Advertisements

ಭಗವಂತ ಶ್ರೀಕೃಷ್ಣನಿಗೆ ಮಧ್ಯಮ ಪಾಂಡವ ಅರ್ಜುನನ ಮೇಲೇಕೆ ಅಷ್ಟೊಂದು ಪ್ರೀತಿ ? ಇದರ ಹಿಂದಿದೆ ನಿಮಗೆ ಗೊತ್ತಿಲ್ಲದ ರಹಸ್ಯ !

Adyathma

ಹಿಂದೂ ಧರ್ಮದಲ್ಲಿ ರಾಮಾಯಣ ಮತ್ತು ಮಹಾಭಾರತ ಗ್ರಂಥಗಳಿಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಇನ್ನು ಮಹಾಭಾರತದ ಕತೆಗಳನ್ನ ಎಷ್ಟೇ ಓದಿದರೂ ಮತ್ತಷ್ಟು ಮಗದಷ್ಟು ತಿಳಿಯುವ ಕುತೂಹಲ ಇದ್ದೆ ಇರುತ್ತದೆ. ಈ ಕುತೂಹಲದ ನಡುವೆಯೇ ಹಲವಾರು ಪ್ರಶ್ನೆಗಳು ಮೂಡುತ್ತವೆ. ಅದರಲ್ಲಿ ಒಂದು ವಸುದೇವನ ಪುತ್ರ ಸಾಕ್ಷಾತ್ ನಾರಾಯಣ ಅವತಾರಿ ಶ್ರೀ ಕೃಷ್ಣನು ಪಾಂಡವರ ಮೇಲೇಕೆ ಅಷ್ಟೊಂದು ಪ್ರೀತಿ..ಅದರಲ್ಲಿ ಮುಖ್ಯವಾಗಿ ಮಧ್ಯಮ ಪಾಂಡವ ಅರ್ಜುನನ ಮೇಲೆ.

[widget id=”custom_html-3″]

ಪಾಂಡವರು ಧರ್ಮದ ಪರವಾಗಿದ್ದವರು ಹಾಗಾಗಿಯೇ ವಾಸುದೇವ ಧರ್ಮವಂತರಾದ ಪಾಂಡವರ ಬೆನ್ನೆಲುಬಾಗಿ ಇದ್ದರು ಎಂದು. ಇನ್ನೂ ಒಂದು ಕಾರಣ ಎಂದರೆ ಅರ್ಜುನ ಕೃಷ್ಣನ ಸಹೋದರಿಯಾದ ಸುಭದ್ರೆಯನ್ನ ಮದುವೆಯಾಗುತ್ತಾನೆ. ಹಾಗಾಗಿ ತನ್ನ ತಂಗಿಯ ಪತಿ ಅರ್ಜುನನಾಗಿದ್ದ ಕಾರಣ ಪಾಂಡವರ ಜೊತೆಗೆ ಕೃಷ್ಣ ಇದ್ದ ಎಂಬ ಅಭಿಪ್ರಾಯ ಕೂಡ ಇದೆ.

Advertisements

ಅದೇನೇ ಕಾರಣಗಳಿದ್ದರೂ ಶ್ರೀಕೃಷ್ಣ ಅರ್ಜುನನ ಜೊತೆಗಿರುವುದಕ್ಕೆ, ಸಾರಥಿಯಾಗಿದ್ದಕ್ಕೆ ಮತ್ತೊಂದು ಮುಖ್ಯವಾದ ಕಾರಣವೂ ಇದೆ. ಹೌದು, ಕೃಷ್ಣಾರ್ಜುನರು ಬೇರೆ ಯಾರೂ ಅಲ್ಲ ಹಿಂದಿನ ಜನ್ಮದಲ್ಲಿ ನರನಾರಾಯಣರಾಗಿದ್ದವರು. ಸತ್ಯಯುಗದ ಸಂದರ್ಭದಲ್ಲಿ ಬದರಿಕಾಶ್ರಮದಲ್ಲಿ ನಾರಾ ನಾರಾಯಣರು ಜನ್ಮಿಸಿರುತ್ತಾರೆ. ಜನ್ಮತಃ ಮಹಾನ್ ಜ್ನ್ಯಾನಿಗಳಾಗಿದ್ದ ನಾರಾ ನಾರಾಯಣರು ಋಷಿಗಳಾಗಿದ್ದರೂ ಸಹ ಇಂತಹ ಆಯುಧವಾದರೂ ಸರಿ ಅದನ್ನ ಪ್ರಯೋಗ ಮಾಡುವಂತಹ ಕ್ಷತ್ರಿಯರು ಕೂಡ ಆಗಿದ್ದರು. ಇನ್ನು ಧರ್ಮ ಭೋದನೆಯ ಜೊತೆಗೆ ರಕ್ಕಸರನ್ನ ನಾಶ ಮಾಡುತ್ತಾ ಧರ್ಮಸಂಸ್ಥಾಪನೆಯನ್ನ ಮಾಡುವ ಕಾಯಕದಲ್ಲಿದ್ದರು. ಇನ್ನು ಇದೆ ವೇಳೆ ದಂಭೋದ್ಭವ ಎನ್ನುವ ರಕ್ಕಸ ಸೂರ್ಯನ ತಪಸ್ಸು ಮಾಡಿ ಸಹಸ್ರ ಕವಚ ಪಡೆದು ಅಹಂಕಾರಿಯಾಗಿಬಿಟ್ಟಿದ್ದ.

