Advertisements

ನನ್ನ ಮೇಲಿನ ಆರೋಪ ಸಾಬೀತಾದ್ರೆ ನನ್ನ ಇಡೀ ಆಸ್ತಿಯೆನ್ನೆಲ್ಲಾ ಸರ್ಕಾರಕ್ಕೆ ಬರೆದು ಕೊಡುವೆ ಎಂದು ಸವಾಲ್ ಹಾಕಿದ ಜಮೀರ್ ಅಹ್ಮದ್ !

News

ಸ್ಯಾಂಡಲ್ವುಡ್ ನಟಿ ಸಂಜನಾ ಅವರ ಜೊತೆ ಶಾಸಕ ಜಮೀರ್ ಅಹ್ಮದ್ ಅವರು ಶ್ರೀಲಂಕಾದ ಕೊಲಂಬೋದಲ್ಲಿರುವ ಕ್ಯಾಸಿನೋಗೆ ಹೋಗಿದ್ದರು ಎನ್ನುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಆರೋಪ ಮಾಡಿದ್ದು, ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಸುದ್ದಿಗಳು ವೈರಲ್ ಆಗುತ್ತಿದ್ದು ಕಡೆಗೂ ಈ ಬಗ್ಗೆ ಜಮೀರ್ ಅವರು ತಮ್ಮ ವಿರುದ್ಧ ಆಪಾದನೆಗಳ ಬಗ್ಗೆ ಮೌನ ಮುರಿದಿದ್ದು ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ. ನಟಿ ಸಂಜನಾ ಅವರ ಜೊತೆ ನಾನು ಕೊಲಂಬೋಗೆ ಹೋಗಿದ್ದೇನೆ ಎನ್ನುವ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ತನಿಖೆ ಮಾಡಲಿ. ನಾನು ಎಲ್ಲಾ ರೀತಿಯ ತನಿಖೆಗೂ ಸಿದ್ದ ಎಂದು ಅವರು ಹೇಳಿದ್ದಾರೆ.

ನಾನು ಸಂಜನಾ ಜೊತೆ ವಿದೇಶಕ್ಕೆ ಹೋಗಿದ್ದರೆ, ಒಂದೇ ವಿಮಾನದಲ್ಲಿ ಹೋಗಿರಬೇಕು ಹಾಗೂ ಒಂದೇ ಹೋಟೆಲ್ ನಲ್ಲಿ ಉಳಿದುಕೊಂಡಿರಬೇಕು. ಇದಕ್ಕೆಲ್ಲಾ ನಾವು ಪಾಸ್ ಪೋರ್ಟ್ ನೀಡಬೇಕಾಗುತ್ತದೆ. ಜೊತೆಗೆ ವಿಮಾನದಲ್ಲಿ ಹೋದ ಬಗ್ಗೆಯೂ ಕೂಡ ತನಿಖೆ ಮಾಡಿ ಮಾಹಿತಿಗಳನ್ನ ಪಡೆದುಕೊಳ್ಳಬಹುದಾಗಿದೆ. ಇನ್ನು ನಾವು ಶ್ರೀಲಂಕಾದ ಹೋಟೆಲ್ ಗಳಲ್ಲಿ ಉಳಿದುಕೊಂಡಿದ್ದರೆ ಅದನ್ನ ಸಿಸಿ ಟಿವಿ ಕ್ಯಾಮರಾದ ಮುಖಾಂತರ ಪರಿಶೀಲಿಸಬಹುದಾಗಿದೆ. ಇದನ್ನೆಲ್ಲಾ ಚೆಕ್ ಮಾಡಿ ನನ್ನ ಬಗ್ಗೆ ತನಿಖೆ ಮಾಡಿ ನಾನು ಸಂಜನಾ ಜೊತೆ ಹೋಗಿದ್ದಲ್ಲಿ ದಾಖಲೆಗಳ ಮೂಲಕ ಸಾಬೀತು ಪಡಿಸಲಿ ಎಂದು ಜಮೀರ್ ಅವರು ಹೇಳಿದ್ದಾರೆ.

Advertisements

ಇನ್ನು ಈಗ ನಮ್ಮ ಸರ್ಕಾರವಂತೂ ಇಲ್ಲ. ಇರುವುದು ಬಿಜೆಪಿ ಸರ್ಕಾರ. ಎಲ್ಲಾ ಆಯಾಮಗಳಿಂದಲೂ ತನಿಖೆ ಮಾಡಲಿ. ಒಂದು ವೇಳೆ ನಾನು ಸಂಜನಾ ಅವರ ಜೊತೆ ಕೊಲಂಬೋಗೆ ಹೋಗಿರುವುದು ಸತ್ಯವಾದಲ್ಲಿ ನನ್ನ ಇಡೀ ಆಸ್ತಿಯೆನ್ನೆಲ್ಲಾ ಸರ್ಕಾರಕ್ಕೆ ಬರೆದುಕೊಡುತ್ತೇನೆ ಎಂದು ಶಾಸಕ ಜಮೀರ್ ಅಹ್ಮದ್ ಅವರು ಸವಾಲ್ ಹಾಕಿದ್ದಾರೆ. ಇನ್ನು ಒಂದು ವೇಳೆ ಪ್ರಶಾಂತ್ ಸಂಬರಗಿ ನನ್ನ ಮೇಲೆ ಮಾಡಿರುವ ಆರೋಪ ಸುಳ್ಳಾದರೆ ಅವರನ್ನ ಏನು ಮಾಡುತ್ತೀರಾ ಎಂದು ಸರ್ಕಾರಕ್ಕೆ ಶಾಸಕ ಜಮೀರ್ ಅವರು ಸವಾಲ್ ಎಸೆದಿದ್ದಾರೆ.