Advertisements

ಕಲಿಯಬಾರದ್ದನ್ನೆಲ್ಲಾ ಕಲಿತು ಮಾಡಬಾರದ್ದನ್ನೆಲ್ಲಾ ಮಾಡಿದ್ದೇನೆ ! ಲೂಸ್ ಮಾದ ಯೋಗಿ ಹೇಳಿದ್ದು ಈಗ ವೈರಲ್ ಆಗಿರೋದೇಕೆ ಗೊತ್ತಾ ?

Cinema

ಚಂದನವನದಲ್ಲಿ ಬಿರುಗಾಳಿ ಎಬ್ಬಿಸಿರುವ ಡ್ರ’ಗ್ಸ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಹೌದು, ದುನಿಯಾ ಸಿನಿಮಾದ ಮೂಲಕ ಲೂಸ್ ಮಾದ ಪಾತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟು ತನ್ನದೇ ಆದ ಅಪಾರ ಅಭಿಮಾನಿ ಬಳಗವನ್ನ ಹೊಂದಿರುವ ನಟ ಲೂಸ್ ಮಾಡಿ ಅಲಿಯಾಸ್ ಯೋಗಿ ಅವರನ್ನ ಆಂತರಿಕ ಭದ್ರತಾ ವಿಭಾಗವು ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು ಈಗಾಗಲೇ ಜೈಲು ಹಕ್ಕಿಯಾಗಿರುವ ನಟಿ ರಾಗಿಣಿ ಹಾಗೂ ನಟ ಯೋಗಿ ನಡುವೆ ಉತ್ತಮ ಸ್ನೇಹ ಇಲ್ಲಿ ಗಮನಿಸಬೇಕಾದ ಅಂಶ. ಇನ್ನು ಸಂದರ್ಶನವೊಂದರಲ್ಲಿ ಯೋಗಿ ಮಾತನಾಡಿರುವ ವಿಡಿಯೋವೊಂದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಅವರು ಆ ಸಂದರ್ಶನದಲ್ಲಿ ಹಂಚಿಕೊಂಡಿರುವ ಮಾಹಿತಿಯೇ ಯೋಗಿಗೆ ಕಂಟಕವಾಯ್ತಾ ಎಂಬ ಪ್ರಶ್ನೆಗಳನ್ನ ಹುಟ್ಟುಹಾಕಿದೆ..

Advertisements

ಹೌದು, ನಾಲ್ಕು ತಿಂಗಳ ಹಿಂದಷ್ಟೇ ನಟ ಯೋಗಿ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದು ಈ ವೇಳೆ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯನ್ನ ಹೇಳಿಕೊಂಡಿದ್ದರು. ನಾನು ಜೀವನದಲ್ಲಿ ಕಲಿಯಬಾರದ ಚಟಗಳನ್ನೆಲ್ಲಾ ಕಲಿತೆ, ಬಳಿಕ ಆ ಖಿನ್ನತೆಯಿಂದ ಹೊರಬರಬೇಕು ಅಂತ ಮಾಡಬಾರದ್ದನ್ನೆಲ್ಲಾ ಮಾಡಿದೆ ಎಂದು ಹೇಳಿಕೊಂಡಿದ್ದರು. ಇದರಿಂದ ನನ್ನ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರಿದ್ದು ಆಸ್ಪತ್ರೆಗೆ ಸೇರಿದೆ. ಇನ್ನು ಆಗ ನನಗೆ ಆಪರೇಷನ್ ಕೂಡ ಆಯಿತು.

ಕಟ್ಟ ಕಡೆಗೆ ಎಲ್ಲವನ್ನ ಗೆದ್ದ ನಾನು ಕೆಟ್ಟ ಚಟಗಳಿಂದ ಆಚೆ ಬಂದೆ ಎಂದು ತಮ್ಮ ಜೀವನದಲ್ಲಿ ನಡೆದ ಕೆಟ್ಟ ಘಟನೆಗಳ ಬಗ್ಗೆ ಹಂಚಿಕೊಂಡಿದ್ದರು. ಇನ್ನು ಇದರೆಲ್ಲಾದರ ಬಳಿಕ ಯಾರೋ ಮೂರನೆಯ ವ್ಯಕ್ತಿ ನನ್ನ ಬಗ್ಗ್ಗೆ ಮಾತನಾಡಿದ್ರೆ ನಾನ್ಯಾಕೆ ತಲೆ ಕೆಡಿಸಿಕೊಳ್ಳಬೇಕು ಎಂಬುದು ನನ್ನ ಅರಿವಿಗೆ ಬಂತು. ಇನ್ನು ಯಾರೋ ನನ್ನ ಜಾಗಕ್ಕೆ ಬಂದು ಆ ಜಾಗವನ್ನ ನನ್ನಿಂದ ಕಿತ್ತುಕೊಳ್ಳುತ್ತಾರೆ ಎಂದರೆ ನಾನ್ಯಾಕೆ ಆ ಜಾಗವನ್ನ ಬಿಡಬೇಕು ಅಂತ ಮನಸಿನಲ್ಲಿ ಧೃಡ ಸಂಕಲ್ಪ ಮಾಡಿಕೊಂಡೆ. ಬಳಿಕ ಎಲ್ಲವನ್ನೂ ಮರೆತು ಸಿನಿಮಾದಲ್ಲಿ ನಟಿಸಲು ಶುರು ಮಾಡಿದೆ ಎಂದು ನಟ ಯೋಗಿ ತಮ್ಮ ಜೀವನದಲ್ಲಿ ಅನುಭವಿಸಿರುವ ಕಹಿ ಘಟನೆಗಳ ಬಗ್ಗೆ ಸಂದರ್ಶನದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು.