Advertisements

ಚಂದನವನದ ಸ್ಟಾರ್ ದಂಪತಿಗೆ ಬಿಗ್ ಶಾಕ್ ! ಸಿಕ್ಕಿಬಿದ್ರಾ ಐಂದ್ರಿತಾ ರೈ ಹಾಗೂ ದಿಗಂತ್ ?

Cinema Uncategorized

ಸ್ಯಾಂಡಲ್ವುಡ್ ನಲ್ಲಿ ಮಾ’ದಕ ವಸ್ತುಗಳ ವಿಚಾರಕ್ಕೆ ಸಮಬಂದಪಟ್ಟಂತೆ ದೊಡ್ಡ ಬಿರುಗಾಳಿಯೇ ಎದ್ದಿದೆ. ಹೌದು ಹೀಗಾಗಲೇ ನಟಿ ರಾಗಿಣಿ ಹಾಗೂ ಸಂಜನಾ ಅವರ ವಿಚಾರಣೆ ನಡೆದಿದ್ದು ರಾಗಿಣಿ ಪರಪ್ಪನ ಅಗ್ರಹಾರದ ಜೈಲಿನ ಪಾಲಾದರೆ ಸಂಜನಾ ಇನ್ನು ವಿಚಾರಣೆ ಎದುರಿಸುತ್ತಿದ್ದಾರೆ. ಇದರ ನಡುವೆಯೇ ಚಂದನವನದ ಸ್ಟಾರ್ ದಂಪತಿ ಡ್ರ’ಗ್ ಜಾಲ್ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ವಿಚಾರಣೆ ವೇಳೆ ಸಂಜನಾ ಮತ್ತು ರಾಗಿಣಿ ಆ ಸ್ಟಾರ್ ದಂಪತಿಯ ಹೆಸರನ್ನ ಬಹಿರಂಗ ಮಾಡಿದ್ದಾರೆ ಎನ್ನಲಾಗಿದೆ.

Advertisements

ಇನ್ನು ಸ್ಟಾರ್ ದಂಪತಿ ಬೇರೆ ಯಾರೂ ಅಲ್ಲ ನಟ ದಿಗಂತ್ ಮತ್ತು ನಟಿ ಐಂದ್ರಿತಾ ರೈ. ಹೌದು ಮಾಹಿತಿಗಳ ಪ್ರಕಾರ ಸಿಸಿಬಿ ಅಧಿಕಾರಿಗಳು ಈ ದಂಪತಿಗೆ ಈಗಾಗಲೇ ನೋಟಿಸ್ ನೀಡಿದ್ದಾರೆ ಎನ್ನಲಾಗಿದ್ದು ನಾಳೆ ವಿಚಾರಣೆ ಎದುರಿಸಬೇಕಾಗಿದೆಯಂತೆ. ಬುಧವಾರ ಬೆಳಿಗ್ಗೆ ೧೧ ಗಂಟೆಗೆ ದಿಗಂತ್ ಐಂದ್ರಿತಾ ರೈ ಸಿಸಿಬಿ ಕಚೇರಿಯಲ್ಲಿ ಅಧಿಕಾರಿಗಳ ಮುಂದೆ ಬಂದು ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ.

ಇನ್ನು ಡ್ರ’ಗ್ ಪೆಡ್ಲರ್ ಎಂದು ಹೇಳಲಾಗಿರುವ ಶೇಖ್ ಫಾಜಿಲ್ ಜೊತೆ ಐಂದ್ರಿತಾ ರೈ ತೆಗೆಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅಲ್ಲದೆ ಶೇಖ್ ಫಾಜಿಲ್ ಆಯೋಜಿಸುತ್ತಿದ್ದ ಶ್ರೀಲಂಕಾದ ಕ್ಯಾಸಿನೊ ಪಾರ್ಟಿಗಳಿಗೆ ನಟಿ ಐಂದ್ರಿತಾ ಬೇರೆ ಬೇರೆ ಸ್ಟಾರ್ ಗಳಿಗೆ ಆಹ್ವಾನ ಕೊಡುತ್ತಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.

ಜೊತೆಗೆ ಕೆಲ ಮಾಹಿತಿಗಳ ಪ್ರಕಾರ ಈ ಸ್ಟಾರ್ ದಂಪತಿ ಸ್ಯಾಂಡಲ್ವುಡ್ ಗೆ ಡ್ರ’ಗ್ ಸಪ್ಲಯ್ ಮಾಡುತ್ತಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗಿದ್ದು ಇದರ ಬಗ್ಗೆ ವಿಚಾರಣೆ ನಡೆಯಲಿದೆ ಎನ್ನಲಾಗಿದೆ.ಇನ್ನು ಬಹುತೇಕ ಸ್ಟಾರ್ ನಟ ನಟಿಯರು ಹಾಗೂ ಕಿರುತೆರೆಯ ನಟ ನಟಿಯರು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು ಯಾರೆಲ್ಲಾ ಮುಖವಾಡಗಳು ಕಳಚಿ ಬೀಳಲಿದೆ ಎನ್ನುವುದನ್ನ ಕಾದು ನೋಡಬೇಕಾಗಿದೆ.