Advertisements

ತನ್ನ ಮಗ ಯೋಗಿಗೆ ಏನೆಲ್ಲಾ ಅಭ್ಯಾಸಗಳಿತ್ತು ಎನ್ನುವ ಬಗ್ಗೆ ಬಹಿರಂಗವಾಗಿ ಹೇಳಿಕೊಂಡ ತಾಯಿ ಅಂಬುಜಾ !

Cinema

ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿರುವ ಸ್ಯಾಂಡಲ್ವುಡ್ ನ ಡ್ರ’ಗ್ಸ್ ಜಾಲದಲ್ಲಿ ಲೂಸ್ ಮಾದ ಖ್ಯಾತಿಯ ನಟ ಯೋಗಿಯ ಹೆಸರು ಕೇಳಿಬಂದಿರುವುದು ಚಂದನವನಕ್ಕೆ ಶಾಕಿಂಗ್ ಸುದ್ದಿ ಎಂದರೆ ತಪ್ಪಾಗೊದಿಲ್ಲ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಹಲವರ ವಿಚಾರಣೆ ನಡೆಯುತ್ತಿದ್ದು ಈ ವೇಳೆ ಅವರಿಂದ ನಟ ಯೋಗಿಯ ಹೆಸರು ಕೇಳಿಬಂದಿದೆ ಎನ್ನಲಾಗಿದ್ದು ಇದೇ ಕಾರಣವನ್ನಿಟ್ಟುಕೊಂಡ ಅಧಿಕಾರಿಗಳು ಯೋಗಿಯನ್ನ ಕರೆಸಿ ವಿಚಾರಣೆ ಕೂಡ ಮಾಡಿದ್ದಾರೆ. ಇನ್ನು ಇದರ ನಡುವೆಯೇ ಯೋಗಿ ನಾಲ್ಕು ತಿಂಗಳ ಹಿಂದೆ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದ ಮಾತುಗಳ ವಿಡಿಯೋ ಈಗ ವೈರಲ್ ಆಗುತ್ತಿದೆ.

Advertisements

ಹೌದು, ಸಂದರ್ಶನದಲ್ಲಿ ಮಾತನಾಡಿದ್ದ ಯೋಗಿ ನಾನು ಜೀವನದಲ್ಲಿ ಕಲಿಯಬಾರದ್ದನ್ನೆಲ್ಲಾ ಕಲಿತು ಮಾಡಬಾರದ್ದನ್ನೆಲ್ಲಾ ಮಾಡಿದೆ ಎಂದ್ದು ಹೇಳಿದ್ದರು. ಈಗ ಇದರೆಲ್ಲದರ ಕುರಿತಂತೆ ಸ್ಪಷ್ಟನೆ ನೀಡಿರುವ ಯೋಗಿ ತಂದೆ ಸಿದ್ದರಾಜು ಮತ್ತು ಅವರ ತಾಯಿ ಹಾಗೂ ನಟಿ ಕೂಡ ಆಗಿರುವ ಅಂಬುಜಾ ಅವರು ಮಾತನಾಡಿದ್ದಾರೆ. ನನ್ನ ಮಗನಿಂದ ಯಾವುದೇ ತಪ್ಪಾಗಿಲ್ಲ. ಹಾಗಾಗಿ ಹೆದರಿಕೊಳ್ಳುವ ಅವಶ್ಯಕತೆ ಕೂಡ ಇಲ್ಲ. ಇನ್ನು ಅಧಿಕಾರಿಗಳು ಯಾವ ಮಾಹಿತಿಯ ಮೇರೆಗೆ ನನ್ನ ಮಗನಿಗೆ ನೋಟಿಸ್ ನೀಡಿದ್ದಾರೆ ಎಂಬುದು ನಮಗೆ ತಿಳಿದಿಲ್ಲ.

ವಿಚಾರಣೆ ಎದುರಿಸಿ ಬಂದಿದ್ದಾನೆ. ಈ ಜಾಲದ ಕುರಿತಂತೆ ಏನಾದರೂ ಮಾಹಿತಿ ಇದ್ದರೆ ನಮಗೆ ತಿಳಿಸಿ ಎಂದು ಹೇಳಿ ಕಳುಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಇನ್ನು ಯೋಗಿ ಅವರ ತಾಯಿ ಅಂಬುಜಾ ಅವರು ಮಾತನಾಡಿದ್ದು ನನ್ನ ಮಗನ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಅವನಿಗೆ ಏನೆಲ್ಲಾ ಚಟಗಳು ಇದ್ದವೆಂಬುದು ನನಗೆ ಚೆನ್ನಾಗಿ ಗೊತ್ತು. ಆದರೆ ಡ್ರ’ಗ್ಸ್ ಅಭ್ಯಾಸ ಅವನಲ್ಲಿ ಇರಲಿಲ್ಲ. ಇನ್ನು ಸತ್ಯ ಹೇಳಬೇಕಾದರೆ ನನ್ನ ಮಗ ಯೋಗಿ ಡ್ರಿಂ’ಕ್ಸ್ ಮಾಡುತ್ತಾನೆ, ಸಿ’ಗರೇಟ್ ಸೇ’ದುತ್ತಾನೆ ಇಷ್ಟು ಬಿಟ್ಟರೆ ಅವನಲ್ಲಿ ಯಾವುದೇ ಅಭ್ಯಾಸಗಳಿಲ್ಲ.

ಹಾಗಾಗಿ ಇದರ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಇನ್ನು ವಿಚಾರಣೆ ಸಮಯದಲ್ಲಿ ಎಲ್ಲೆಲ್ಲಿ ಚಿತ್ರೀಕರಣ ನಡೆದಿತ್ತು, ಎಲ್ಲಿಗೆಲ್ಲಾ ಹೋಗಿದ್ದರು ಎನ್ನುವ ಬಗ್ಗೆ ಮಾಹಿತಿಯನ್ನ ಅಧಿಕಾರಿಗಳು ಮಾಹಿತಿಯನ್ನ ತಿಳಿದುಕೊಂಡಿದ್ದಾರೆ ಎನ್ನಲಾಗಿದೆ ಎಂದಷ್ಟೇ ಯೋಗಿ ತಾಯಿ ಅಂಬುಜಾ ಅವರು ಹೇಳಿದ್ದಾರೆ.