Advertisements

ಇಂದ್ರಜಿತ್ ಚಿರು ಸರ್ಜಾ ಮೇಲೆ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ಕೊಟ್ಟ ಮೇಘನಾ ರಾಜ್ ಹೇಳಿದ್ದೇನು ಗೊತ್ತಾ ?

Cinema

ಕಳೆದ ಎರಡು ಮೂರು ದಿನಗಳಿಂದ ಚಂದವನದಲ್ಲಿ ಕೆಟ್ಟ ಮದ್ದಿನ ಬಗ್ಗೆ ಕುರಿತಂತೆ ಸಿಕ್ಕಾಪಟ್ಟೆ ಚರ್ಚೆಗಳು ನಡೆಯುತ್ತಿವೆ. ಇನ್ನು ನಟ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಬಹಿರಂಗ ಮಾಡಿದ ಕೆಲವು ವಿಷಯಗಳಂತೂ ಸ್ಯಾಂಡಲ್ವುಡ್ ನಲ್ಲಿ ಬಿರುಗಾಳಿ ಎಬ್ಬಿಸಿದೆ. ಇನ್ನು ಇದರ ಬಗ್ಗೆ ಮಾತನಾಡಿದ್ದ ಇಂದ್ರಜಿತ್ ಲಂಕೇಶ್ ಸ್ಯಾಂಡಲ್ ವುಡ್ ನಲ್ಲಿ ಯಾವ ನಟ ನಟರಿಯರಿಗೆ ಕೆಟ್ಟ ಮದ್ದಿನ ಸಹವಾಸ ಇದೆ ಹಾಗೂ ಆ ತಂಡದೊಂದಿಗೆ ಯಾರೆಲ್ಲಾ ಶಾಮೀಲಾಗಿದ್ದಾರೆ ಎಂಬುದೆಲ್ಲಾ ನನಗೆ ತಿಳಿದಿದೆ. ನನಗೆ ರಕ್ಷಣೆ ಕೊಟ್ಟಲ್ಲಿ ನಾನೆಲ್ಲಾ ಬಹಿರಂಗ ಮಾಡುವೆ ಎಂದು ಅವರು ಹೇಳಿಕೆ ಕೊಟ್ಟಿದ್ದರು. ಇನ್ನು ಇದೆ ವೇಳೆ ಇತ್ತೀಚಿಗೆ ಸಾ’ವ’ನಪ್ಪಿದ ಯುವ ನಟನ ಮ’ರಣೋತ್ತರ ಪರೀಕ್ಷೆಯನ್ನ ಏಕೆ ಮಾಡಲಿಲ್ಲ..ರಾಜಕಾರಿಣಿಗಳ ಒತ್ತಡವಿತ್ತೇ..ಇಲ್ಲವೇ ಪೋಲೀಸರ ಒತ್ತಡವಿತ್ತೇ..ಎಂದು ಹೇಳಿಕೆ ಕೊಟ್ಟಿದ್ದರು.

ಆದರೆ ಇತ್ತೀಚಿಗೆ ತೀರಿಕೊಂಡ ನಟ ಚಿರು ಸರ್ಜಾ..ಹಾಗಾಗಿ ಈ ವಿಷಯದ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಇನ್ನು ಈ ವಿಷಯದ ಬಗ್ಗೆ ಚರ್ಚೆಗಳು ಹೆಚ್ಚಾಗುತ್ತಿದ್ದಂತೆ ಮೌನವಾಗಿದ್ದ ಚಿರು ಸರ್ಜಾ ಪತ್ನಿ ನಟಿ ಮೇಘನಾ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಜಗತ್ತನ್ನೇ ಬಿಟ್ಟು ಹೋದವರ ಮೇಲೆ ಈ ರೀತಿಯ ಆರೋಪ ಮಾಡುವುದು ಸರಿಯಲ್ಲ..ಚಿರು ಇದ್ದಿದ್ದರೆ ಅವರಿಗೆ ತಕ್ಕ ಉತ್ತರ ಕೊಡುತ್ತಿದ್ದರು. ಇಂದ್ರಜಿತ್ ಅವರು ಮಾಡಿರುವವ ಆರೋಪದಿಂದಾಗಿ ನನಗೆ ನಮ್ಮ ಕುಟುಂಬದವರಿಗೆ ಬಹಳ ನೋವಾಗಿದೆ ಎಂದು ಪ್ರಶಾಂತ್ ಸೊಂಬರ್ಗಿ ಅವರ ಜೊತೆ ವಾಟ್ಸಪ್ ಮೆಸೇಜ್ ಮೂಲಕ ತಮ್ಮ ನೋವನ್ನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

Advertisements

ಚಿರು ಸರ್ಜಾ ಅವರ ಫೋಟೋವನ್ನ ಟಿವಿಯಲ್ಲಿ ನೋಡಿದಾಕ್ಷಣ ನನ್ನ ಕಣ್ಣಲ್ಲಿ ನೀರು ಬರುತ್ತೆ. ಈ ಭೂಮಿ ಮೇಲೆ ಇಲ್ಲದೆ ಇರುವವರನ್ನು ಕೂಡ ಜನ ಬಿಡುತ್ತಿಲ್ಲ. ಇಂದ್ರಜಿತ್ ರವರು ಪರಿಸ್ಥಿತಿಯ ಲಾಭ ತೆಗೆದುಕೊಂಡು ಬೇರೆಯವರ ಹೆಸರನ್ನ ಹಾಳು ಮಾಡಬಾರದು ಎಂದು ಮೇಘನಾ ಹೇಳಿದ್ದಾರೆ. ಚಿರು ಸರ್ಜಾ ಅವರ ಹೆಸರನ್ನ ಇಂದ್ರಜಿತ್ ಏಕೆ ಬಳಸುಕೊಳ್ಳುತ್ತಿದ್ದಾರೋ ಎಂಬುದು ನಮಗೆ ಗೊತ್ತಾಗುತ್ತಿಲ್ಲ ಎಂದು ಮೇಘಾನಾ ಬೇಸರ ಹಾಗೂ ನೋವಿನಿಂದ ಮಾತನಾಡಿದ್ದಾರೆ.