ನಮಸ್ತೇ ಸ್ನೇಹಿತರೇ, ಸೂಪರ್ ಹಿಟ್ ದುನಿಯಾ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಹೀರೊ ಆಗಿ ಎಂಟ್ರಿ ಕೊಟ್ಟ ವಿಜಯ್ ಬ್ಲಾಕ್ ಕೋಬ್ರಾ (ಕರಿ ಚಿರತೆ) ಎಂಬ ಹೆಸರಿನಿಂದಲೇ ಫೇಮಸ್ ಆದವರು. ದುನಿಯಾ ಚಿತ್ರದ ಯಶಸ್ಸಿನ ಮೂಲಕ ದುನಿಯಾ ವಿಜಯ್ ಎಂದೇ ತನ್ನ ಅಭಿಮಾನಿಗಳ ಕಡೆಯಿಂದ ಕರೆಯಿಸಿಕೊಂಡವರು. ಇನ್ನು ಇತ್ತೀಚೆಗಷ್ಟೇ ನಟ ದುನಿಯಾ ವಿಜಯ್ ನವರಸನಾಯಕ ಜಗ್ಗೇಶ್ ಅವರಿಗೆ ಕರೆ ಮಾಡಿ ಅಣ್ಣ ನನ್ನನ್ನ ಕಪ್ಪು ಚರ್ಮದವನು ಅಂತ ಕರೆಯುತ್ತಾರೆ ಎಂದು ಜಗ್ಗೇಶ್ ಬಳಿ ತಮ್ಮ ನೋವನ್ನ ತೋಡಿಕೊಂಡಿದ್ದು ಇದರ ಬಗ್ಗೆ ಜಗ್ಗೇಶ್ ಕೂಡ ಸಮಾಧಾನದ ಮಾತುಗಳ ಜೊತೆಗೆ ತಿಳಿಹೇಳಿದ್ದಾರೆ ಕೂಡ..

ಜಗ್ಗೇಶ್ ರವರು ದುನಿಯಾ ವಿಜಯ್ ತಮ್ಮ ಬಳಿ ತೋಡಿಕೊಂಡಿರುವ ನೋವಿನ ಸಂಗತಿಯನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದುನಿಯಾ ವಿಜಯ್ ನನಗೆ ಕಾಲ್ ಮಾಡಿ ಅಣ್ಣ ನಾನು ನೀವು ಕಪ್ಪಾಗಿ ಹುಟ್ಟಿರುವುದು ನಮ್ಮ ಕರ್ಮಾನಾ? ಎಂದು ಬಹಳ ನೋವಿನಿಂದ ಕೇಳಿಬಿಟ್ಟ..ಆಗ ನಾನು ಏಕೆ ಈಗ ಈತರದ ಪ್ರಶ್ನೆ ಅಂತ ಕೇಳಿದಕ್ಕೆ, ಅಣ್ಣ ನಾನು ಎಷ್ಟೇ ಕಷ್ಟಪಟ್ಟು ಜೀವನ ಕಟ್ಟಿಕೊಂಡರೂ ನನ್ನನ್ನ ಈ ಸಮಾಜವು ಕೇವಲ ನನ್ನ ಬಣ್ಣದಿಂದ ಅಳೆಯುತ್ತಾರೆ. ನಾವು ಎಷ್ಟೇ ಸಾಧನೆ ಮಾಡಿದ್ರೂ ಅದನ್ನ ಲೆಕ್ಕಕ್ಕೆ ತೆಗೆದುಕೊಳ್ಳದ ಜನರು , ನಮ್ಮ ಗಮನಕ್ಕೆ ಬರದಂತೆ ನಮ್ಮಿಂದ ಒಂದು ಸಣ್ಣ ತಪ್ಪಾದ್ರೆ ಅದರಿಂದ ನಾವು ಮಾಡಿರುವ ಸಾಧನೆಯನ್ನೇ ಜೀರೋ ಮಾಡಿ ನಮ್ಮನ್ನ ಹಂಗಿಸುತ್ತಾರೆ. ಆದರೆ ಬಿಳಿ ಬಣ್ಣದ ಜನರು ಏನೇ ಮಾಡಲಿ ಏನೇ ಸಾಧನೆ ಇಲ್ಲದಿರಲಿ ಅವರಳ್ಳಿ ಜಾಸ್ತಿ ನಂಬಿಕೆ ಇಡುತ್ತಾರೆ.

