Advertisements

ನಟ ಉಪೇಂದ್ರ ಅಭಿಮಾನಿಗಳಿಗೆ ಡಬಲ್ ಸಿಹಿ ಸುದ್ದಿ ! ರಿಲೀಸ್ ಆಗಲಿದೆ ಥೀಮ್ ಪೋಸ್ಟರ್..

Cinema

ಸ್ಯಾಂಡಲ್ವುಡ್ ನಲ್ಲಿ ಅತೀ ಹೆಚ್ಚು ಕುತೂಹಲ ಹುಟ್ಟುಹಾಕಿರುವ ಚಿತ್ರಗಳಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಕೂಡ ಒಂದು. ಖ್ಯಾತ ನಿರ್ದೇಶಕ ಆರ್. ಚಂದ್ರು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಿ ತಯಾರಾಗುತ್ತಿದ್ದು ಬರೋಬ್ಬರಿ ಏಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು ಈಗಾಗಲೇ ಉಪೇಂದ್ರರವರ ವಿಭಿನ್ನ ಗೆಟಪ್ ನಲ್ಲಿ ಮೂಡಿಬಂದಿರುವ ಫೋಟೋಗಳು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚೆಲು ಕಾರಣವಾಗಿದೆ.

Advertisements

ಇನ್ನು ಇದೆ ತಿಂಗಳು ೧೮ರಂದು ನಟ ನಿರ್ದೇಶಕ ಉಪೇಂದ್ರರವರ ಹುಟ್ಟುಹಬ್ಬ ಇರುವ ಹಿನ್ನಲೆಯಲ್ಲಿ ಚಿತ್ರತಂಡ ಅಭಿಮಾನಿಗಳಿಗೆ ಉಡುಗೊರೆಯೊಂದನ್ನ ಕೊಡಲು ರೆಡಿಯಾಗಿದೆ. ಹೌದು, ಚಿತ್ರತಂಡ ಚಿತ್ರದ ಥೀಮ್ ಪೋಸ್ಟರ್ ನ್ನ ಬಿಡುಗಡೆ ಮಾಡಲಿದೆ. ಒಂದು ಕಡೆ ನೆಚ್ಚಿನ ನಟನ ಹುಟ್ಟುಹಬ್ಬ, ಮತ್ತೊಂದು ಕಡೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಬ್ಜ ಥೀಮ್ ಪೋಸ್ಟರ್ ನ್ನ ಬಿಡುಗಡೆ ಮಾಡಲಿದ್ದಾರೆ. ಒಟ್ಟಿನಲ್ಲಿ ಉಪೇಂದ್ರರವರ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಡಬಲ್ ಗುಡ್ ನ್ಯೂಸ್ ಕಾದಿರುವುದಂತೂ ನಿಜ.

ಇನ್ನು ಈಗಾಗಲೇ ಅಭಿಮಾನಿಗಳಲ್ಲಿ ಚಿತ್ರದ ಥೀಮ್ ಪೋಸ್ಟರ್ ಬಗ್ಗೆ ಬಾರೀ ಕುತೂಹಲ ಮೂಡಿದ್ದು ರಾಮ್ ಗೋಪಾಲ್ ವರ್ಮಾ ಅವರು ಬರೋಬ್ಬರಿ ಏಳು ಭಾಷೆಗಳಲ್ಲಿ ಸೆಪ್ಟೆಂಬರ್ ೧೭ ರಂದು ಸಂಜೆ ೫ ಗಂಟೆಗೆ ಬಿಡುಗಡೆ ಮಾಡಲಿದ್ದಾರೆ. ಇನ್ನು ಕನ್ನಡ ಚಿತ್ರರಂಗದ ಹೈ ಬಜೆಟ್ ಚಿತ್ರ ಎಂದು ಹೇಳಲಾಗಿದ್ದು ಈ ಚಿತ್ರದಲ್ಲಿ ನಟ ಉಪೇಂದ್ರ ೮೦ರ ದಶಕದ ಡಾನ್ ಆಗಿ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.