Advertisements

ಹೋಟೆಲ್ ಮಾಲೀಕನ ಈ ಒಂದು ಐಡಿಯಾದಿಂದ ಲಕ್ಷ ಲಕ್ಷ ಸಂಪಾದನೆ !

News

ಕೊರೋನಾ ಸೋಂಕಿನ ಹಾವಳಿ ಲಾಕ್ ಡೌನ್ ನಿಂದಾಗಿ ಇಡೀ ಜಗತ್ತಿನಾದ್ಯಂತ ಎಲ್ಲಾ ಉದ್ಯಮಗಳು ನೆಲಕಚ್ಚಿವೆ. ಅದರಲ್ಲೂ ಹೋಟೆಲ್ ಉದ್ಯಮಕ್ಕಂತೂ ಬಾರೀ ಹೊಡೆತ ಕೊಟ್ಟಿದೆ. ಇನ್ನು ಇದೀಗ ನಿಧಾನವಾಗಿ ಹೋಟೆಲ್ ಉದ್ಯಮಗಳು ಶುರುವಾಗುತ್ತಿದ್ದು ಗ್ರಾಹಕರನ್ನ ಸೆಳೆಯುವ ಸಲುವಾಗಿ ಹೋಟೆಲ್ ಮಾಲೀಕರು ವಿಭಿನ್ನಾ ರೀತಿಯ ಐಡಿಯಾಗಳಿಗೆ ಮೊರೆ ಹೋಗಿದ್ದಾರೆ. ಇನ್ನು ಈಗಂತೂ ಹೋಮ್ ಡೆಲಿವರಿ ಮೂಲಕ ಸುರಕ್ಷಿತವಾಗಿ ಉತ್ತಮವಾದ ಊಟವನ್ನ ಗ್ರಾಹಕರ ಮನೆ ತಲುಪಿಸವುದು ಹೋಟೆಲ್ ಗಳಿಗೆ ಸಾಮಾನ್ಯವಾಗಿಬಿಟ್ಟಿದೆ.

ಇನ್ನು ಜಪಾನ್ ನಲ್ಲಿರುವ ಹೋಟೆಲ್ ಒಂದು ಗ್ರಾಹಕರನ್ನ ಗಳಿಸುವ ಸಲುವಾಗಿ ವಿಭಿನ್ನ ರೀತಿಯಲ್ಲಿ ಐಡಿಯಾ ಮಾಡಿ ಯಶಸ್ವಿಯಾಗಿದೆ. ಹೌದು ಜಪಾನ್ ದೇಶದಲ್ಲಿರುವ ಸುಶಿ ಎನ್ನುವ ರೆಸ್ಟೋರೆಂಟ್ ಒಂದು ಯಾರೂ ಯೋಚನೆ ಮಾಡದ ರೀತಿಯಲ್ಲಿ ಯೋಚಿಸಿ ಬಾಡಿ ಬಿಲ್ಡರ್ಸ್ ಗಳ ಮೂಲಕ ಗ್ರಾಹಕರ ಮನೆಗೆ ಫುಡ್ ಡೆಲಿವರಿ ಮಾಡುತ್ತಿದೆ. ಇನ್ನು ಇದಕ್ಕಾಗಿಯೇ ಇಲ್ಲಿನ ಜನರು ಈ ರೆಸ್ಟೋರೆಂಟ್ ನ್ನ ಡೆಲಿವರಿ ಮಾಚೋ ಅಂತ ಕರೆಯುತ್ತಾರೆ. ಇನ್ನು ಈ ವಿಭಿನ್ನವಾದ ಐಡಿಯಾ ಮಾಡಿದ್ದು ಆ ಹೋಟೆಲ್ ನ ಮಾಲೀಕ.

Advertisements

ಹೌದು, ಮಸನೋರಿ ಸೂಗ್ಯೂ ಎನ್ನುವ ೪೧ ವರ್ಷದ ಹೋಟೆಲ್ ಮಾಲೀಕ ಈ ಐಡಿಯಾ ಮಾಡಿದ್ದು ಫುಡ್ ಡೆಲಿವರಿ ಮಾಡಲು ತನ್ನ ಬಾಡಿ ಬಿಲ್ಡರ್ಸ್ ಸ್ನೇಹಿತರನ್ನ ನಿಯೋಜನೆ ಮಾಡಿರುವ ಮಾಲೀಕ ಕೆಲಸ ಬೇಕಾದವರಿಗೆ ಕೆಲಸ ಸಹ ಸೃಷ್ಟಿ ಮಾಡಿದ್ದಾನೆ. ಇನ್ನು ಬಾಡಿ ಬಿಲ್ಡರ್ಸ್ ಮೂಲಕ ಫುಡ್ ಡೆಲಿವರಿ ಪಡೆಯಬೇಕಾದರೆ ಒಂದು ಷರತ್ತು ಇದೆ. ಏನೆಂದರೆ ಕಡಿಮೆ ಅಂದರೂ ೭ ಸಾವಿರದ ರೂಪಾಯಿಯ ಫುಡ್ ಆರ್ಡರ್ ನ್ನ ಗ್ರಾಹಕರು ಮಾಡಬೇಕಾಗಿದೆ. ಇನ್ನು ಈ ಒಂದು ಐಡಿಯಾದಿಂದ ಹೆಚ್ಚೆಚ್ಚು ಆರ್ಡರ್ ಗಳು ಬರುವುದರ ಜೊತೆಗೆ ಲಕ್ಷ ಲಕ್ಷ ಆದಾಯ ಕೂಡ ಮಾಡುತ್ತಿದ್ದಾನೆ ಈ ಹೋಟೆಲ್ ಮಾಲೀಕ..ಅದಕ್ಕೆ ಹೇಳೋದು ಒಂದು ಇದ್ದೀಯ ಇಡೀ ಜೀವನ ಶೈಲಿಯನ್ನೇ ಬದಲಾವಣೆ ಮಾಡುತ್ತೆ ಅಂತ..