Advertisements

ಶಂಕರ್ ನಾಗ್ ಮಗಳು ಯಾರು ಗೊತ್ತಾ..? ಈಗ ಅವರು ಮಾಡತ್ತಿರುವ ಕೆಲಸ ನೋಡಿ..

Cinema

ನಮಸ್ತೆ ಸ್ನೇಹಿತರೆ.. ಶಂಕರ್ ನಾಗ್ ಅವರು ಕನ್ನಡ ಚಿತ್ರರಂಗದ ದಂಥ ಕಥೆ.. ಮರೆಯಲಾಗದ ಮಾಣಿಕ್ಯ. ಹೌದು ಕನ್ನಡ ಚಿತ್ರ ಪ್ರೇಮಿಗಳ ಮನಸ್ಸಿನಲ್ಲಿ ಅಚ್ಚ ಅಳಿಯದ ಮುದ್ರೆ ಒತ್ತಿರುವ ಶಂಕರ್ ನಾಗ್ ಕನ್ನಡಿಗರ ಮನೆ ಮನೆಯಲ್ಲಿಯೂ ಬೆರೆತು ಹೋಗಿದ್ದಾರೆ.. ಮೂವತ್ತು ವರ್ಷದ ಬದುಕಿನ ಪಯಣದಲ್ಲಿ ನೂರಾರು ವರ್ಷ ನೆನಯುವತಂಹ ಸಾಧನೆ ಮಾಡಿದ ಛಲಗಾರ.. ನಾಯಕ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಕನ್ನಡ ಚಿತ್ರರಂಗವನ್ನು ಬೆಳಗಿದ್ದಾರೆ.. 80 ರ ದಶಕದಲ್ಲಿ ಮಿಂಚಿನ ಓಟ ಆರಂಭಿಸಿದ ಶಂಕರ್ ನಾಗ್ ಅವರ ಓಟವನ್ನು ವಿದಿ ಅನ್ನುವುದು ಬೇಗನೆ ಕರೆದುಕೊಂಡು ಹೋಯಿತು.. ಅಂತಹ ಮಹಾನ್ ನಟನಿಗೆ ಒಬ್ಬರು ಮಗಳು ಕೂಡ ಇದ್ದಾರೆ ಎನ್ನುವುದು ತುಂಬಾ ಜನಕ್ಕೆ ತಿಳಿದಿಲ್ಲ.. ಹಾಗಾದರೆ ಶಂಕರ್ ನಾಗ್ ಅವರ ಮಗಳು ಯಾರು.. ಅವರು ಈಗ ಎಲ್ಲಿದ್ದಾರೆ ಏನು ಮಾಡುತ್ತಾ ಇದ್ದಾರೆ ಎನ್ನುವುದನ್ನು ತಿಳಿಯೋಣ..

Advertisements

ಹೌದು ಸ್ನೇಹಿತರೆ ಶಂಕರ್ ನಾಗ್ ಇಂದಿಗೂ ಕೂಡ ಕನ್ನಡಿಗರ ಮನದಲ್ಲಿ ಕಿಂಗ್ ಆಗಿ ಮೆರೆಯುತ್ತಿದ್ದಾರೆ.. ಆದರೆ ಅವರ ಮಗಳು ಕಾವ್ಯ ನಾಗ್ ಈಗ ಏನುಮಾಡುತ್ತಿದ್ದಾರೆ ಗೊತ್ತಾ? ಹೊಸೂರುನಲ್ಲಿ ಇರುವ ತಂದೆಯ ಜಮೀನಿನಲ್ಲಿ ಕೆ’ಮಿಕಲ್ ಮುಕ್ತ ಸೋಪ್ ಮತ್ತು ಆಯಿಲ್ ತಯಾರಿಸುವ ಕೊಕೊನೆಸ್ ಎಂಬ ಕಂಪನಿ ತೆರೆದಿದ್ದಾರೆ.. ಈ ಕಂಪನಿಯಲ್ಲಿ ಕಾವ್ಯ ನಾಗ್ ನೈಸರ್ಗಿಕ ಸೋಪ್ ಮತ್ತು ಆಯಿಲ್ ಉತ್ಪಾದನೆಯನ್ನು ಮಾಡಿ ಮಾರಾಟ ಮಾಡುತ್ತಿದ್ದಾರೆ..

ಇನ್ನೂ ತಂದೆಯನ್ನು ಕಳೆದುಕೊಂಡ ಕಾವ್ಯ ನಾಗ್ ಅವರು ಸ್ವಂತ ಪರಿಶ್ರಮವನ್ನು ನೋಡಿದರೆ ಇವರ ಧೈರ್ಯ ಮೆಚ್ಚುವಂತದ್ದು.. ಕಾವ್ಯ ನಾಗ್ ವನ್ಯ ಜೀವಿ ವಿಭಾಗದಲ್ಲಿ ಎಮ್.ಎ ಪದವಿಯನ್ನು ಮುಗಿಸಿದ್ದಾರೆ.. ಇನ್ನೂ ಕಾವ್ಯನಾಗ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಗಂಡನ ಜೊತೆ ವಿಯೆಟ್ನಾಂ ದೇಶಕ್ಕೆ ತೆರಳಿದ್ದರು.. ನಂತರ ತಮ್ಮ್ ನಾಡಿನಲ್ಲೇ ಏನಾದರು ಸಾಧನೆ ಮಾಡಬೇಕು ಎನ್ನುವ ಛಲದಿಂದ ಕರುನಾಡಿಗೆ ಬಂದು ಸ್ವಂತ ಕಂಪನಿಯನ್ನು ಕಟ್ಟಿದ್ದಾರೆ.. ನಿಜಕ್ಕೂ ಹೆಮ್ಮೆ ಪಡುವಂತದ್ದು.. ತಂದೆಯಂತೆ ಮಗಳು ಎನ್ನುವ ಹೆಸರು ಪಡೆದುಕೊಂಡಿದ್ದಾರೆ.. ಕಾವ್ಯ ನಾಗ್ ಅವರು ಕಟ್ಟಿರುವ ಕಂಪನಿ ಚೆನ್ನಾಗಿ ಬೆಳೆದು ಉನ್ನತ ಮಟ್ಟಕ್ಕೆ ಹೋಗಲಿ ಅವರ ವ್ಯಾಪಾರ ವೃದ್ಧಿಸಲಿ ಎಂದು ಆಶಿಸೋಣ..

+