Advertisements

ಮೂರು ವರ್ಷದ ಪುಟ್ಟ ಮಗುವನ್ನ 100 ಅಡಿ ಎತ್ತರಕ್ಕೆ ಹಾರಿಸಿಕೊಂಡು ಹೋದ ಗಾಳಿಪಟ !

News

ಸ್ನೇಹಿತರೇ, ಗಾಳಿಪಟ ಹಾರಿಸುವುದು ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಅಚ್ಚುಮೆಚ್ಚಿನ ಆಟ. ಆದರೆ ಮಕ್ಕಳು ಗಾಳಿಪಟ ಹಾರಿಸುತ್ತಿರುವಾಗ ಅವರನ್ನೇ ಮೇಲಕ್ಕೆ ಎತ್ತಿಕೊಂಡು ಹೋಗಿಬಿಟ್ಟರೆ..ಇದನ್ನ ನೀವು ನಂಬುತ್ತೀರಾ..ಆದರೆ ನಂಬಲೇಬೇಕು. ಗಾಳಿಪಟ ಹಾರಾಟದ ವೇಳೆ ಮೂರೂ ವರ್ಷದ ಮಗುವನ್ನ ಗಾಳಿಪಟ ಎತ್ತಿಕೊಂಡು ಹೋದ ಘಟನೆ ತೈವಾನ್ ನಲ್ಲಿ ನಡೆದಿದೆ.

ತೈವಾನ್ ನಲ್ಲಿ ಗಾಳಿಪಟ ಉತ್ಸವವನ್ನ ಮಾಡಲಾಗಿದ್ದು ಹಲವು ಬಗೆಯ ದೊಡ್ಡ ದೊಡ್ಡ ಆಕೃತಿಯ ಗಾಳಿಪಟಗಳನ್ನ ಹರಿಸಲಾಗುತಿತ್ತು. ಇನ್ನು ಮಕ್ಕಳಿಗೆ ಇದನ್ನ ನೋಡುವುದೇ ಒಂದು ಸಂಭ್ರಮವಲ್ಲವೇ..ಹಾಗಾಗಿ ಮಕ್ಕಳು ಆಕಾಶದಲ್ಲಿ ಹಾರುತ್ತಿದ್ದ ಗಾಳಿಪಟಗಳನ್ನ ನೋಡಿ ಮಕ್ಕಳ ಸಂಭ್ರಮ ಪಡುತ್ತಿದ್ದರು. ಆದರೆ ಇದೇ ವೇಳೆ ಮೂರು ವರ್ಷದ ಗಾಳಿಪಟದೊಂದಿಗೆ ಹಾರಿಹೋದ ಘಟನೆ ನಡೆದಿದೆ. ಮಗು ಗಾಳಿಪಟದೊಂದಿಗೆ ಹಾರುತ್ತಿರುವ ಈ ವಿಡಿಯೋ ನೋಡಿ..

ಇದ್ದಕಿದ್ದಂತೆ ಜೋರಾದ ಗಾಳಿ ಬೀಸಲು ಆರಂಭವಾಗಿದ್ದು ದೈತ್ಯಾಕಾರದ ದೊಡ್ಡ ಗಾಳಿಪಟವೊಂದು ಮಗುವನ್ನ ಬರೋಬ್ಬರಿ ೧೦೦ ಅಡಿ ಎತ್ತರಕ್ಕೆ ಹಾರಿಸಿಕೊಂಡು ಹೋಗಿದೆ. ಆದರೆ ನೋಡುತ್ತಿದ್ದವರು ಏನೂ ಮಾಡಲಾಗದೆ ಮಗು ಎಲ್ಲಿ ಕೆಳಗೂ ಬರುತ್ತಿದೆಯೋ ಎಂಬುದನ್ನ ಕಾದು ನೋಡುತ್ತಿದ್ದರು. ಕೊನೆಗೆ ನಿಯಂತ್ರಣಕ್ಕೆ ಬಂದ ಗಾಳಿಪಟವನ್ನ ಎಳೆದುಕೊಂಡು ಮಗುವನ್ನ ರಕ್ಷಣೆ ಮಾಡಿದ್ದಾರೆ. ಆದರೆ ಇದೆ ವೇಳೆ ಆ ಮಗುವಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾಳೆ ಎಂದು ಹೇಳಲಾಗಿದೆ.