Advertisements

ಪುನಿತ್ ರಾಜ್ ಕುಮಾರ್ ಮಕ್ಕಳು ಈಗ ಹೇಗಿದ್ದಾರೆ ನೋಡಿ..

Cinema

ನಮಸ್ತೇ ಸ್ನೇಹಿತರೆ ಪವರ್ ಸ್ಟಾರ್ ಪುನಿತ್ ರಾಜಕುಮಾರ್ ಪ್ರತಿಯೊಬ್ಬ ಯುವಕರಿಗೂ ಸ್ಪೂರ್ತಿ.. ಕನ್ನಡ ಹೆಮ್ಮೆಯ ಮಗ.. ತಂದೆಯಂತೆ ಮಗ.. ಹೌದು ಡಾ.ರಾಜ್ ಕುಮಾರ್ ಅವರಂತೆ ಒಳ್ಳೆಯ ಹೃದಯಶಾಲಿ, ಎಲ್ಲರನ್ನೂ ಪ್ರೋತ್ಸಾಹಿಸುವ ಗುಣವಂತ, ಒಳ್ಳೆಯ ಕೆಲಸಕ್ಕೆ ಯಾವತ್ತೂ ಕೂಡ ಮುಂದೆ ನಿಂತಿರುತ್ತಾರೆ.. ಇನ್ನೂ ಪುನಿತ್ ರಾಜ್ ಕುಮಾರ್ ಅಶ್ವಿನಿ ಎಂಬ ಹುಡುಗಿಯನ್ನು ಪ್ರಿತಿಸುತ್ತಿದರು.. ಆದರೆ ತಂದೆ ರಾಜಕುಮಾರ್ ಅವರ ಹತ್ತಿರ ಹಾಗೂ ಮನೆಯಲ್ಲಿ ಏಳಲು ಹಾಗದೆ ತುಂಬಾ ಕಷ್ಟಪಟ್ಟಿದ್ದರು..

Advertisements

ನಂತರ ಹೇಗೋ ದೈರ್ಯ ಮಾಡಿ ಅಪ್ಪಾಜಿ ಅವರ ಅತ್ತಿರ ಹೇಳಿದಾಗ.. ರಾಜಕುಮಾರ್ ಒಪ್ಪಿಗೆ ನೀಡಿ ನಿಮ್ಮ ತಾಯಿಯ ಹತ್ತಿರವೂ ಕೂಡ ಮಾತಾಡು ಎಂದಿದ್ದರಂತೆ.. ಕೊನೆಗೆ ತಮ್ಮ ಕುಟುಂಬ ಹಾಗೂ ಅಶ್ವಿನಿ ಪೊಷಕರನ್ನು ಒಪ್ಪಿಸಿ.. ಡಿಸೆಂಬರ್ 1, 1999 ರಲ್ಲಿ ಪುನಿತ್ ರಾಜ್‍ಕುಮಾರ್ ಇಷ್ಟ ಪಟ್ಟ ಹುಡುಗಿಯನ್ನ ಮದುವೆಯಾಗುತ್ತಾರೆ.. ಇನ್ನೂ ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಕೂಡ ಇದ್ದಾರೆ.. ಮೊದಲನೆಯ ಮಗಳ ಹೆಸರು ದೃತಿ.. ಎರಡನೇ ಮಗಳ ಹೆಸರು ವಂದಿತ..

ಪುನಿತ್ ರಾಜ್ ಕುಮಾರ್ ಅವರು ದೊಡ್ಡ ಸ್ಟಾರ್ ಮಕ್ಕಳು ಎಂಬ ಭಾವನೆ ತೋರಿಸದೆ ಬಹಳ ಶಿಸ್ತಿನಿಂದ ಮಕ್ಕಳನ್ನು ಬೆಳೆಸುತ್ತಿದ್ದಾರೆ.. ಇನ್ನೂ ಈ ಮಕ್ಕಳು ಕ್ಯಾಮೆರಾ ಮುಂದೆ ಕಾಣಿಸಿಗೋದು ತುಂಬಾ ಅಪರೂಪ.. ಓದಿನ ಕಡೆಗೆ ಹೆಚ್ಚಿನ ಗಮನ ಕೊಟ್ಟಿದ್ದಾರೆ.. ಇನ್ನೂ ದೃತಿ ಮತ್ತು ವಂದಿತಾಗೆ ಅಣ್ಣ ವಿನಯ್ ರಾಜಕುಮಾರ್ ಅಂದರೆ ಬಹಳ ಅಚ್ಚುಮೆಚ್ಚು.. ಪುನಿತ್ ರಾಜಕುಮಾರ್ ಸಿನಿಮಾ ಕೆಲಸಗಳಲ್ಲಿ ತೊಡಗಿದ್ದರೆ ಇತ್ತ ಪತ್ನಿ ಅಶ್ವಿನಿ ಅವರು ಮನೆಯ ಜವಾಬ್ದಾರಿಯನ್ನು ಹೊತ್ತು ಪುನಿತ್ ರಾಜಕುಮಾರ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ..

ಪುನಿತ್ ರಾಜ್ ಕುಮಾರ್ ಈಗ P.R.K ಪ್ರೊಡಕ್ಷನ್ಸ್ ಅರಂಬಿಸಿದ್ದು ಹೊಸ ಪ್ರತಿಬೆಗಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ.. ಇನ್ನೂ ಪುನಿತ್ ರಾಜ್ ಕುಮಾರ್ ಅವರ ದೊಡ್ಡ ಗುಣವೆಂದರೆ ಒಂದು ಕೈಯಿಂದ ಮಾಡಿದ ಕೆಲಸ ಇನ್ನೊಬ್ಬರಿಗೆ ಗೊತ್ತಾಗುವುದಿಲ್ಲ.. ಅಷ್ಟರ ಮಟ್ಟಿಗೆ ತೋರಿಕೆ ಇಲ್ಲದೆ ಹಲವರಿಗೆ ಸಹಾಯವನ್ನು ಮಾಡಿದ್ದಾರೆ.. ಪುನಿತ್ ರಾಜಕುಮಾರ್ ಸಿನಿಮಾವೇ ಬೇಡ ಎಂದಿದ್ದರು.. ಆದರೆ ಅಪ್ಪು ಸಿನಿಮಾ ಸೂಪರ್ ಹಿಟ್ ಕಂಡಿತ್ತು.‌. ಈಗ ಹಲವಾರು ಸಿನಿಮಾಗಳನ್ನು ಮಾಡಿ ಸ್ಯಾಂಡಲ್ವುಡ್ ನ ಟಾಪ್ ನಟನಾಗಿ ನಿಂತಿದ್ದಾರೆ..