Advertisements

ಬಿಗ್ ಬಾಸ್ ಮನೆಗೆ ಹೋದ ನಟ ಕಳೆದುಕೊಂಡಿದ್ದು ಬರೋಬ್ಬರಿ 10 ಲಕ್ಷ !

Entertainment

ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಅತೀ ಹೆಚ್ಚು ವೀಕ್ಷಕರನ್ನ ಸೆಳೆಯುವ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಕಾರ್ಯಕ್ರಮ. ಇನ್ನು ಈ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಹೋದರೆ ಸಾಕು ಅಲ್ಲಿಯವರೆಗೂ ಗೊತ್ತಿಲ್ಲದವರು ಕೂಡ ಸೆಲಬ್ರೆಟಿಗಳಾಗಿಬಿಡುತ್ತಾರೆ. ಕೆಲ ಸ್ಪರ್ಧಿಗಳು ಬೇಕಂತಲೇ ವಿವಾದಗಳನ್ನ ತಮ್ಮ ತಲೆಯ ಮೇಲೆ ಎಳೆದುಕೊಳ್ಳುತ್ತಾರೆ. ಇನ್ನು ಬಿಗ್ ಬಾಸ್ ಕಾರ್ಯಕ್ರಮದಿಂದ ಹೋದ ಬಂದವರಿಗೆ ಬೆಳ್ಳಿ ತೆರೆ ಹಾಗೂ ಕಿರಿ ತೆರೆಯಲ್ಲಿ ಅವಕಾಶಗಳು ಸಿಕ್ಕ ಉದಾಹರಣೆಗಳು ನಮ್ಮಲ್ಲಿವೆ. ಇನ್ನು ಬಿಗ್ ಬಾಸ್ ಮನೆಗೆ ಹೋಗುವುದು ಹೆಸರು ಹಣ ಮಾಡೋದಕ್ಕೆ..ಆದರೆ ಇಲ್ಲೊಬ್ಬ ಸ್ಪರ್ಧಿ ಹತ್ತು ಲಕ್ಷ ಕಳೆದುಕೊಂಡಿದ್ದಾನೆ..

Advertisements

ಹೌದು, ತೆಲುಗಿನ ಖ್ಯಾತ ಕಾಮಿಡಿ ಶೋ ಜಬರದಸ್ತ್ ನಲ್ಲಿ ನಟಿಸುತ್ತಿದ್ದ ನಟ ಅವಿನಾಶ್ ಬಿಗ್ ಬಸ್ ಮನೆಗೆ ಎಂಟ್ರಿ ಕೊಡುವ ಸಲುವಾಗಿ ಹತ್ತು ಲಕ್ಷ ಹಣ ಕಳೆದುಕೊಂಡಿದ್ದಾರೆ. ಹೌದು ಜಬರದಸ್ತ್ ಕಾರ್ಯಕ್ರಮದಲ್ಲಿ ನಟಿಸುತಿದ್ದ ನಟ ಅವಿನಾಶ್ ಅರ್ಧಕ್ಕೆ ಬಿಟ್ಟು ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದಾರೆ. ಆದರೆ ಜಬರದಸ್ತ್ ಕಾರ್ಯಕ್ರಮದವರು ಮೊದಲೇ ಮಾಡಿದ್ದ ಅಗ್ರಿಮೆಂಟ್ ಪ್ರಕಾರ ಕಾರ್ಯಕ್ರಮವನ್ನ ಅರ್ಧಕ್ಕೆ ಬಿಟ್ಟರೆ ಹತ್ತು ಲಕ್ಷ ಹಣವನ್ನ ಕೊಡಬೇಕಾಗಿತ್ತು. ಹಾಗಾಗಿ 10 ಲಕ್ಷ ಹಣ ಪಾವತಿ ಮಾಡಿ ಶೋ ಬಿಟ್ಟು ಬಂದಿದ್ದಾರೆ.

ಇನ್ನು ಬಿಗ್ ಬಾಸ್ ಮನೆಗೆ ಹೋಗಲೆಂದು ದೊಡ್ಡ ಮೊತ್ತದ ಆಫರ್ ಕೊಡಲಾಗಿತ್ತು ಎಂದು ಹೇಳಲಾಗಿದ್ದು ವೈಲ್ಡ್ ಕಾಲ್ಡ್ ಎಂಟ್ರಿ ಮೂಲಕ ಅವಿನಾಶ್ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಪ್ರವೇಶ ಪಡೆದುಕೊಂಡಿದ್ದಾರೆ. ಇದೆ ಕಾರಣದಿಂದಲೇ ತಾನು ಮಾಡುತ್ತಿದ್ದ ಶೋಗೆ ಹತ್ತು ಲಕ್ಷ ದಂಡವನ್ನ ಕಟ್ಟಿ ಬಿಗ್ ಬಾಸ್ ಗೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.ಇನ್ನು ಟಾಲಿವುಡ್ ಖ್ಯಾತ ನಟ ನಾಗಾರ್ಜುನ್ ಅವರ ನೇತೃತ್ವದಲ್ಲಿ ತೆಲುಗಿನಲ್ಲಿ ನಡೆಯುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದ ಸ್ಪರ್ಧಿಗಳಿಗೆ ಬಾರೀ ಮೊತ್ತದ ಹಣವನ್ನ ಕೊಡಲಾಗುತ್ತಿದೆ ಎಂದು ಹೇಳಲಾಗಿದೆ.