Advertisements

ಬಜಾಜ್ ಚೇತಕ್ ಸ್ಕೂಟರ್ ಹವಾ ಒಂದು ಕಾಲದಲ್ಲಿ ಹೇಗಿತ್ತು ಗೊತ್ತಾ..?

Kannada Mahiti

ನಮಸ್ತೆ ಸ್ನೇಹಿತರೆ ಬಜಾಜ್ ಚೇತಕ್ 90 ರ ದಶಕದಲ್ಲಿ ಜನಪ್ರಿಯತೆ ಪಡೆದಿದ್ದ ದ್ವಿಚಕ್ರ ವಾಹನ ಇದು.. ಆ ಕಾಲದಲ್ಲಿ ಬಜಾಜ್ ಚೇತಕ್ ಒಂದು ವಾಹನ ಆಗಿರಲಿಲ್ಲ ಬಡವರ ಮನೆಗೆ ಇದೊಂದು ಐರಾವತವಾಗಿತ್ತು.. ಈ ಸ್ಕೂಟರ್ ಆಕರ್ಷಕ ಹಾಗೂ ಸುಲಭವಾಗಿ ಚಲಾಯಿಸುವ ಗಾಡಿ.. ಒಬ್ಬ ಹುಡುಗನಿಗೆ ಮದುವೆ ನಿಶ್ಚಯ ಆಗುತ್ತೆ ಅಂದರೆ ಗಂಡಿನ ಕಡೆಯವರ ಬೇಡಿಕೆಗಳಲ್ಲಿ ಈ ಚೇತಕ್ ಸ್ಕೂಟರ್ ಆಯ್ಕೆ ಇದ್ದೇ ಇರುತ್ತಿತ್ತು.. ಎಷ್ಟೋ ಬಾರಿ ಚೇತಕ್ ಬಾರದೆ ಮದುವೆಗಳು ಮುಂದಕ್ಕೆ ಹೋಗುತ್ತಿದ್ದ ಪರಿಣಾಮ ಈ ಬಜಾಜ್ ಚೇತಕ್ ಅನೇಕ ಮೂಹೂರ್ತವನ್ನ ಹಿಮ್ಮೆಟ್ಟುವ ಎಂಬುವ ಮಾತು ಜನಪ್ರಿಯವಾಗಿತ್ತು..

Advertisements

ಬಜಾಜ್ ಚೇತಕ್ ಅಂದಿನ ಭಾರತೀಯ ಜನ ಜೀವನ ಒಂದು ಸೊಗಸೇ ಆಗಿ ಹೋಗಿತ್ತು.. ಈ ಬಜಾಜ್ ಚೇತಕ್ ಬಜಾಜ್ ಆಟೋ ಕಂಪನಿಯಿಂದ 1972 ರಲ್ಲಿ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಭಾರತದ ಮೊದಲ ದ್ವಿಚಕ್ರ ವಾಹನ.. ತನ್ನ ವಿಸ್ತಾರವಾದ ಗಾತ್ರದಿಂದಾಗಿ ಬಜಾಜ್ ಚೇತಕ್ ಆಗಿನ ಲಕ್ಷಾಂತರ ಭಾರತೀಯ ಕೌಟುಂಬಿಕ ಸಾರಿಗೆಯಾಗಿದ್ದು.. ನಮ್ಮ ಬಜಾಜ್ ಎಂದೇ ಜನಪ್ರಿಯವಾಗಿತ್ತು.. 70 ರ ದಶಕದಲ್ಲೇ ಬಜಾಜ್ ಚೇತಕ್ ಭಾರತದ ನಂಬರ್ ಒನ್ ಸ್ಕೂಟರ್ ಆಗಿದ್ದು ಅತೀ ಹೆಚ್ಚು ಬೇಡಿಕೆ ಇತ್ತು.. ಒಂದು ಸಮಯದಲ್ಲಿ ಚೇತಕ್ ನ ಹೊಸ ಮಾಡೆಲ್ ಗಾಗಿ ಐದಾರು ವರ್ಷ ಕಾಯಬೇಕಾಗುವ ಅನಿವಾರ್ಯತೆ ಇತ್ತು.. ಇನ್ಬೂ ಸೆಕೆಂಡ್ಸ್ ಹ್ಯಾಂಡಲ್ ಚೇತಕ್ ಕೂಡ ಸಿಗೋದು ಕಷ್ಟವಾಗಿತ್ತು.. ಒಂದು ವೇಳೆ ಸಿಕ್ಕರೂ ಸಹ ಅವುಗಳ ಬೆಲೆ ದುಬಾರಿಯಾಗಿತ್ತು..

ಪ್ರತಿ ಲೀಟರ್ ಗೆ 60 ಮೈಲೇಜ್ ಕೊಡುತ್ತಿದ್ದ ಚೇತಕ್ ಆ ಕಾಲದ ಅರ್ಥಿಕ ಸ್ನೇಹಿ ಹಾಗೂ ಕೌಟುಂಬಿಕ ಸ್ನೇಹಿ ದ್ವಿಚಕ್ರ ವಾಹನ ಎಂದು ಎಗ್ಗಳಿಕೆ ಪಡೆದಿತ್ತು.. ಇನ್ನೂ ಆದುನಿಕ ಬೈಕ್ ಗಳು ಬಂದ ನಂತರ ಚೇತಕ್ ಸೋತು ಹೋಯಿತು.. ಅಂತಿಮವಾಗಿ 2005 ರ ವೇಳೆಗೆ ಚೇತಕ್ ತನ್ನ 33 ವರ್ಷಗಳ ಸುದೀರ್ಘ ಪಯಣವನ್ನ ಮುಗಿಸಿತು.. 2005 ರಲ್ಲಿ ಚೇತಕ್ ನಿರ್ಮಾಣ ನಿಲ್ಲಿಸಿತು ಎಂದು ಹೇಳಿದಾಗ ಚೇತಕ್ ನ ಆ ಸುದೀರ್ಘ ಬಳಕೆದಾರರಿಗೆ ಬಾರಿ ನಿರಾಸೆ ಮಾಡಿತ್ತು.. ಇನ್ನೂ 33 ವರ್ಷಗಳ ಕಾಲ ಚೇತಕ್ ಸ್ಕೂಟರ್ ನೀಡಿದ ನಿಸ್ವಾರ್ಥ ಸೇವೆ ಇಂದಿಗೂ ಹೆಮ್ಮೆ… ಈ ಚೇತಕ್ ಸ್ಕೂಟರ್ ನ ನಿಮ್ಮ ಅಭಿಪ್ರಾಯ ತಿಳಿಸಿ..