ಇನ್ನು ನರನಾರಾಯಣರು ದಂಭೋದ್ಭವನ ಜೊತೆ ಲಕ್ಷಾಂತರ ವರ್ಷ ಯುದ್ಧ ಮಾಡುತ್ತಾರೆ. ಇನ್ನು ಯುದ್ಧ ಮಾಡುತ್ತಾ ಮಾಡುತ್ತಾ ದಂಭೋದ್ಭವನ ಒಂಬೈನೂರಕ್ಕು ಹೆಚ್ಚು ಕವಚಗಳನ್ನ ನಾಶ ಮಾಡುತ್ತಾರೆ. ಆಗ ಇದರಿಂದ ಹೆದರಿದ ಆ ರಕ್ಕಸನು ಸೂರ್ಯದೇವನ ಮೊರೆ ಹೋಗುತ್ತಾನೆ. ಆಗ ಸೂರ್ಯದೇವನು ನರನಾರಾಯಣರ ಬಳಿ ತನ್ನ ಭಕ್ತನಾಗಿರುವ ಆ ರಕ್ಕಸನನ್ನ ಉಳಿಸುವಂತೆ ಪ್ರಾರ್ಥನೆ ಮಾಡಿಕೊಳುತ್ತಾನೆ. ಇದರಿಂದ ಕೋಪಗೊಂಡ ನಾರಾ ನಾರಾಯಣರು ಅಧರ್ಮಿಯಾಗಿರುವ ರಕ್ಕಸನ ಪರವಾಗಿ ಮೃದು ತೋರಣೆ ತೋರುವುದು ಒಳ್ಳೆಯದಲ್ಲಿ ಎಂದು ಮುಂದಿನ ಯುಗದಲ್ಲಿ ಜನಿಸುವ ನಿನ್ನ ಪುತ್ರ ರಾಕ್ಷಸ ಗುಣದವನಾಗಿರಲಿ ಎಂದು ಶಾಪ ಕೊಡುತ್ತಾರೆ. ಇನ್ನು ಈ ಯುದ್ಧವು ಮುಂದುವರಿದಾಗ ಇನ್ನೇನು ಆ ರಾಕ್ಷಸ ವಧೆಯಾಗುತ್ತೆ ಎನ್ನುವಷ್ಟರಲ್ಲಿ ಭಗವಂತ ಶಿವ ಪ್ರತ್ಯಕ್ಷನಾಗಿ ಸಲಹೆ ನೀಡಲು ಸತ್ವ, ರಜಸ್ಸು, ತಮಸ್ಸು ಎಂಬ ಮೂರೂ ಗುಣಗಳನ್ನ ಬಿಟ್ಟ ನರ ನಾರಾಯಣರು ಯುದ್ದವನ್ನ ನಿಲ್ಲಿಸುತ್ತಾರೆ.

[widget id=”custom_html-3″]

ಹಾಗಾಗಿಯೇ ನಾರ ನಾರಾಯಣರ ಸೂರ್ಯನಿಗೆ ಕೊಟ್ಟ ಶಾಪದಂತೆ ರಕ್ಕಸ ಗುಣಗಳೊಂದಿಗೆ ದ್ವಾಪರಯುಗದಲ್ಲಿ ಸೂರ್ಯ ಪುತ್ರನಾಗಿ ಮಹಾ ವೀರ ಕರ್ಣ ಜನಿಸುತ್ತಾನೆ ಎಂದು ಪೌರಾಣಿಕ ಕತೆಗಳಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಕರ್ಣನನ್ನ ವ’ಧೆ ಮಾಡುವ ಸಲುವಾಗಿ ನರನಾರಾಯಣರು ದ್ವಾಪರಯುಗದಲ್ಲಿ ಕೃಷ್ಣಾರ್ಜುನರಾಗಿ ಜನಿಸುತ್ತಾರೆ. ನಾರಾಯಣನೇ ಕೃಷ್ಣನಾಗಿ, ನರನೇ ಅರ್ಜುನನಾಗಿ ಜನಿಸಿದ ಕಾರಣ ಕೃಷ್ಣನಿಗೆ ಅರ್ಜುನ ಎಂದರೆ ತುಸು ಜಾಸ್ತಿನೇ ಪ್ರೀತಿ ಇರುತ್ತೆ. ಹಾಗಾಗಿಯೇ ಕುರುಕ್ಷೇತ್ರದ ಯುದ್ಧದಲ್ಲಿ ಕೂಡ ಅರ್ಜುನನ ಸಾರಥಿಯಾಗುವ ವಾಸುದೇವ ಕೃಷ್ಣ ಯುದ್ದದ್ದುಕ್ಕೂ ಅರ್ಜುನ ಜೋತೆಗೆ ಇರುತ್ತಾನೆ. ಇನ್ನು ಒಂದು ಕತೆಯ ಪ್ರಕಾರ ಕೃಷ್ಣಾರ್ಜುನರು ಜೊತೆಗಿದ್ದಾಗ ಒಂದೇ ರತದಲ್ಲಿದ್ದಾಗ ಅರ್ಜುನನ್ನ ಸೋಲಿಸುವುದು ವಧೆ ಮಾಡುವುದು ಅಸಾಧ್ಯ ಎಂದು ಭಗವಂತ ಶಿವನು ಜಯದ್ರಥನಿಗೆ ವಾರ ಕೊಡುವ ವೇಳೆ ಹೇಳಿರುತ್ತಾನೆ ಎಂಬ ಉಲ್ಲೇಖ ಕೂಡ ಇದೆ.