Advertisements

ತನ್ನ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡಲು ಹೋಗಿದ್ದ ಯುವತಿ..ಬ್ಯಾಂಕ್ ಸಿಬ್ಬಂದಿ ಹೇಳಿದ್ದನ್ನ ಕೇಳಿ ಆಕೆ ಶಾಕ್ !

News

ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಹದಿನಾರು ವರ್ಷದ ಯುವತಿಯೊಬ್ಬಳು ತನ್ನ ಬ್ಯಾಂಕ್ ಖಾತೆಯಲ್ಲಿರುವ ಹಣದ ಬ್ಯಾಲೆನ್ಸ್ ಚೆಕ್ ಮಾಡಲು ಹೋಗಿದ್ದಾಳೆ. ಇದೇ ವೇಳೆ ತನ್ನ ಖಾತೆಯಲ್ಲಿ ಇರುವ ಹಣ ನೋಡಿದ ಆ ಯುವತಿ ಒಂದು ಕ್ಷಣ ತಬ್ಬಿಬ್ಬಾಗಿದ್ದು ಶಾಕ್ ಆಗಿದ್ದಾಳೆ. ಸರೋಜಾ ಎಂಬ ಆ ಯುವತಿಯ ಖಾತೆಯಲ್ಲಿ ಬರೋಬ್ಬರಿ ಹತ್ತು ಕೋಟಿ ಹಣದ ಜಮಾವಣೆ ಆಗಿತ್ತು. ಇನ್ನು ಈ ಯುವತಿ ಅನಕ್ಷರಸ್ಥೆಯಾಗಿದ್ದು ೨೦೧೮ರಲ್ಲಿ ಅಲಹಾಬಾದ್ ಬ್ಯಾಂಕಿನಲ್ಲಿ ಸೇವಿಂಗ್ಸ್ ಅಕೌಂಟ್ ತೆರೆದಿದ್ದಳು.

ಇನ್ನು ಮೊನ್ನೆ ಸೋಮವಾರದಂದು ತನ್ನ ಬ್ಯಾಂಕ್ ಖಾತೆಯಲ್ಲಿನ ಹಣ ಡ್ರಾ ಮಾಡಿಕೊಳ್ಳಲು ಹೋದಾಗ ಬ್ಯಾಂಕ್ ಅಧಿಕಾರಿಗಳು ನಿಮ್ಮ ಖಾತೆಯಲ್ಲಿ ಹತ್ತು ಕೋಟಿ ಜಮಾವಣೆಯಾಗಿರುವುದರ ಬಗ್ಗೆ ತಿಳಿಸುತ್ತಾರೆ. ಇನ್ನು ಇದರಿಂದ ಶಾಕ್ ಗೆ ಒಳಗಾದ ಯುವತಿ ಸರೋಜಾ ಕೂಡಲೇ ಆರಕ್ಷಕ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ಇನ್ನು ಆ ಯುವತಿ ಹೇಳಿರುವ ಪ್ರಕಾರ ನಾನು ಎರಡು ವರ್ಷಗಳ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಮನೆ ಇಲ್ಲದವರಿಗೆ ಹಣ ನೀಡುವ ಸಲುವಾಗಿ ನನ್ನಆಧಾರ್ ಕಾರ್ಡ್ ಫೋಟೋ ಸೇರಿದಾಂತೆ ವೈಯುಕ್ತಿಕ ವಿವರಗಳನ್ನ ಕೇಳಿದ್ದನು.

Advertisements

ಹಾಗಾಗಿ ನಾನು ನನ್ನ ಎಲ್ಲಾ ವಿವರಗಳನ್ನ ನೀಡಿದ್ದೆ ಎಂದು ಆಕೆ ಪೊಲೀಸರ ಮುಂದೆ ಹೇಳಿದ್ದಾಳೆ. ಇನ್ನು ಬ್ಯಾಂಕ್ ಸಿಬ್ಬಂದಿ ಹೇಳುವ ಪ್ರಕಾರ ನಮ್ಮ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಸರೋಜಾ ಹಲವು ಬರಿ ಹತ್ತು ಸಾವಿರದಿಂದ ಎಪ್ಪತ್ತು ಸಾವಿರದವರೆಗೆ ತನ್ನ ಖಾತೆಯಲ್ಲಿಟ್ಟಿದ್ದು ಆಗಾಗ ಬಂದು ಡ್ರಾ ಮಾಡಿಕೊಂಡು ಹೋಗುತ್ತಿದ್ದಳು ಎಂದು ಹೇಳಿದ್ದಾರೆ. ಇನ್ನು ಪ್ರ’ಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಸರೋಜಾ ವೈಯುಕ್ತಿಕ ವಿವರಗಳನ್ನ ಕೊಟ್ಟಿದ್ದ ನಿಲೇಶ್ ಕುಮಾರ್ ಎಂಬಾತನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.