Advertisements

ಬಾಲ್ಯದ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವಿನಾಯಕ್ ಜೋಶಿ..ವಧು ಮಾಡುತ್ತಿರುವ ಕೆಲಸ ಏನ್ ಗೊತ್ತಾ ?

Cinema

ಸ್ಯಾಂಡಲ್ವುಡ್ ಯುವ ನಟ ವಿನಾಯಕ್ ಜೋಶಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾ ಮಾತ್ರವಲ್ಲದೆ ಧಾರಾವಾಹಿಗಳಲ್ಲೂ ಮಿಂಚಿದ್ದು ನಿರೂಪಕನಾಗಿಯೂ ಕೆಲಸ ಮಾಡಿದ್ದಾರೆ. ಕನ್ನಡದ ಖ್ಯಾತ ರಿಯಾಲಿಟಿ ಷೋ ಬಿಗ್ ಬಾಸ್ ನಲ್ಲೂ ಕೂಡ ಸ್ಪರ್ಧಿಯಾಗಿದ್ದರು ವಿನಾಯಕ್ ಜೋಶಿ. ವೃತ್ತಿಯಲ್ಲಿ ನ್ಯಾಷನಲ್ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯೂ ಹಾಗೂ ಬಾಲ್ಯದ ಗೆಳತಿಯೂ ಆಗಿರುವ ವರ್ಷ ಬೆಳವಾಡಿ ಅವರ ಜೊತೆ ಇಂದು ಆಗಸ್ಟ್ ೨೮ ರಂದು ಶಾಸ್ತ್ರೋಕ್ತವಾಗಿ ವಿನಾಯಕ್ ಜೋಶಿ ಸಪ್ತಪದಿ ತುಳಿದಿದ್ದಾರೆ.

Advertisements

ಇನ್ನು ಶುಕ್ರವಾರದ ಈ ದಿನ ಬೆಂಗಳೂರಿನ ದೇವಾಲಯವೊಂದರಲ್ಲಿ ಹಿಂದೂ ಆರ್ಯಸಮಾಜದ ಪದ್ದತಿಯಂತೆ ಬೆಳಿಗ್ಗೆಯಿಂದಲೇ ಮದುವೆಯ ಶಾಸ್ತ್ರಗಳು ಆರಂಭವಾಗಿದ್ದು ೮.೪೫ ರಿಂದ ೯.೪೫ ರ ನಡುವಿನ ಶುಭಲಗ್ನದ ಶುಭ ಮಹೂರ್ತದಲ್ಲಿ ಮಾಂಗಲ್ಯ ಧಾರಣೆ ಕಾರ್ಯಕ್ರಮ ನಡೆದಿದೆ. ಕೊರೋನಾ ಹಿನ್ನಲೆಯಲ್ಲಿ ಸರಳವಾಗಿ ನಡೆದ ಈ ಮದುವೆಯಲ್ಲಿ ಕೇವಲ ಕುಟುಂಬ ವರ್ಗದವರು ಆಪ್ತಮಿತ್ರರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು ಎಂದು ಹೇಳಲಾಗಿದೆ.

ಇನ್ನು ವರ್ಷ ಬೆಳವಾಡಿ ವಿನಾಯಕ್ ಜೋಶಿ ಅವರಿಗೆ ಬಾಲ್ಯದಿಂದಲೇ ಪರಿಚಯ. ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿರುವ ವರ್ಷ ಸದ್ಯಕ್ಕೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಏಳೆಂಟು ವರ್ಷವಿದ್ದಾಗ ಇಬ್ಬರು ಡ್ಯಾನ್ಸ್ ಮಾಡಿದ್ದರಂತೆ. ಅದರ ಬಳಿಕ ಇಬ್ಬರು ಭೇಟಿಯಾಗಿರಲಿಲ್ಲ. ಆದರೆ ೨೫ ವರ್ಷಗಳ ನಂತರ ಸ್ನೇಹಿತರೊಬ್ಬರ ಮೂಲಕ ಇಬ್ಬರಿಗೂ ಮತ್ತೆ ಪರಿಚಯವಾಗಿದ್ದು ಅದು ಸ್ನೇಹವಾಗಿ ಪ್ರೀತಿಗೆ ತಿರುಗಿ ಇಂದು ನಾವು ಮದುವೆಯಾಗಿದ್ದೇವೆ ಎಂದು ತಮ್ಮ ಲವ್ ಸ್ಟೋರಿ ಬಗ್ಗೆ ಹೇಳಿದ್ದಾರೆ ವಿನಾಯಕ್ ಜೋಡಿ.