Advertisements

35 ವರ್ಷದಿಂದ ಭಿಕ್ಷೆ ಬೇಡುತಿದ್ದವನ ಜೀವನ ಒಬ್ಬ ಹುಡುಗಿಯಿಂದ ಬದಲಾಗಿ ಹೋಯ್ತು.. ಅದು ಹೇಗೆ ಗೊತ್ತಾ?

Kannada Mahiti

ರವಿ ಕಾಣದ್ದನ್ನು ಕವಿಕಂಡ ಅಂತ ಅನ್ನೋ ಒಂದು ಮಾತಿದೆ. ಅಂದ್ರೆ ಅಕ್ಷರದ ಮೇಲೆ ಹಿಡಿತವಿರುವ ವ್ಯಕ್ತಿಯ ಸುಂದರ ಕಲ್ಪನೆಗೆ ಸಾಹಿತ್ಯವನ್ನು ಬಳಸಿಕೊಂಡು ಆತ ಒಂದು ವಿಚಾರವನ್ನು ನೋಡಿ ಅರ್ಥೈಸಿಕೊಂಡು ಅದನ್ನು ಪದಗಳಾಗಿ ಇಳಿಸುವ ಬಗೆಯಿದ್ಯಲ್ಲ ಅದು ಸುಂದರ.. ಒಬ್ಬ ವ್ಯಕ್ತಿ ರದ್ದಿ ಕಾಗದದಲ್ಲಿ ತೋಚಿದ್ದು ಗೀಚಿ, ಹೊಟ್ಟೆಪಾಡಿಗಾಗಿ ಇತರರ ಬಳಿ ಬೇಡಿ ತಿನ್ನುತ್ತಿದ್ದ ಬಿಕ್ಷುಕನಿಗೆ ಇವತ್ತು ಫೇಸ್‌ಬುಕ್ ಅನ್ನೋ ಮಾಧ್ಯಮದಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ತನ್ನಲ್ಲಿದ್ದಂತಹ ಸಾಹಿತ್ಯವನ್ನು ಬರೆದು ಬರೆದು ಆತ ಸಾಸಿರ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದು ಹೇಗೆ ಗೊತ್ತಾ? ಅಷ್ಟಕ್ಕೂ ಭಿಕ್ಷುಕ ಹೇಗೆ ಫೇಸ್‌ಬುಕ್ ಯುಸ್ ಮಾಡ್ತಾನೆ ಎಲ್ಲವನ್ನು ಹೇಳ್ತೀವಿ.

[widget id=”custom_html-3″]

Advertisements

ಈತನ ಹೆಸರು ರೈಮುಂಡೋ ಅರುಡಾ ಸುಬ್ರಿನೋ ಮೂಲತಃ ರಷ್ಯಾದವನಾದ ಈತ ಬದುಕಿಗಾಗಿ ಕೆಲಸ ಹುಡುಕಿಕೊಂಡು ಬ್ರೆಜಿಲ್‌ಗೆ ಬರುತ್ತಾನೆ, ಬರೆಯುವ ತವಕ ಓದುವ ಆಸರ ಇವೆಲ್ಲವೂ ಈ ಸುಬ್ರೀನೋಗೆ ಚಿಕ್ಕವಯಸ್ಸಿನಿಂದಲೇಯಿತ್ತು. ಆದರೆ ಓದು ತಲೆಗೆ ಹತ್ತದ ಕಾರಣ ಈತ ಜಾಸ್ತಿ ಓದಿರಲಿಲ್ಲ, ಆದರೆ ಯಾವಾಗ ಸಮಯ ಸಿಗುತ್ತೋ ಆಗೆಲ್ಲ ಕಾದಂಬರಿ ಕತೆಗಳನ್ನು ಓದಿಕೊಂಡು ಕೂರುತ್ತಿದ್ದ. ಬ್ರೆಜಿಲ್‌ನಲ್ಲಿಯೂ ಸಹ ಮಾಲಿಯಾಗಿ, ಪುಸ್ತಕ ವ್ಯಾಪಾರಿಯಾಗಿಯೇ ಬದುಕು ಸಾಗಿಸಿಕೊಂಡಿದ್ದ. ಅದು ಬ್ರೆಜಿಲ್‌ನ 80ರ ದಶಕ ಹಲವು ರಾಜಕೀಯ ವಿದ್ಯಾಮಾನಗಳಿಗೆ ಬ್ರೆಜಿಲ್ ಸಾಕ್ಷಿಯಾಗಿತ್ತು. ಮಿಲಿಟರಿ ಪಡೆಗಳ ಆಡಳಿತ ಅಂತ್ಯಕ್ಕಾಗಿ ಹೋರಾಡುತ್ತಿದ್ದ ಕಾಲವದು..

