Advertisements

ಮಗಳು ಜೈಲು ಸೇರುತ್ತಿದ್ದಂತೆ ಮಾಜಿ ಸೇನಾಧಿಕಾರಿ ಆಗಿರುವ ರಾಗಿಣಿ ತಂದೆ ಮಾಡಿದ್ದೇನು ಗೊತ್ತಾ ?

Cinema

ಸ್ಯಾಂಡಲ್ವುಡ್ ನ ಡ್ರ’ಗ್ ಪ್ರಕರಣಕ್ಕೆ ಸಂಬಂಧಪಟ್ಟನೇ ಕೆಲ ದಿನಗಳಿಂದ ನಟಿ ರಾಗಿಣಿಯ ವಿಚಾರಣೆ ನಡೆಯುತ್ತಿದ್ದು ಈಗ ಅವರನ್ನ ನ್ಯಾಯಾಲಯ ಹದಿನಾಲ್ಕು ದಿನಗಳ ನ್ಯಾಯಾಂಗ ಬಂ’ಧನಕ್ಕೆ ಒಪ್ಪಿಸಿದೆ. ಈ ಹಿನ್ನೆಲೆಯಲ್ಲಿ ನಟಿ ರಾಗಿಣಿ ಈಗ ಪರಪ್ಪನ ಅಗ್ರಹಾರದ ಜೈಲು ಸೇರಿದ್ದಾರೆ. ಇನ್ನು ಇಷ್ಟು ದಿನಗಳಿಂದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಜೊತೆಯಾಗಿದ್ದ ನಟಿ ಸಂಜನಾ ರಾಗಿಣಿಯನ್ನ ಅಳುತ್ತಾ ತಬ್ಬಿಕೊಂಡು ಜೈಲಿ’ಗೆ ಕಳುಹಿಸಿಕೊಟ್ಟಿದ್ದಾರೆ.

Advertisements

ಇನ್ನು ಮಹಿಳೆಯರ ಸೆಲ್ ನಲ್ಲಿ ಬಂ’ಧಿಯಾಗಿರುವ ತುಪ್ಪದ ಬೆಡಗಿ ನಟಿ ರಾಗಿಣಿ ರಾತ್ರಿ ಊಟಕ್ಕೆ ಕೊಟ್ಟಿದ್ದ ಅನ್ನ ಸಾಂಬಾರ್ ಜೊತೆಗೆ ಚಪಾತಿಯನ್ನ ಬೇಡ ಎಂದು ಕಣ್ಣೀರು ಸುರಿಸಿದ್ದಾರೆ ಎನ್ನಲಾಗಿದೆ. ಇನ್ನು ರಾಗಿಣಿ ಜೈಲು ಸೇರುತ್ತಿದ್ದಂತೆ ಇತ್ತ ಕಡೆ ನಿವೃತ್ತ ಸೇನಾಧಿಕಾರಿಯಾಗಿರುವ ಅವರ ತಂದೆ ಮಗಳು ತುಂಬಾ ಪ್ರೀತಿಸುತ್ತಿದ್ದ ಯಲಹಂಕದಲ್ಲಿರುವ ಮನೆಯನ್ನ ಮಾರಾಟಕ್ಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಹೌದು, ಯಲಹಂಕದಲ್ಲಿರುವ ಅನನ್ಯ ಎಂಬ ಅಪಾರ್ಟ್ ಮೆಂಟ್ ನಲ್ಲಿ ರಾಗಿಣಿಗೆ ಸೇರಿದ ಪ್ಲೇಟ್ ಇತ್ತು. ಇದನ್ನ ರಾಗಿಣಿ ತುಂಬಾ ಇಷ್ಟಪಡುತ್ತಿದ್ದರಂತೆ. ಈಗ ಇದೆ ಮನೆಯನ್ನ ಅವರ ತಂದೆ ರಾಕೇಶ್ ದ್ವಿವೇದಿ ಎರಡು ಕೋಟಿಗೆ ಮಾರಾಟಕ್ಕೆ ಇಟ್ಟಿದ್ದಾರೆ. ಯಲಹಂಕದ ನ್ಯಾಯಾಂಗ ಬಡಾವಣೆಯಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ರಾಗಿಣಿಗೆ ಸೇರಿದ ಅವರ, ತಂದೆ ಮಾಲೀಕತ್ವ ಹೊಂದಿರುವ 3 ಬಿಎಚ್‍ಕೆ ಫ್ಲ್ಯಾಟ್ ಇದ್ದು, ಎರಡು ಕೋಟಿಗೆ ಸೇಲ್ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

ಇನ್ನು ಕಳೆದ ಕೆಲ ದಿನಗಳಿಂದ ಸಿಸಿಬಿ ವಶದಲ್ಲಿದ್ದ ನಟಿ ರಾಗಿಣಿ ಇನ್ನು ಮುಂದಿನ ೧೪ ದಿನಗಳ ಕಾಲ ಸೆಪ್ಟೆಂಬರ್ ೨೮ರವರೆಗೆ ಪರಪ್ಪನ ಅಗ್ರಹಾರದ ಜೈಲಲ್ಲೇ ಇರಬೇಕಾಗಿದೆ. ಇನ್ನು ತಮ್ಮ ಮಗಳು ಜೈಲು ಸೇರಿದ್ದು ಮನೆಯ ಜಾಗ ಬದಲಾವಣೆ ಮಾಡಲೋ ಇಲ್ಲವೋ ಕೋರ್ಟು ಕಚೇರಿ ಖರ್ಚುಗಳಿಗಾಗಿಯೋ ತನ್ನ ಮಗಳ ಪ್ರೀತಿಯ ಮನೆಯನ್ನ ಮಾರಾಟಕ್ಕಿಟ್ಟಿದ್ದಾರೆ ಎನ್ನಲಾಗಿದೆ.