Advertisements

2ನೇ ಮದುವೆಗಾಗಿ ತಮಿಳು ನಟನ ಜೊತೆ ನಿಚ್ಚಿತಾರ್ಥ ಮಾಡಿಕೊಂಡ ಖ್ಯಾತ ಬ್ಯಾಂಡ್ಮಿಂಟನ್ ಆಟಗಾರ್ತಿ

Sports

ಭಾರತದ ಖ್ಯಾತ ಮಾಜಿ ಬಾಟ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಕಾಲಿವುಡ್ ನಟನ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ತಮಿಳು ನಟ ವಿಶಾಲ್ ಜೊತೆ ಜ್ವಾಲಾ ಗುಟ್ಟಾ ಸೋಮವಾರದಂದು ನಿಚ್ಚಿತಾರ್ಥ ಮಾಡಿಕೊಂಡಿದ್ದು ನಿಚ್ಚಿತಾರ್ಥ ಸಂಭ್ರಮದ ಫೋಟೋಗಳನ್ನ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿಯರಲ್ಲಿ ಜ್ವಾಲಾ ಗುಟ್ಟಾ ಕೂಡ ಪ್ರಮುಖ ಆಟಗಾರ್ತಿಯಾಗಿದ್ದರು. ಆದರೆ ಈ ಮೊದಲೇ ಮದುವೆಯಾಗಿರುವ ಜ್ವಾಲಾ ಗುಟ್ಟಾ ಎರಡನೇ ಬಾರಿ ಸಪ್ತಪದಿ ತುಳಿಯಲಿದ್ದಾರೆ. ಹೌದು, ೨೦೦೫ರಲ್ಲಿ ಬ್ಯಾಂಡ್ಮಿಂಟನ್ ಆಟಗಾರ ಚೇತನ್ ಆನಂದ್ ಎಂಬುವವರ ಜೊತೆ ಜ್ವಾಲಾ ಗುಟ್ಟಾ ಅವರು ವಿವಾಹವಾಗಿದ್ದರು.

ಆದರೆ ವೈಯುಕ್ತಿಕ ಕಾರಣಗಳಿಂದಾಗಿ ೨೦೧೧ ರಲ್ಲಿ ಜ್ವಾಲಾ ಹಾಗೂ ಚೇತನ್ ಆನಂದ್ ಅವರ ನಡುವೆ ಡೈವರ್ಸ್ ಆಗಿತ್ತು. ಇನ್ನು ತಮಿಳು ನಟ ವಿಶಾಲ್ ಗೂ ಇದು ಮೊದಲನೇ ಮದುವೆ ಏನಲ್ಲ..ತಾನು ಪ್ರೀತಿಸುತ್ತಿದ್ದ ರಜನಿ ಎಂಬುವವರ ೨೦೧೧ರಲ್ಲಿ ಮದುವೆಯಾಗಿದ್ದ ವಿಶಾಲ್ ಕಳೆದ ವರ್ಷ ೨೦೧೯ರಲ್ಲಿ ಇವರೂ ಕೂಡ ವಿಚ್ಚೇಧನ ಪಡೆದಿದ್ದಾರೆ. ಇನ್ನು ನಟ ವಿಶಾಲ್ ಗೆ ಆರ್ಯನ್ ಎಂಬುವ ಮಗ ಕೂಡ ಇದ್ದಾನೆ. ಇನ್ನು ಈಗ ಜ್ವಾಲಾ ಅವರ ಜೊತೆ ಎರಡನೇ ಮದುವೆಯಾಗುತ್ತಿರುವ ನಟ ವಿಶಾಲ್ ಒಟ್ಟಾಗಿ ಜೀವನ ಸಾಗಿಸೋಣ ಎಂದು ಟ್ವೀಟ್ ಮಾಡಿದ್ದಾರೆ.

Advertisements

ಇನ್ನು ನೆನ್ನೆಯಷ್ಟೇ ಅಂದರೆ ಸೋಮವಾರ ಏಳನೇ ತಾರೀಖಿನಂದು ಜ್ವಾಲಾ ಗುಟ್ಟಾ ಅವರ ಹುಟ್ಟುಹಬ್ಬವಾಗಿದ್ದು ನಟ ವಿಶಾಲ್ ಜ್ವಾಲಾಗೆ ರಿಂಗ್ ತೊಡಿಸುವ ಮೂಲಕ ನಿಚ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ನು ಅರ್ಜುನ ಪ್ರಶಸ್ತಿ ವಿಜೇತರೂ ಆಗಿರುವ ಜ್ವಾಲಾ ಗುಟ್ಟಾ ಮತ್ತು ನಟ ವಿಶಾಲ್ ಅವರ ನಿಚಿತಾರ್ಥಕ್ಕೆ ಅಭಿಮಾನಿಗಳು ಸೇರಿದಂತೆ ಚಿತ್ರರಂಗದವರು ಶುಭ ಹಾರೈಸಿದ್ದಾರೆ.