Advertisements

ಪತ್ನಿಯ ಮಾತಿಗೆ ನಸು ನಕ್ಕ ನಿಖಿಲ್.. ನಂತರ ರೇವತಿ ಮಾಡಿದ್ದೇನು ನೋಡಿ..

Cinema

ನಮಸ್ತೆ ಸ್ನೇಹಿತರೆ ಸದಾ ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯರಾಗಿ ಇರುವ ನಟ ಯುವರಾಜ್ ನಿಖಿಲ್ ಅವರು ತಮ್ಮ ಮಡದಿಯ ಜೊತೆ ಕಳೆದ ಸಂತೋಷದ ಕ್ಷಣಗಳನ್ನು  ಹಂಚಿಕೊಳ್ಳುತ್ತಾ ಇರುತ್ತಾರೆ.. ಇದೀಗ ನಿಖಿಲ್ ಅವರು ತಮ್ಮ ಮಡದಿಯ ಜೊತೆ ಇರುವ ಸಣ್ಣ ತುಣಕಿನ ವಿಡಿಯೋವನ್ನು ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ..

Advertisements

ಈ ಹಿಂದೆ ನಿಖಿಲ್ ತನ್ನ ಪತ್ನಿಯ ಜೊತೆ ನಾಗರಹೊಳೆ ಅಭಯಾರಣ್ಯಕ್ಕೆ ಭೇಟಿ ನೀಡಿ ವಿಶ್ವ ವಿಖ್ಯಾತ ಮೈಸೂರು ದಸರಾದ ಅಂಬಾರಿ ಹೊರುವ ಗಜಪಡೆಯ ನಾಯಕ ಅರ್ಜುನನನ್ನು ಬೇಟಿ ಮಾಡಿದ ಸಂದರ್ಭವನ್ನು ಅಂಚಿಕೊಂಡಿದ್ದರು.. ನಂತರ ಹ್ಯಾಂಕರ್ ಅನುಶ್ರೀ ನಡೆಸಿಕೊಡುವ ಸಂದರ್ಶನದಲ್ಲಿ ನಿಖಿಲ್ ಅವರು ಬಂದಿದ್ದರು.. ಇನ್ನೂ ಈ ಸಂದರ್ಶನದಲ್ಲಿ ಅನುಶ್ರೀ ಅವರು ಯುವರಾಜನಿಗೆ ಮಡದಿಯ ಬಗ್ಗೆ ಹಾಗೂ ದಾಂಪತ್ಯ ಜೀವನದ ಬಗ್ಗೆ ಕೇಳಿದ್ದರು..

ಇದಕ್ಕೆ ಉತ್ತರಿಸಿದ ನಿಖಿಲ್.. ರೇವತಿಯವರು ತುಂಬಾ ವರ್ಷಗಳಿಂದ ಪರಿಚಯವಾದಂತಿದೆ.. ತುಂಬಾ ಮುಗ್ದೆ ಸಣ್ಣ ಸಣ್ಣ ವಿಷಯಕ್ಕೂ ಕಾವೇರಿ ಕಣ್ಣಲ್ಲಿರುತ್ತದೆ.. ರೇವತಿ ಅಡುಗೆ ಮಾಡಿರುವುದು ನಾನು ನೋಡೇ ಇಲ್ಲಾ ಅವರ ಮನೆಯಲ್ಲಿ ಒಂದು ಸಾರಿ ಬಿರಿಯಾನಿ ಮಾಡಿದ್ದರಂತೆ ಅದು ನನಗೆ ಗೊತ್ತಿಲ್ಲ ಎಂದು ನಿಖಿಲ್ ತಮ್ಮ ಪತ್ನಿಯನ್ನು ಕಾಲೆಳಿದಿದ್ದರು..

ನಂತರ ರೇವತಿಯವರು ಮನೆಯಲ್ಲಿ ಅಡುಗೆ ಮಾಡಿ ನನಗೂ ಅಡುಗೆ ಮಾಡುವುದಕ್ಕೆ ಬರುತ್ತದೆ ಅನ್ನುವ ರೀತಿಯಲ್ಲಿ ತಿಳಿಸಿದ್ದಾರೆ.. ಇನ್ನೂ ತನ್ನ ಪತ್ನಿ ಮಾಡುತ್ತಿರುವ ಅಡುಗೆಯ ವೀಡಿಯೋವನ್ನು ನಿಖಿಲ್ ಅವರು ಇನ್ಸ್ಟಾಗ್ರಾಮ್ ಸ್ಟೇಟಸ್ ನಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ನಿಖಿಲ್ ಅವರು ಮತ್ತೊಂದು ಸಣ್ಣ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಹೌದು ಮನೆಯ ಮೆಟ್ಟಿಲಿನ ಮೇಲೆ ಕೂತಿರುವ ಈ ಜೊಡಿ ವೀಡಿಯೋವನ್ನು ಇಲ್ಲಿ ನೋಡಬಹುದು.. ರೇವತಿ ಅವರು ತನ್ನ ಪತಿಯ ಮುಖವನ್ನು ನೋಡಿ ಏನೋ ಹೇಳಿದ್ದಾರೆ.. ಅದಕ್ಕೆ ನಿಖಿಲ್ಲ ಏನೂ ಮಾತನಾಡದೆ ನಸು ನಕ್ಕಿ ತಲೆಯಾಡಿಸಿದ್ದಾರೆ.. ಪತಿಯ ನಗುವನ್ನು ಕಂಡ ರೇವತಿಯವರು ಕೂಡ ಜೋರಾಗಿ ನಕ್ಕಿದ್ದಾರೆ.. ಆ ವೀಡಿಯೋದಲ್ಲಿ ನಿಖಿಲ್, ರೇವತಿ ಚೆನ್ನಾಗಿ ಕಾಣಿಸುತ್ತಿದ್ದು ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ..