Advertisements

ವಯಸ್ಸು ಕೇವಲ 30 ಓದಿದ್ದು ಪಿಯುಸಿ..ಆದ್ರೆ ಒಂದೇ ವರ್ಷದಲ್ಲಿ 60 ಕೋಟಿ ಸಂಪಾದನೆ ! ಇದೆಲ್ಲಾ ಆಗಿದ್ದೇಗೆ ನೋಡಿ

Inspire

ನಮಸ್ತೇ ಸ್ನೇಹಿತರೇ, ಸಾಧನೆ ಮಾಡಲು ವಯಸ್ಸಾಗಲಿ, ವಿದ್ಯಾಭ್ಯಾಸವಾಗಲಿ ಅಡ್ಡಿಯಾಗುವುದಿಲ್ಲ. ತಾನು ಏನಾದರೂ ಸಾಧಿಸಲೇಬೇಕು ಎಂಬ ಛಲ ಇದ್ದಾರೆ ಸಾಕು. ನಾವು ಜೀವನದಲ್ಲಿ ಯಾವ ಸ್ಥಾನಕ್ಕಾದರೂ ಹೋಗಬಹುದು. ಇದಕ್ಕೆ ಹಲವಾರು ನೈಜ ನಿದರ್ಶನಗಳು ನಮ್ಮ ನಡುವೆ ಇವೆ. ಕೇವಲ ೩೦ ವರ್ಷದ ದೀಪಾಲಿ ಎಂಬ ಯುವತಿ ಯುವಜನತೆಗೆ ಒಂದು ನೈಜ ನಿದರ್ಶನವಾಗಿದ್ದಾರೆ. ಹೌದು, ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಹುಟ್ಟಿದ ಈಕೆ ಚಿಕ್ಕ ವಯಸ್ಸಿನಲ್ಲೇ ಮಾಡಿದ ಸಾಧನೆ ದೊಡ್ಡದು. ಎಲ್ಲರಂತೆ ದೀಪಾಲಿಯ ತಂದೆಯೂ ಕೂಡ ತನ್ನ ಮಗಳನ್ನ ಮುದ್ದಾಗಿ ಸಾಕುತ್ತಿದ್ದರು. ತನ್ನ ಮಗಳು ಚೆನ್ನಾಗಿ ಓದಿ ಉನ್ನತ ಪದವಿಯನ್ನ ಹೊಂದಬೇಕು ಎಂಬುದು ಅವರ ಆಶಯವಾಗಿತ್ತು.

ಆದರೆ ನಾವು ಮನುಷ್ಯರು..ನಾವಂದುಕೊಂಡಂತಯೇ ಯಾವುದು ನಡೆಯುವುದಿಲ್ಲ. ಅದರಂತೆ ದೀಪಾಲಿ ತಂದೆ ತಾವು ಮಾಡುತ್ತಿದ್ದ ವ್ಯವಹಾರದಲ್ಲಿ ಕೈಸು’ಟ್ಟುಕೊಳ್ಳುತ್ತಾರೆ. ಇನ್ನು ಇದೆ ಸಂದರ್ಭದಲ್ಲಿ ದೀಪಾಲಿ ಪಿಯುಸಿ ಓದುತ್ತಿರುತ್ತಾಳೆ. ಆದರೆ ವ್ಯವಹಾರದಲ್ಲಿ ನಷ್ಟ ಉಂಟಾದ ಕಾರಣ ದೀಪಾಲಿಯ ತಂದೆಗೆ ತನ್ನ ಮಗಳಿಗೆ ಶಿಕ್ಷಣ ಕೊಡಿಸುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ. ಇನ್ನು ತನ್ನ ತಂದೆಯ ಪರಿಸ್ಥಿತಿಯನ್ನ ಕಂಡ ದೀಪಾಲಿ ಓದುವುದನ್ನ ನಿಲ್ಲಿಸುತ್ತಾಳೆ. ಮನೆಯ ನಿರ್ವಹಣೆ ಮಾಡಲೇಬೇಕಾದ ಕಾರಣ ಟಿಫಿನ್ ಮಾಡಿ ಮಾರುವುದು, ಹಾಸ್ಟೆಲ್ ಗೆ ಊಟ ಮಾಡಿಕೊಡುವುದು ಹೀಗೆ ಕೆಲಸ ಮಾಡಿಕೊಂಡು ಬಂದ ಹಣದಲ್ಲಿ ಮನೆಯ ಜವಾಬ್ದಾರಿಯನ್ನ ನೋಡಿಕೊಳ್ಳುತ್ತಿರುತ್ತಾಳೆ.

