Advertisements

ಜೈಲಿನಲ್ಲಿರುವ ಮಗಳನ್ನು ನೋಡಲು ಬಂದು ಮಾಧ್ಯಮದ ಮುಂದೆ ಕರಾಳ ಸತ್ಯವನ್ನ ಬಿಚ್ಚಿಟ್ಟ ರಾಗಿಣಿ ತಾಯಿ..

Cinema

ನಮಸ್ತೆ ಸ್ನೇಹಿತರೆ. ಪೋಲಿಸ್ ಕಸ್ಟ’ಡಿಯಲ್ಲಿ ಸತತವಾಗಿ ಎಂಟು ದಿನಗಳ ನಂತರ ರಾಗಿಣಿ ಪರಪ್ಪನ ಅಗ್ರಹಾರ ಜೈ’ಲಿನಲ್ಲಿ ಬಂದಿ’ಯಾಗಿದ್ದಾರೆ.. ಸದ್ಯಕ್ಕೆ ರಾಗಿಣಿಗೆ ಜೈ’ಲಿನಲ್ಲಿ ಯಾವುದೇ ವಿಐಪಿ ರೀತಿ ನೋಡದೆ ಸಾಮನ್ಯವಾಗಿ ಉಳಿದವರಂತೆ ಇರಿಸಲಾಗಿದೆ.. ಆದರೆ ರಾಗಿಣಿ ನನಗೆ ಅರೋಗ್ಯ ಸರಿಯಿಲ್ಲ ಖಾಸಗಿ ಆಸ್ವತ್ರೆಗೆ ದಾಖಲಿಸಿ ಎಂದು ಕೇಳಿಕೊಂಡಿದ್ದಾರಂತೆ. ಆದರೆ ಜೈ’ಲಿನಲ್ಲಿನ ವೈದ್ಯರಿಂದಲೇ ರಾಗಿಣಿಗೆ ಚಿ’ಕಿತ್ಸೆ ಕೊಡಿಸಿದ್ದಾರೆ..

Advertisements

ರಾಗಿಣಿಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈ’ಲಿಗೆ ಕಳುಹಿಸಿದ ಮರುದಿನ ರಾಗಿಣಿ ತಂದೆ ತಾಯಿ ತಮ್ಮ ಮಗಳನ್ನು ನೋಡಲು ಬಂದಿದ್ದಾರೆ.. ಆದರೆ ರಾಗಿಣಿಯನ್ನು ನೋಡಲು ಯಾರಿಗೂ ಅನುಮತಿ ಇಲ್ಲದ ಕಾರಣ ತಂದೆ ತಾಯಿಗೂ ನೋಡಲು ಅವಕಾಶ ಮಾಡಿಕೊಟ್ಟಿಲ್ಲ.. ಒಮ್ಮೆ ರಾಗಿಣಿಯನ್ನು ನೋಡಬೇಕು ಎಂದು ಬಹಳಷ್ಟು ಮನವಿ ಮಾಡಿಕೊಂಡು ಕಣ್ಣಿರಿಡುತ್ತಾ ಹೊರಬಂದಿದ್ದಾರೆ..

ಇನ್ನೂ ಮಾಧ್ಯಮದ ಜೊತೆ ಮಾತಾಡಿರುವ ರಾಗಿಣಿ ತಾಯಿ.. ಎಲ್ಲರೂ ಅಂದುಕೊಂಡಿದ್ದಾರೆ ನಮ್ಮಲ್ಲಿ ಬಹಳ ಹಣ ಇದೆ ಎಂದು. ಆದರೇ ಆ ರೀತಿ ಏನೂ ಇಲ್ಲ.. ಮಗಳನ್ನು ಉಳಿಸಿಕೊಳ್ಳಲು ಮನೆಯನ್ನು ಮಾರಲು ಸಿದ್ದವಾಗಿದ್ದೇವೆ.. ಆ ಮನೆಯದ್ದು ಒಂದು ಕೋಟಿ ಲೋನ್ ಕೂಡ ಇದೆ.. ಸ್ವಲ್ಪ ತೀರಿಸಿದ್ದೇವೆ.. ಇನ್ನೂ ಇ ಎಂ ಐ ಬಾಕಿ ಇದೆ ಕಟ್ಟುತ್ತಿದ್ದೇವೆ.. ಮಗಳನ್ನು ಹೊರಗೆ ಕರೆತರಬೇಕು, ಅವಳನ್ನು ಮೊದಲಿನಂತೆ ನೋಡಬೇಕು.. ಈ ಕಾರಣಕ್ಕೆ ಮನೆಯನ್ನು ಮಾರುತ್ತಿದ್ದೇವೆ ಎಂದು ಹೇಳಿದ್ದಾರೆ…

ನಿಜಕ್ಕೂ ವಯಸ್ಸಿನ ತಂದೆ ತಾಯಿಗೆ ಅಲೆಯೋ ಪರಿಸ್ಥಿತಿ ಬರುವಂತೆ ಮಾಡಬಾರದು.. ಮೋಜು ಮಸ್ತಿ ಮಾಡಲು ಜೊತೆ ಇರುವ ಕೆಲವು ಸ್ನೇಹಿತರು ಕಷ್ಟದ ಸಮಯದಲ್ಲಿ ಬರುವುದಿಲ್ಲ, ಕಷ್ಟ ಸಮಯಕ್ಕೆ ಆಗುವುದು ತಂದೆ ತಾಯಿ ಮಾತ್ರ.. ಯಾವ ಮಕ್ಕಳು ಈ ರೀತಿ ತಂದೆ ತಾಯಿಗೆ ನೋವು ಕೊಡಬೇಡಿ.. ಕೆಟ್ಟ ದಾರಿಗೆ ಕಾಲಿಡುವ ಮೊದಲು ಸಾಕಿ ಸಲುಹಿದ ತಂದೆ ತಾಯಿಯ ಪರಿಸ್ಥಿತಿಯ ಬಗ್ಗೆ ಒಮ್ಮೆ ಆಲೋಚನೆ ಮಾಡಿ ನೋಡಿ.. ಇದು ಎಷ್ಟೋ ಯುವಕರಿಗೆ ಪಾಠವಾಗಲಿದೆ..