Advertisements

ನೋಟಿಸ್ ನೋಡಿ ವಕೀಲರೊಂದಿಗೆ ಬೆಂಗಳೂರಿಗೆ ಬಂದ ಅಕುಲ್ ಬಾಲಾಜಿ ಹೇಳಿದ್ದೇನು ಗೊತ್ತಾ ?

Cinema

ತನ್ನ ಅದ್ಭುತ ನಿರೂಪಣೆಯಿಂದಲೇ ಕನ್ನಡದ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಫೇಮಸ್ ಆಗಿರುವ ನಟನೂ ಆಗಿರುವ ಅಕುಲ್ ಬಾಲಾಜಿಗೆ ಡ್ರ’ಗ್ಸ್ ಪ್ರಕರಣಕ್ಕೆ ಸಮಬಂಧಪಟ್ಟಂತೆ ಅಧಿಕಾರಿಗಳು ನೋಟೀಸ್ ಜಾರಿ ಮಾಡಲಾಗಿದೆ. ಇನ್ನು ಹೈದರಬಾದ್ ನಲ್ಲಿದ್ದ ಅಕುಲ್ ನೋಟಿಸ್ ಬಂದ ಹಿನ್ನಲೆಯಲ್ಲಿ ಅಡ್ವೋಕೇಟ್ ಒಬ್ಬರೊಂದಿಗೆ ವಿಚಾರಣೆಗಾಗಿ ಬೆಂಗಳೂರಿಗೆ ಬಂದಿದ್ದಾರೆ. ಇನ್ನು ಡ್ರ’ಗ್ಸ್ ಪ್ರಕರಣ ಕುರಿತಂತೆ ನೋಟಿಸ್ ಬಂದಿರುವ ಬಗ್ಗೆ ಮಾತನಾಡಿರುವ ಅಕುಲ್ ಬಾಲಾಜಿ ನಾನೇನು ತಪ್ಪು ಮಾಡಿಲ್ಲ..ನನ್ನನ್ನ ಏಕೆ ವಿಚಾರಣೆಗೆ ಕರೆದಿದ್ದಾರೆ ಎನ್ನುವುದರ ಬಗ್ಗೆ ನನಗೆ ಗೊತ್ತಿಲ್ಲ..

Advertisements

ನಾನು ಅಧಿಕಾರಿಗಳು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುತ್ತೇನೆ. ನನಗೆ ಯಾವುದೇ ಹೆದರಿಕೆಯಿಲ್ಲ.ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಯಲ್ಲಿರುವ ವೈಭವ್ ಜೈನ ಜೊತೆ ಹಾಯ್ ಬಾಯ್ ಎನ್ನುವ ಸ್ನೇಹ ಮಾತ್ರ ಇದೆ. ನನಗೆ ಅಧಿಕಾರಿಗಳು ವಾಟ್ಸಪ್ ಮೂಲಕ ನೋಟೀಸ್ ಕಳುಹಿಸಿದ್ದಾರೆ. ನನಗೆ ಗೊತ್ತಿರುವ ಎಲ್ಲಾ ವಿಚಾರಗಳ ಬಗ್ಗೆ ನಾನು ಅಧಿಕಾರಿಗಳು ಬಳಿ ಹೇಳುವೆ. ಅವರ ಯಾವುದೇ ಪ್ರಶ್ನೆಗಳಿಗೂ ನಾನು ಉತ್ತರ ಕೊಡುತ್ತೇನೆ.

ಅಧಿಕಾರಿಗಳು ತನಿಖೆಗೆ ಸಹಕಾರ ನೀಡುತ್ತೇನೆ ಎಂದು ಖ್ಯಾತ ರಿಯಾಲಿಟಿ ಶೋ ಸಂಚಿಕೆ 2ರ ವಿನ್ನರ್ ಅಕುಲ್ ಬಾಲಾಜಿ ಹೇಳಿದ್ದಾರೆ. ನಾನು ತಪ್ಪು ಮಾಡಿದ್ರೆ ತಾನೇ ನನಗೆ ಹೆದರಿಕೆ ಆಗೋದು. ನನ್ನ ತಾಯಿ ಸಹ ನನಗೆ ಇದನ್ನೇ ಕಳಿಸಿದ್ದಾರೆ. ತಪ್ಪು ಮಾಡಿಲ್ಲ ಅಂದರೆ ಹೆದರ ಬೇಡ ಅಂತ..ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ಮಾಡುತ್ತಿರುವ ಸೆಲೆಬ್ರೆಟಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಇನ್ನು ಈ ಪ್ರಕರಣದಲ್ಲಿ ಯಾರೆಲ್ಲಾ ಸಿಕ್ಕಿಹಾಕಿಕೊಳ್ಳಲಿದ್ದಾರೆ ಎಂಬುದನ್ನ ಕಾದು ನೋಡಬೇಕಾಗಿದೆ/