Advertisements

ತಾಮ್ರದ ಉಂಗುರ ತೊಟ್ಟು ಕೊಳ್ಳುವುದರಿಂದ ಆಗುವ ಅದ್ಭುತ ಪ್ರಯೋಜನಗಳು ಏನು ಗೊತ್ತಾ.!

Astrology

ಪ್ರತಿಯೊಂದು ಲೋಹಗಳಿಗೂ ಮನುಷ್ಯನ ಗ್ರಹಗತಿಗಳಿಗೂ ಸಂಬಂಧ ಇದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಲಾಗಿದೆ. ಹೌದು, ತನ್ನದೇ ವಿಶೇಷ ಗುಣಗಳನ್ನ ಹೊಂದಿರುವ ಲೋಹವು ಆರೋಗ್ಯದ ಜೊತೆಗೆ ಗ್ರಹಸಂಬಂಧಿತ ಸಮಸ್ಯೆಗಳನ್ನ ಗುಣಪಡಿವುಕೆ ಶಕ್ತಿ ಈ ಲೋಹಗಳಲ್ಲಿದೆ . ಇನ್ನು ಇಂತಹ ಚಮತ್ಕಾರಿ ಲೋಹಗಳಲ್ಲಿ ತಾಮ್ರ ಕೂಡ ಒಂದು. ಹೌದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಾಮ್ರದ ಉಂಗುರ ಧರಿಸುವುದರಿಂದ ಸೂರ್ಯ ಮತ್ತು ಮಂಗಳ ಗ್ರಹಗಳು ಶಾಂತವಾಗುತ್ತವೆ.

Advertisements

ಯಾವುದೇ ವ್ಯಕ್ತಿಗೆ ಗ್ರಹದೋಷವಾಗಿದ್ದರೆ ಆ ವ್ಯಕ್ತಿ ತನ್ನ ಜೀವನದಲ್ಲಿ ಅನೇಕ ಕಷ್ಟ ಸಮಸ್ಯೆಗಳನ್ನ ಎದುಸಬೇಕಾಗುತ್ತದೆ. ವ್ಯಕ್ತಿಯ ಶುಭ ಅಶುಭಕ್ಕೂ ಗ್ರಹಗತಿಗಳೇ ಕಾರಣವಾಗಿವೆ. ತಾಮ್ರದ ಲೋಹವು ಶಾಂತದಾತುವಾಗಿರುವ ಕಾರಣ ಸೂರ್ಯ ಹಾಗೂ ಮಂಗಳದ ಯಾವುದೇ ದೋಷವಿದ್ದರೂ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಜ್ಯೋತಿಷ್ಯರು ಹೇಳುತ್ತಾರೆ. ಇನ್ನು ತಾಮ್ರದ ಉಂಗುರ ತೊಡುವುದರಿಂದ ಗ್ರಹಗಳು ಶಾಂತವಾಗುವುದರ ಜೊತೆಗೆ ಆ ವ್ಯಕ್ತಿಯ ಖ್ಯಾತಿ ಹೆಚ್ಚಾಗುವುದರ ಜೊತೆಗೆ ಸಮಾಜದಲ್ಲಿ ಉನ್ನತ ಸ್ಥಾನ ಹಾಗೂ ಗೌರವ ಕೂಡ ಸಿಗುತ್ತದೆ.

ಇನ್ನು ವೈಜ್ಞಾನಿಕವಾಗಿಯೂ ತಾಮ್ರದ ಉಪಯೋಗ ಬಹಳಷ್ಟಿದೆ. ಹೌದು ತಾಮ್ರದ ಉಗುರ ತೊಡುವುದರಿಂದ ದೇಹದ ಉಷ್ಣತೆ ಕೂಡ ಕಡಿಮೆಯಾಗುತ್ತದೆ. ತಾಮ್ರದ ಪಾತ್ರೆಯಲ್ಲಿಟ್ಟು ನೀರಿಟ್ಟು ಕುಡಿಯುವುದರಿಂದ ಆರೋಗ್ಯ ಸಂಬಂದಿತ ಸಮಸ್ಯೆಗಳಿಂದ ಪಾರಾಗಬಹುದು. ಅತೀ ಹೆಚ್ಚು ಕೋಪಗೊಳ್ಳುವವರು ತಾಮ್ರ ಲೋಹದ ಉಂಗುರ ತೊಡುವುದರಿಂದ ಮನಸ್ಸು ಶಾಂತವಾಗುತ್ತದೆ. ದೇಹದ ಉರಿಯೂತ, ಕಾಮಾಲೆ ರೋಗ ಹಾಗೂ ರಕ್ತದೊತ್ತಡವನ್ನ ಕಡಿಮೆ ಮಾಡುವಲ್ಲಿ ತಾಮ್ರದ ಪಾತ್ರೆಯ ನೀರು ಬಹು ಮುಖ್ಯಪಾತ್ರವನ್ನವಹಿಸುತ್ತದೆ. ಇನ್ನು ಶಾಸ್ತ್ರಗಳ ಪ್ರಕಾರ ಬಂದರೆ ಮನೆಯಲ್ಲಿ ತಾಮ್ರದ ಪಾತ್ರೆಯಿದ್ದರೆ ನಕಾರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆ ಮಾಡುವುದರ ಜೊತೆಗೆ ಶಾಂತಿ ನೆಲೆಸುವಂತೆ ಮಾಡುತ್ತದೆ.