Advertisements

ಆ ವಿಡಿಯೋ ನೋಡಿ ಬೆಚ್ಚಿಬಿದ್ದ ಮೇಘನಾ ರಾಜ್ ! ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದೇನು ಗೊತ್ತಾ ಮೇಘನಾ ಸರ್ಜಾ ?

Cinema

ಮರೆತರೂ ಮರೆಯಲಾಗದ ನೆನಪಾಗಿ ಉಳಿದಿದ್ದಾರೆ ಸ್ಯಾಂಡಲ್ವುಡ್ ಯುವನಟ ಚಿರಂಜೀವಿ ಸರ್ಜಾ. ಇನ್ನು ಸರ್ಜಾ ಕುಟುಂಬದವರಿಗಂತೂ ಮರೆಯಲಾಗದ ಕಹಿ ನೆನಪು. ಗರ್ಭಿಣಿಯಾಗಿರುವ ಮೇಘನಾ ರಾಜ್ ರವರ ಪರಿಸ್ಥಿತಿಯ ಬಗ್ಗೆ ಹೇಳುವುದೇ ಬೇಡ. ಯಾವುದೇ ಹೆಣ್ಣಿಗೂ ತಾನು ಗರ್ಭಿಣಿಯಾದಾಗ ತನ್ನ ಪತಿ ಜೊತೆಯಲ್ಲಿರೇಬೇಕೆಂಬುದೇ ಬಯಕೆಯಾಗಿರುತ್ತದೆ. ಹಾಗಾಗಿ ಮೇಘನಾ ರಾಜ್ ರವರ ನೋವು ಅವರಿಗೆ ಗೊತ್ತು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ, ಯೂಟ್ಯೂಬ್ ಚಾನೆಲ್ ಗಳಲ್ಲಿ ಬಿತ್ತರವಾಗುತ್ತಿರುವ ಸುದ್ದಿಗಳನ್ನ ನೋಡಿ ಮೇಘನಾ ರಾಜ್ ತುಂಬಾ ಬೇಸರಗೊಂಡಿದ್ದಾರಂತೆ.

Advertisements

ಹೌದು, ಯೂಟ್ಯೂಬ್ ಚಾನೆಲ್ ಒಂದು ಎರಡು ಗಂಡು ಮಕ್ಕಳ ಜೊತೆ ಮೇಘನಾ ದ್ರುವ ಸರ್ಜಾ ಅಂತ ಹಾಕಿ ಮಗು ಹಿಡಿದು ಕಣ್ಣಿರು ಹಾಕಿದ ಧ್ರುವಸರ್ಜಾ..ಮೇಘನಾ ಅವರ ಪರಿಸ್ಥಿತಿ ಏನಾಗಿದೆ ?ಅಂತ ಹೆಡ್ ಲೈನ್ ಹಾಕಿದ್ದು ಸುಳ್ಳು ಸುದ್ದಿಗಳನ್ನ ಬಿತ್ತರಿಸುತ್ತಿದ್ದಾರೆ. ಈಗಾಗಲೇ ತನ್ನ ಪ್ರೀತಿಯ ಪತಿ ಚಿರು ಸರ್ಜಾರವರನ್ನ ಕಳೆದುಕೊಂಡಿರುವ ಮೇಘನಾರವರ ಬದುಕು ಅಲ್ಲೋಲ ಕಲ್ಲೋಲವಾಗಿದೆ. ಆದರೆ ಈಗ ಮೇಘನಾರವರ ಬಗ್ಗೆ ಈ ರೀತಿಯ ಸುಳ್ಳು ವಿಡಿಯೊಗಳನ್ನ ಹಾಕುತ್ತಾ ಅವರು ಮತ್ತಷ್ಟು ಕುಗ್ಗುವಂತೆ ಮಾಡಿದ್ದಾರೆ.

ಇನ್ನು ಈ ಯೂಟ್ಯೂಬ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು ಇದು ಮೇಘನಾ ರಾಜ್ ರವರ ಗಮನಕ್ಕೆ ಬಂದಿದೆ. ಇನ್ನು ಈ ವಿಡಿಯೋವನ್ನ ನೋಡಿ ಬೇಸರವ್ಯಕ್ತಪಡಿಸಿರುವ ನಟಿ ಮೇಘನಾ ರಾಜ್ ಸುಳ್ಳು ಸುದ್ದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೋಡಿ ಯಾವ ರೀಟೈಟಾಗಿ ಮೇಘನಾ ರಾಜ್ ರವರ ಬಗ್ಗೆ ಸುಳ್ಳು ಸುದ್ದಿಯ ವಿಡಿಯೊಗಳನ್ನ ಹಾಕಿದ್ದಾರೆ..

ಇನ್ನ್ನು ವೈರಲ್ ಆಗುತ್ತಿರುವ ಆ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದಿರುವ ಮೇಘನಾ ರಾಜ್ ಆ ಫೋಟೋವನ್ನ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಹಾಗೇನಾದರೂ ನಮ್ಮ ಕುಟುಂಬಕ್ಕೆ ಸಂಬಂಧಪಟ್ಟ ಸುದ್ದಿಗಳು ಇದ್ದಲ್ಲಿ ನಾವೇ ಮಾಹಿತಿಯನ್ನನಿಮ್ಮ ಮುಂದೆ ಇಡುತ್ತೇವೆ. ದಯವಿಟ್ಟು ಇಂತಹ ಸುಳ್ಳು ಸುದ್ದಿಗಳನ್ನ ನಂಬಬೇಡಿ ಎಂದು ಅವರು ಸರ್ಜಾ ಕುಟುಂಬದ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇನ್ನು ಮುಂದಾದರೂ ಸರ್ಜಾ ಕುಟುಂಬದ ಬಗ್ಗೆ ಅಥವಾ ಯಾರದೇ ವೈಯುಕ್ತಿಕ ಜೀವನದ ಬಗ್ಗೆ ಈ ರೀತಿಯ ಸುಳ್ಳು ವಿಡಿಯೊಗಳನ್ನ ಹಾಕಿ ಅವರ ಮನಸ್ಸಿಗೆ ಮತ್ತಷ್ಟು ನೋವಾಗುವ ಹಾಗೇ ಮಾಡಬೇಡಿ ಎಂದು ನಾವು ಕೇಳಿಕೊಳ್ಳುತ್ತೇವೆ. ಮೇಘನಾ ರವರ ಬಗ್ಗೆ ಹಾಕಿರುವ ಮತ್ತೊಂದು ಸುಳ್ಳಿನ ವಿಡಿಯೋ ಇದು..