[widget id=”custom_html-3″]

ಆ ಕಾಲದಲ್ಲಾದ ರಾಜಕೀಯ ವಿದ್ಯಾಮಾನಗಳಿಗೆ ಹಲವರ ಬದುಕು ಅಕ್ಷರಶಃ ಹಾಳಾಗಿ ಹೋಗಿತ್ತು. ಅಂತಹದ್ದೇ ಹಲವರ ಮಧ್ಯೆ ಈ ಸುಬ್ರೀನೋ ಸಹ ಓರ್ವನಾಗಿದ್ದ. ಈತ ಬದುಕಿಗಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ, ಕೊನೆಗೆ ಯಾವುದೇ ಕೆಲಸ ಸಿಗದೇ ಭಿ’ಕ್ಷೆ ಎತ್ತಿ ಬದುಕು ಸಾಗಿಸಲು ಶುರು ಮಾಡಿದ. ಇನ್ನು ಎಲ್ಲ ಭಿಕ್ಷುಕರಿಗಿಂತಲೂ ಈ ರೈಮುಂಡೋ ಅರುಡಾ ಸುಬ್ರಿನೋ ಕೊಂಚ ಭಿನ್ನನಾಗಿದ್ದ. ಸಿಕ್ಕ ಸಿಕ್ಕ ರದ್ದಿ ಕಾಗದಗಳಲ್ಲಿ ತನ್ನದೇ ಆದ ಭಾವಗಳನ್ನು ನೋಡಿಸಿ ಸಾಕಷ್ಟು ಕತೆ, ಕವನ ಲೇಖನಗಳನ್ನು ಬರೆದಿಟ್ಟುಕೊಂಡಿದ್ದ. ಇವನ ಈ ಹವ್ಯಾಸವನ್ನು ಒಮ್ಮೆ ಒಬ್ಬಳು ಹುಡುಗಿ ಗಮನಿಸ್ತಾಳೆ. ಶೆಲ್ಲಾ ಎಂಬ ಹುಡುಗಿ ಈತನನ್ನು ಗಮನಿಸಿ ಹತ್ತಿರ ಬಂದು ಮಾತನಾಡಿಸುವ ಪ್ರಯತ್ನ ಮಾಡ್ತಾಳೆ..

[widget id=”custom_html-3″]

ಆದ್ರೆ 35 ವರ್ಷಗಳಿಂದ ಯಾರೊಂದಿಗೆ ಮಾತನಾಡದೇ ಕೇವಲ ಕಾಗದ ಪೆನ್ನಿನ ಜೊತೆ ಸಂಭಾಷಣೆ ಮಾಡುತ್ತಿದ್ದ ಸುಬ್ರಿನೋ ಆಕೆಯೊಂದಿಗೆ ಮಾತನಾಡಲು ಹಿಂಜರಿಯುತ್ತಾನೆ, ಕ್ರಮೇಣ ಮಾತು ಆರಂಭಿಸಿ ತನ್ನ ಕತೆಯನ್ನೆಲ್ಲ ಹೇಳುತ್ತಾನೆ, ಇದನ್ನು ಕೇಳಿ ಗದ್ಗದಿತಳಾದ ಶೆಲ್ಲಾ ಸುಬ್ರಿನೋ ಬದುಕನ್ನು ಅವಳ ಪ್ರತಿಭೆಯನ್ನು ಹೇಗಾದರೂ ಮಾಡಿ ಜಗತ್ತಿಗೆ ತೋರಿಸಬೇಕು ಅಂತ ಪಣ ತೊಡುತ್ತಾಳೆ, ಹಾಗೇ ಆತನ ಹೆಸರಲ್ಲಿ ಒಂದು ಫೇಸ್‌ಬುಕ್ ಪೇಜ್‌ಕ್ರಿಯೇಟ್ ಮಾಡಿ ಆತನ ಫೋಟೋ, ಹಾಗೂ ವೀಡಿಯೋವನ್ನು ಆ ಪೇಜ್‌ಲ್ಲಿ ಅಪ್ಲೋಡ್ ಮಾಡುತ್ತಾಳೆ..

[widget id=”custom_html-3″]

ದಿನಕಳೀತಾ ಆತನ ಲೇಖನಗಳಿಗೆ ಕೆಲ ಬ್ರೆಜಿಲ್ ಮಾತ್ರವಲ್ಲದೇ ಹೊರ ದೇಶಗಳಿಂದ ಸಹ ಅಪಾರ ಬೇಡಿಕೆ ಬಂತು. ಲಕ್ಷಾಂತರ ಅಭಿಮಾನಿಗಳನ್ನು ಸುಬ್ರಿನೋ ಗಳಿಸುತ್ತಾ ಹೋದ. ನಂತರದ ದಿನಗಳಲ್ಲಿ ಈ ಪೇಜ್ ಮುಖಾಂತರ ಸುಬ್ರಿನೋ ಬದುಕಿಗೆ ಹಣ ಸಹ ಕೊಡಲಾರಂಭಿಸಿದ್ರು. ಜೊತೆಗೆ ಈತನ ಅಣ್ಣನೋರ್ವ ಈ ಪೇಜ್ ಮುಖಾಂತರ ಸುಬ್ರಿನೋ ಗುರಿತಿಸಿ ಕುಟುಂಬ ಸಹ ಸುಬ್ರಿನೋಗೆ ದೊರೆತಿದೆ. 35 ವರ್ಷಗಳ ಕಾಲ ಭಿಕ್ಷೆ ಎತ್ತಿ ರದ್ದಿ ಕಾಲದಲ್ಲಿ ಗೀಚುತ್ತಿದ್ದ ಸುಬ್ರಿನೋ ಬದುಕು ಶೆಲ್ಲಾಳ ಔದಾರ್ಯ, ಒಳ್ಳೆ ಮನಸ್ಸಿಂದ ಬದಲಾಯ್ತು. ಈಗ ಸುಬ್ರೀನೋಗೆ ಮನೆಯಿದೆ, ತನ್ನದೆಂಬ ಕುಟುಂಬವಿದೆ, ತನ್ನನ್ನು ಪ್ರೀತಿಸುವ ಜನ ಸಹ ಇದ್ದಾರೆ..