Advertisements

ಒಂದು ಕಾಲದಲ್ಲಿ ಟಾಪ್ ನಟಿಯರಾಗಿದ್ದ ಈ ನಟಿಯರು ಈಗ ಮಾಡುತ್ತಿರುವ ಕೆಲಸ ಏನು ಗೊತ್ತಾ ?

Cinema

ಬಣ್ಣದ ಲೋಕವೇ ಹಾಗೇ, ಕೆಲವೊಂದು ಸಾರಿ ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಆದರೇ ಎಷ್ಟೇ ಚಿತ್ರಗಳಲ್ಲಿ ನಟಿಸಿದ್ದರೂ ಒಂದೊಂದು ಅವಕಾಶಕ್ಕಾಗಿ ಕಾಯಬೇಕಾಗುತ್ತದೆ ನಟ ನಟಿಯರು. ಆದರೆ ಬದುಕುಲು ಸಿನಿಮಾ ಒಂದೇ ಅಲ್ಲ ಬದುಕುಲು ನೂರೆಂಟು ಅವಕಾಶಗಳಿವೆ ಎನ್ನುವ ಎಷ್ಟೋ ನಟಿಯರು ತಮಗೆ ಇಷ್ಟವಾಗುವ ಕೆಲಸಕ್ಕೆ ಕೈ ಹಾಕುತ್ತಾರೆ ಹಲವಾರು ನಟಿಯರು. ಒಂದು ಕಾಲಕ್ಕೆ ದೊಡ್ಡ ಪರದೆಯ ಮೇಲೆ ಮಿಂಚಿದವರು ಅವಕಾಶಗಳು ಇಲ್ಲದಿದ್ದಾಗ ಈಗ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ತಮ್ಮ ನಟನೆ ಜೊತೆ ಜೊತೆಗೆ ಟೀಚಿಂಗ್ ಕೂಡ ಮಾಡುವವರು ಅನೇಕರಿದ್ದಾರೆ.

ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ಶಿವ ಶಂಕರ್ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ನಟಿ ಶೋಭನಾ ತಮ್ಮ ನಟನೆ ಹಾಗೂ ನೃತ್ಯದಿಂದ ವೀಕ್ಷಕರನ್ನ ಮೂಕವಿಸ್ಮಿತರನ್ನಾಗಿ ಮಾಡಿದ್ದ ನಟಿ ಅಪ್ರತಿಮ ನಟಿಯಾಗಿದ್ದರು. ಇನ್ನು ಹತ್ತು ವರ್ಷಗಳ ಕಾಲ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಮಿಂಚಿದ ಶೋಭನಾ ಈಗ ತಾವು ನೆಲಸಿರುವ ಚೆನ್ನೈ ಮಹಾನಗರದಲ್ಲಿ ಡ್ಯಾನ್ಸ್ ಶಾಲೆಯೊಂದನ್ನ ಸ್ಥಾಪನೆ ಮಾಡಿದ್ದು ಮಕ್ಕಳಿಗೆ ನೃತ್ಯದ ತರಭೇತಿಯನ್ನ ಕೊಡುತ್ತಿದ್ದಾರೆ.

Advertisements

ಇನ್ನು ಕನ್ನಡ ಸೇರಿದಂತೆ ಹತ್ತು ಭಾಷೆಗಳಲ್ಲಿ ನಟಿಸಿರುವ ನಟಿ ನಂದಿತಾ ದಾಸ್ MSW ನಲ್ಲಿ ಪದವಿ ಮಾಡಿಕೊಡವರು. ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಈ ನಟಿಗೆ ನಟನೆಗಿಂತ ಟೀಚಿಂಗ್ ನಲ್ಲಿ ತುಂಬಾ ತೃಪ್ತಿ ಸಿಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಸಾಹಸಸಿಂಹ ವಿಷ್ಣುವರ್ಧನ್ ಅವರ ಪ್ರೇಮೋತ್ಸವ ಚಿತ್ರದಲ್ಲಿ ನಟಿಸಿದ್ದ ದೇವಯಾನಿ ತಮಿಳಿನ ಹಲವಾರು ಚಿತ್ರಗಳಲ್ಲಿ ಸ್ಟಾರ್ ನಟಿಸಿದ್ದಾರೆ. ಹಲವು ವರ್ಷಗಳ ಕಾಲ ಸ್ಟಾರ್ ನಟಿಯಾಗಿ ಮಿಂಚಿದ ಇವರು ನಿರ್ದೇಶಕರಾಗಿದ್ದ ರಾಜಕುಮಾರನ್ ಎಂಬುವರನ್ನ ವರಿಸುತ್ತಾರೆ.

ಆದರೆ ಬರ ಬರುತ್ತಾ ಇವರಿಗೆ ಅವಕಾಶಗಳು ಕಡಿಮೆಯಾಗುತ್ತಾ ಬಂತು. ಇತ್ತ ನಿರ್ದೇಶನ ಮಾಡುತ್ತಿದ್ದ ಪತಿಗೂ ಕೂಡ ಅವಕಾಶಗಳು ಇಲ್ಲದೆ ಹೋದವು. ಕೊನೆಗೆ ಬೇರೆ ದಾರಿ ಇಲ್ಲದೇ ಜೀವನ ನಡೆಸುವ ಸಲುವಾಗಿ ಚೆನ್ನೈನ ಶಾಲೆಯೊಂದರಲ್ಲಿ ಇಂಗ್ಲಿಷ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.