ಆಗ ನಾನು ವಿಜಿಗೆ ಉದಾಹರಣೆಯೊಂದನ್ನ ಕೇಳಿದೆ..ಈಗ ಸ್ಯಾಂಡಲ್ ವುಡ್ ನಲ್ಲಿ ನಡೆಯುತ್ತಿರುವ ಡ್ರ’ಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಾಮಹಿಮರ ಹೆಸರುಗಳನ್ನ ಹೇಳಿದ. ಅದನ್ನ ಕೇಳಿದ ನಾನು ಉತ್ತರ ಏನನ್ನು ಹೇಳಲಾರದೆ ಕ್ಷಣ ಕಾಲ ಮಾನವಾದೆ! ಆಗ ನಾನು ನನ್ನ ಮೈಚರ್ಮವನ್ನ ನೋಡಿಕೊಂಡೆ. ನನ್ನ ಚರ್ಮದ ಬಣ್ಣ ದುನಿಯಾ ವಿಜಿಗಿಂತ ಕಪ್ಪು. ಆಗ ನಾನು ನಟ ವಿಜಯ್ ಗಿದ್ಧ ಅನುಮಾನವನ್ನ ದೂರ ಮಾಡುವ ಸಲುವಾಗಿ ಉದಾಹರಣೆಸಹಿತವಾಗಿ ಹೇಳಿದೆ. ನೋಡು ವಿಜಿ ನಾನು ಜನಿಸಿದ್ದ ಹಳ್ಳಿಕಡೆಯ ಮಧ್ಯಮವರ್ಗದ ಬಡಕುಟುಂಬವೊಂದರಲ್ಲಿ. ಅನ್ನಕ್ಕಾಗಿ ಕೂಲಿ ಮಾಡುವ ದೇಹ ಬಿಸಿಲಿನಲ್ಲಿ ಬೆಂದು ಬೆಂದು ಕೃಷ್ಣವರ್ಣವಾಗಿರುತ್ತದೆ.. ಅಂತಹವರ ದೇಹದ ಉದರದಲ್ಲಿ ಕಪ್ಪಾಗಿ ಜನಿಸುವುದು ನಮ್ಮ ಪುಣ್ಯ.ಭಗವಂತ ಲಯಕಾರಕ ಶಿವ ಕಪ್ಪು..ಮಹಾಮಾತೆ ಕಾಳಿಕಾದೇವಿಯ ಬಣ್ಣ ಕೂಡ ಕಪ್ಪು..ಜಗತ್ತಿಗೆ ಗುರುವಾಗಿರುವ ವಾಸುದೇವ ಕೃಷ್ಣ ಕಪ್ಪು.

ದೇಹ ಕಪ್ಪಾದರೂ ಸರಿ, ಆದರೆ ಹೃದಯ ಮಾತ್ರ ಕಪ್ಪಾಗಿರಬಾರದು. ಇನ್ನು ಬಿಳಿ ಜನರಿಗೆ ಜನ ಮರುಳಾಗೋದು ಸತ್ಯವೇ ಸರಿ. ಗುಣವಂತೆಯಾಗಿರುವ ಹೆಣ್ಣನ್ನ ಬಿಟ್ಟು, ಬಿಳಿಹೆಣ್ಣಿಗೆ ಮನಸೋತು ಮದುವೆಯಾದ ಎಷ್ಟೋ ಜನ ಇಡೀ ಜೀವನಪರ್ಯಂತ ಸುಖವಿಲ್ಲದೆ ನೋವಿನಿಂದ ಬಾಳುವ ಬಹಳಷ್ಟು ಜನರನ್ನ ನಾವು ನೋಡಿದ್ದೇವೆ. ಇನ್ನು ನಮ್ಮ ಕಲಾರಂಗದಲ್ಲೇ ಬೆಳ್ಳಗೆ ಇದ್ದರಂತೂ ಅವರನ್ನ ಬಹಳವಾಗಿ ಮೆರೆಸುತ್ತಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಂತೂ ಅಂತಹ ಬಿಳಿ ಸುಂದರಿಯೇ ಹಾರಾಡುತ್ತಾಳೆ. ಇನ್ನು ದುರಾದೃಷ್ಟವೆಂದರೆ ಎಷ್ಟೋ ಜನ ಪ್ರತಿಭೆ ಇದ್ದರೂ ಕೂಡ ಬಣ್ಣ ಕಪ್ಪು ಎಂಬ ಕಾರಣದಿಂದಲೇ ಅವಕಾಶವಂಚಿತರಾಗುತ್ತಾರೆ.

ಅದು ಅವರವರ ಅದೃಷ್ಟಕ್ಕೆ ಬಿಟ್ಟದ್ದು. ಎಂದು ಹೀಗೆ ವಿಜಿ ಕೇಳಿದ ಪ್ರಶ್ನೆಗೆ ಸಮಾಧಾನವಂತೂ ಹೇಳಿದೆ ಎಂದು ನಟ ಜಗ್ಗೇಶ್ ರವರು ಬರೆದುಕೊಂಡಿದ್ದಾರೆ. ಇದೇನೋ ಸರಿ..ಆದರೆ ಇಲ್ಲಿ ಮೂಡುವ ಪ್ರಶ್ನೆಯೆಂದರೆ ಇಷ್ಟು ವರ್ಷಗಳ ನಾಯಕನಟನಾಗಿ ಸ್ಯಾಂಡಲ್ವುಡ್ ನಲ್ಲಿ ಮೆರೆದ, ಎತ್ತರಕ್ಕೆ ಬೆಳೆದ ದುನಿಯಾ ವಿಜಯ್ ಗೆ ಇಷ್ಟು ವರ್ಷ ಇಲ್ಲದ ತಮ್ಮ ಚರ್ಮದ ಬಣ್ಣದ ಚಿಂತೆ ಹೀಗೇಕೆ ಬಂತು ಎಂಬುದೇ ಉತ್ತರ ದೊರಕದ ಪ್ರಶ್ನೆಯಾಗಿದೆ. ಇನ್ನು ತಮ್ಮ ಹೆಸರಿನ ಪಕ್ಕ ಕರಿ ಚಿರತೆ (ಬ್ಲಾಕ್ ಕೋಬ್ರಾ) ಅಂತಲೇ ಹೆಸರಿಟ್ಟುಕೊಂಡಿದ್ದಾರೆ.