Advertisements

ಮಹಾಭಾರತದ ಮಹಾವೀರ ಕರ್ಣನಿಗೂ ಪಿತೃಪಕ್ಷಕ್ಕೂ ಇರುವ ಸಂಬಂಧ ಆದ್ರೂ ಏನು ಗೊತ್ತಾ ?

Adyathma

ನಮ್ಮನ್ನ ಬಿಟ್ಟು ಅಗಲಿದ ಪೂರ್ವಜರ ಆರಾಧನೆ ಮಾಡುವ ಸಲುವಾಗಿ ಪ್ರತೀ ವರ್ಷ ಹದಿನೈದು ದಿನಗಳ ಪಿತೃಪಕ್ಷ ಆಚರಣೆ ಮಾಡಲಾಗುತ್ತೆ. ಪಿತೃಗಳಿಗೆ ಅವರು ಇಷ್ಟಪಟ್ಟ ಆಹಾರಗಳನ್ನ ನೀಡುವುದರ ಮೂಲಕ ಹಿಂದೂ ಧರ್ಮದಲ್ಲಿ ಈ ಆಚರಣೆ ಮಾಡಲಾಗುತ್ತದೆ. ಇನ್ನು ಈ ಪಿತೃಪಕ್ಷದ ಆಚರಣೆಗೆ ಸಂಬಂಧಪಟ್ಟ ಹಾಗೇ ಪೌರಾಣಿಕ ಕತೆಗಳು ಕೂಡ ತಳುಕು ಹಾಕಿಕೊಂಡಿವೆ. ಹೌದು, ಮಹಾಭಾರತದ ಅತಿರಥ ಮಹಾವೀರ ಸೂರ್ಯಪುತ್ರ ಕರ್ಣನಿಗೂ ಹಾಗೂ ಈ ಪಿತೃಪಕ್ಷಕ್ಕೂ ಸಂಬಂಧವಿದೆ ಎಂದು ಹೇಳಲಾಗಿದೆ.

Advertisements

ಹೌದು, ಯುದ್ಧ ಭೂಮಿಯಲ್ಲಿ ಬ್ರಾಹ್ಮಣ ವೇಷಧಾರಿಯಾಗಿ ಬಂದಿದ್ದ ದೇವತೆಗಳ ರಾಜ ದೇವೇಂದ್ರ ಮಹಾನ್ ದಾನ ವೀರ ಕರ್ಣನ ಬಳಿ ಕರ್ಣ ಕುಂಡಲಗಳು ಮತ್ತು ಕವಚವನ್ನ ದಾನವಾಗಿ ಕೇಳುತ್ತಾನೆ. ಆದರೆ ಕರ್ಣ ಇಂದೂ ಮುಂದೂ ನೋಡದಂತೆ ಕೊಟ್ಟುಬಿಡುತ್ತಾನೆ. ಬಳಿಕ ಯುದ್ಧದಲ್ಲಿ ಅರ್ಜುನನಿಂದ ಹತನಾಗುತ್ತಾನೆ. ಕುರುಕ್ಷೇತ್ರದಲ್ಲಿ ವೀರಾವೇಶದಿಂದ ಹತನಾದ ಕರ್ಣನು ಸಾ’ವಿನ ಬಳಿಕ ಸ್ವರಗಕ್ಕೆ ಹೋಗುತ್ತಾನೆ. ಆದರೆ ಸ್ವರ್ಗದಲ್ಲಿ ದಾನ ಶೂರ ಕರ್ಣನಿಗೆ ಆಹಾರವಾಗಿ ವಜ್ರ ವೈಡೂರ್ಯಗಳನ್ನ ಕೊಡಲಾಗುತ್ತದೆ.

ಇದರಿಂದ ಚಕಿತನಾದ ಕರ್ಣ ಇದರ ಬಗ್ಗೆ ಇಂದ್ರದೇವನಲ್ಲಿ ಪ್ರಶ್ನೆ ಮಾಡಿದಾಗ ನಿಮ್ಮ ಹಿರಿಯರಿಗೆ ಶ್ರಾದ್ಧ ಮಾಡದ ಹಿನ್ನಲೆಯಲ್ಲಿ ಊಟದ ಬದಲಾಗಿ ನಿನ್ನ ದಾನಕ್ಕೆ ಅನುಸಾರವಾಗಿ ಇದನ್ನ ನೀಡಲಾಗಿದೆ ಎಂದು ಹೇಳಲಾಗಿದೆ. ಆಗ ದೇವೇಂದ್ರನಿಂದ ಅನುಮತಿ ಪಡೆದು ಭೂಲೋಕಕ್ಕೆ ಬರುವ ಕರ್ಣ ತನ್ನ ಪೂರ್ವಜರಿಗೆ ಶ್ರಾದ್ಧ ಮಾಡಿದನೆಂಬ ನಂಬಿಕೆ ಇದೆ. ಹಾಗಾಗಿಯೇ ನಮ್ಮ ಪೂರ್ವಜರಿಗೆ ಪಿತೃಪಕ್ಷದ ಮಾಸದಲ್ಲಿ ಆರಾಧನೆ ಮಾಡುವುದರಿಂದ ಆ ಕುಟುಂಬಕ್ಕೆ ಆರೋಗ್ಯ, ಸಂತಾನ ಹಾಗೂ ಧನ ದಾನ್ಯ ಲಭಿಸಲಿದೆ ಎಂಬ ನಂಬಿಕೆ ಇದೆ. ಜೊತೆಗೆ ಈ ಮಾಸದಲ್ಲಿ ಹಿರಿಯರ ಪೂಜೆ ಮಾಡುವುದರಿಂದ ಅವರ ಸಿಗಲಿದೆ ಎಂಬ ನಂಬಿಕೆ ಕೂಡ ಇದೆ.