Advertisements

ಆದರೆ ತಾನು ಎಷ್ಟೇ ದುಡಿದರೂ ಬಂದದ್ದೆಲ್ಲಾ ಮನೆಯ ಖರ್ಚಿಗೆ ಸರಿಹೋಗುತಿತ್ತೇ ವಿನಃ ಕೈನಲ್ಲಿ ಪುಡಿಗಾಸು ಸಹ ಉಳಿಯುತ್ತಿರಲಿಲ್ಲ. ಆಗ ಬೇರೆ ಕಡೆ ಎಲ್ಲಿಯಾದರೂ ಹೋಗಿ ಕೆಲಸ ಮಾಡಿ ಚೆನ್ನಾಗಿ ಸಂಪಾದನೆ ಮಾಡಬೇಕು ಎಂದು ಯೋಚನೆ ಮಾಡಿದ ದೀಪಾಲಿ ಇಂದೋರ್ ಗೆ ಹೋಗಿ ದಾಸ್ತಾನು ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡು ಕೆಲಸ ಮಾಡುತ್ತಿರತ್ತಾಳೆ. ಇನ್ನು ಇದೇ ವೇಳೆ ದೀಪಾಲಿಗೆ ಒಂದು ಐಡಿಯಾ ಹೊಳೆಯುತ್ತದೆ. ಅಲ್ಲಿ ಮಾರುಕಟ್ಟೆಯ ವ್ಯವಹಾರಗಳನ್ನು ನೋಡುತ್ತಿದ್ದ ದೀಪಾಲಿಗೆ ತಾನೇಕೆ ಮಧ್ಯವರ್ತಿಯಾಗಿ ಕೆಲಸ ಮಾಡಬಾರದು ಎಂಬ ಯೋಚನೆ ಹೊಳೆಯುತ್ತದೆ. ತಾನು ಯೋಚನೆ ಮಾಡಿದಂತೆ ನಿರ್ಧಾರ ಮಾಡಿದ ದೀಪಾಲಿ ಕಮೋಡಿಟಿ ಮತ್ತು ಗೋಧಿ ವ್ಯಾಪಾರದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಲು ಶುರುಮಾಡುತ್ತಾಳೆ.

ಇನ್ನು ಈ ಪ್ರಪಂಚನಾ ಆಗೇ..ಯಾವುದೇ ವ್ಯವಹಾರವನ್ನ ಕೈಗೆತ್ತಿಕೊಂಡಾಗ ನೋಡಿ ಆಡಿಕೊಳ್ಳುವವರೇ ಹೆಚ್ಚು. ಹಾಗೆಯೆ ಕೇವಲ ಗಂಡಸರೇ ಮಾಡುತ್ತಿದ್ದ ಈ ಟ್ರೇಡಿಂಗ್ ಕೆಲಸವನ್ನ ದೀಪಾಲಿ ಶುರು ಮಾಡಿದ್ದನ್ನ ನೋಡಿ ಪ್ರೋತ್ಸಾಹಿಸುವುದಕ್ಕಿಂದ ಆಡಿಕೊಂಡವರೇ ಹೆಚ್ಚು. ಆದರೆ ಇದ್ಯಾವುದಕ್ಕೂ ಜಗ್ಗದ ದೀಪಾಲಿ ತಾನು ಮಾಡುವ ಕೆಲಸದ ಕಡೆ ಗಮನಹರಿಸುತ್ತಾಳೆ. ದಿನದಿಂದ ದಿನಕ್ಕೆ ತನ್ನ ಆಧಾಯವನ್ನ ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಾಳೆ.

ಇನ್ನು ತನ್ನದೇ ಆದ ಟ್ರೇಡಿಂಗ್ ಫಾರ್ಮ್ ಕೂಡ ಶುರುಮಾಡುತ್ತಾಳೆ. ಕೇವಲ ೩೦ ವರ್ಷದ ದೀಪಾಲಿ ಒಂದೇ ವರ್ಷದಲ್ಲಿ ೬೦ ಕೋಟಿಯ ವ್ಯವಹಾರವನ್ನ ಮಾಡಿ ಎಲ್ಲರೂ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತಾಳೆ. ಬರೀ ಪಿಯುಸಿ ಓದಿರುವ ದೀಪಾಲಿ ತಾನು ತೆಗೆದುಕೊಂಡ ನಿರ್ಧಾರ ಹಾಗೂ ಬುದ್ದಿವಂತಿಕೆಯಿಂದ ಇಂದು ಕೋಟ್ಯಾಂತರ ರೂಪಾಯಿಗಳನ್ನ ಸಂಪಾದನೆ ಮಾಡುವ ಮೂಲಕ, ತಾನು ಓದಿಲ್ಲ ತನ್ನ ಕೈನಲ್ಲಿ ಏನೂ ಆಗೋದಿಲ್ಲ ಎನ್ನುವ ಎಷ್ಟೋ ಯುವಜನತೆಗೆ ಮಾದರಿಯಾಗಿದ್ದಾಳೆ ಎಂದರೆ ತಪ್ಪಾಗೊದಿಲ್ಲ.