಣೆ ಆಗಿರುವುದಕ್ಕೆ ಸೂಕ್ತ ದಾಖಲೆಗಳನ್ನ ನೀಡಿದಲ್ಲಿ ಆ ಚೆಕ್ ಗಳನ್ನ ನಾರಾಯಣ ಚಾರ್ ಇಬ್ಬರು ಪುತ್ರಿಯರಿಗೆ ಮರಳಿ ಕೊಡಲಾಗುವುದು ಎಂದು ಸ್ಥಳೀಯ ಜಿಲ್ಲಾಧಕಾರಿಗಳು ಹೇಳಿದ್ದಾರೆ.