Advertisements

ಸ್ಯಾಂಡಲ್ವುಡ್ ಎದ್ದಿರುವ ಬಿರುಗಾಳಿಗೆ ಮುರಿದುಬಿತ್ತು ಖ್ಯಾತ ಯುವ ನಟನ ಮದುವೆ !

Cinema

ಈಗ ಸ್ಯಾಂಡಲ್ವುಡ್ ನಲ್ಲಿ ಕೆಟ್ಟ ಮದ್ದಿನ ಜಾಲದ್ದೇ ಸುದ್ದಿ. ನಟ ನಟಿಯರು ಹಾಗೂ ಮೂರನೇ ತಲೆ ಮಾರಿನ ನಟರ ಮಕ್ಕಳು ಇದನ್ನ ಸೇವಿಸುತ್ತಿದ್ದಾರೆ, ರೇವ್ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂಬುದನ್ನ ನಿರ್ದೇಶಕ ಇಂದ್ರಜಿತ್ ಲಂಕೇಶ್ ರವರು ಬಹಿರಂಗ ಮಾಡಿದ್ದು, ಯಾರು ಎಂಬ ಹೆಸರುಗಳನ್ನ ಮಾತ್ರ ಹೇಳದೆ ರ’ಹಸ್ಯವಾಗಿಟ್ಟಿದ್ದಾರೆ. ಇನ್ನು ಈಗಿನ ನವ ನಟ ನಟಿಯರ ಮೇಲೆ ಈ ಆರೋಪ ಹೆಚ್ಚಾಗಿ ಕೇಳಿಬರುತ್ತಿದೆ. ಇನ್ನು ಈ ವಿಚಾರದಿಂದಾಗಿ ಸ್ಯಾಂಡಲ್ವುಡ್ ನಲ್ಲಿ ದೊಡ್ಡ ಬಿರುಗಾಳಿಯೇ ಎದ್ದಿದೆ. ಇನ್ನುಈ ವಿಷಯದಿಂದ ಅಮಾಯಕ ನಟ ನಟಿಯರ ಜೀವನ ಹಾಳಾಗುತ್ತಿರುವ ಘಟನೆಗಳು ಸಹ ಜರುಗುತ್ತಿವೆ..ಹೌದು, ಚಂದನವನದಲ್ಲಿ ಈ ವಿಚಾರ ಬಿರುಗಾಳಿಯಂತೆ ಹರಡುತ್ತಿದ್ದಂತೆ ನಟನ ಮದುವೆಯೊಂದು ಮುರಿದುಬಿದ್ದಿದೆ.

ಗೂಳಿಹಟ್ಟಿ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದ ಪವನ್ ಶೌರ್ಯ ಅವರ ಮದುವೆ ಮುಂದಿನ ತಿಂಗಳು ನಿಚ್ಚಯವಾಗಿತ್ತು. ಆದರೆ ಪವನ್ ಸಿನಿಮಾ ರಂಗದಲ್ಲಿ ಇರುವ ಕಾರಣ ಸದ್ಯಕ್ಕೆ ಸ್ಯಾಂಡಲ್ವುಡ್ ನಲ್ಲಿ ವಿವಾದ ಎಬ್ಬಿಸಿರುವ ವಿಚಾರವನ್ನೇ ಮುಂದಿಟ್ಟುಕೊಂಡು ಹೆಣ್ಣಿನ ಮನೆಯವರು ಆಗಬೇಕಾಗಿದ್ದ ಮದುವೆ ಕಾರ್ಯವನ್ನ ಕ್ಯಾನ್ಸಲ್ ಮಾಡಿದ್ದಾರಂತೆ. ಸ್ಯಾಂಡಲ್ವುಡ್ ನಲ್ಲಿ ಎದ್ದಿರುವವ ಈ ಬಿರುಗಾಳಿಯಿಂದಾಗಿ ಸಿನಿಮಾ ಮಂದಿಯನ್ನ ಅನುಮಾನ ದಿಂದ ನೋಡುತ್ತಿದ್ದಾರೆ.

Advertisements

ಈ ವಿಚಾರದಿಂದಾಗಿ ನಮ್ಮನ್ನ ನಂಬದ ಜನ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಮುಂದಿನ ತಿಂಗಳು ಇದ್ದ ನನ್ನ ಮದುವೆಗೆ ಎಲ್ಲಾ ಸಿದ್ದತೆಗಳು ನಡೆದಿದ್ದು ಈಗ ಮದುವೆ ಕ್ಯಾನ್ಸೆಲ್ ಆಗಿರುವ ಕಾರಣ ಮನೆಯವರು ಸಹ ಯಾವ ಸಿನಿಮಾನೂ ಬೇಡ, ಚಿತ್ರೀಕರಣಕ್ಕೂ ಹೋಗಬೇಡ ಎಂದು ಹೇಳಿದ್ದಾರೆ ಎಂದು ಯುವ ನಟ ಪವನ್ ನೋವಿನಿಂದ ಹೇಳಿದ್ದಾರೆ. ಈಗ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ನಿರ್ದೇಶನದ 786 ಎಂಬ ಚಿತ್ರದಲ್ಲಿ ನಟಿಸುತ್ತಿರುವ ಪವನ್ ಗೂಳಿಹಟ್ಟಿ ಸೇರಿದಂತೆ ಹಾಲು ತುಪ್ಪ ದಂತಹ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.