ನಮಸ್ತೆ ಸ್ನೇಹಿತರೆ.. ಸಾಮಾನ್ಯವಾಗಿ ಯಾರಾದರು ಕೈ ಕಾಲುಗಳನ್ನು ಕಳೆದುಕೊಂಡರೆ ಕೃತಕ ಕೈ ಕಾಲುಗಳನ್ನು ಜೋಡಣೆ ಮಾಡುವುದನ್ನು ನೋಡಿರುತ್ತೀರಾ.. ಆದರೆ ಇಲ್ಲಿ ನಡೆದಿರುವಂತಹ ಆ’ಪರೇಶನ್ ವೈದ್ಯಕೀಯ ಲೋಕದಲ್ಲೇ ಒಂದು ಸಾಧನೆ ಎನ್ನಬಹುದು.. ಹೌದು ವೈದ್ಯಕೀಯದಲ್ಲಿ ಇದೊಂದು ವಿಸ್ಮಯ ಆ’ಪ’ರೇಶನ್.. ಇಂತಹ ಆ’ಪರೇ’ಶನ್ ಮಾಡಿರುವುದು ಪ್ರಪಂಚದಲ್ಲೇ ಮೊದಲು ಅದರಲ್ಲೂ ನಮ್ಮ ಭಾರತ ಎನ್ನುವುದು ಹೆಗ್ಗಳಿಕೆ ಪಡೆದಿದೆ.. ಪುಣೆ ಒಂದರಲ್ಲಿ ಟಾಟಾ ಮೋಟರ್ ಕಂಪನಿಯ ವ್ಯವಸ್ಥಾಪರಾಗಿ ಕೆಲಸ ಮಾಡುತ್ತಿರುವ ಕರ್ನಾಟಕದ ಸಿದ್ದನಗೌಡ ಹಾಗೂ ಪತ್ನಿ ಸುಮಾ ಅವರಿಗೆ ಶ್ರೇಯಾ ಸಿದ್ದನಗೌಡ ಎಂಬ 19 ವರ್ಷದ ಮಗಳಿದ್ದಾರೆ..

ಮಣಿಪಾಲ್ ಇನಸ್ಟಿಟ್ಯೂಟ್ ಟೆಕ್ನಾಲಜಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಶ್ರೇಯಾ ಒಂದು ದಿನ ಬಸ್ ನಲ್ಲಿ ಕಾಲೇಜಿಗೆ ಬರುತ್ತಿದ್ದಾಗ ಬಸ್ ಅ’ಪಘಾ’ತವಾಗುತ್ತದೆ.. ಈ ಬಸ್ ನಲ್ಲಿಯೇ ಇದ್ದ ಶ್ರೇಯಾ ತನ್ನ ಎರಡು ಕೈಗಳನ್ನು ಕಳೆದುಕೊಂಡುಬಿಡುತ್ತಾಳೆ.. ಈ ಘ’ಟನೆ ನಂತರ ಶ್ರೇಯಾ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಪ್ರತಿಕ್ಷಣ ಪ್ರತಿದಿನವೂ ಕೂಡ ಹೋರಾಟ ಮಾಡುತ್ತಿದ್ದರು.. ಇನ್ನೂ ತನ್ನ ಎರಡು ಕೈಗಳನ್ನು ಕಳೆದುಕೊಂಡು ಜೀವನವೇ ಬೇಸರವಾಗಿದ್ದ ಶ್ರೇಯಾ ಅವರಿಗೆ ದೇವರು ಕರುಣೆ ತೋರುತ್ತಾನೆ..

ಹೌದು ಎರ್ನಾಕುಲಮ್ ನ ಸಚಿನ್ ಎಂಬಾತನಿಗೆ ಮೆದುಳು ನಿ’ಷ್ಕ್ರಿಯವಾಗಿದ್ದ ಕಾರಣ ಆತನ ತಂದೆ ತಾಯಿ ಮಗನ ಎರಡು ಕೈಗಳನ್ನು ಶ್ರೇಯಾ ಅವರಿಗೆ ದಾನ ಮಾಡಲು ಮುಂದಾಗುತ್ತಾರೆ.. ಈ ಎರಡು ಕೈಗಳನ್ನು ಪಡೆದುಕೊಂಡ ಡಾಕ್ಟರ್ಸ್ ಶ್ರೆಯಾ ಅವರಿಗೆ ಜೋಡಣೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ.. ನಂತರ ದಿನಗಳಲ್ಲಿ ಶ್ರೇಯಾ ತನ್ನ ಕೈ ಬೆರಳುಗಳನ್ನು ಅಲುಗಾಡಿಸುತ್ತಿದ್ದು ಒಂದು ವರ್ಷದ ಹೊಳಗಡೆ ಶೇಕಡ 80% ರಷ್ಟು ಕೈಗಳನ್ನು ಚಲನೆ ಮಾಡುತ್ತಾಳೆ ಎಂದು ಡಾಕ್ಟರ್ಸ್ ತಿಳಿಸಿದ್ದಾರೆ..

ವಿಶ್ವದಲ್ಲಿ ಈತರಹದ ಆ’ಪರೇಶನ್ ಒಂಬತ್ತು ಹಾಗಿದೆ ಆದರೆ ಎಷ್ಯಾದಲ್ಲೇ ಇದೇ ಮೊದಲು.. ಅದರಲ್ಲೂ ಹುಡುಗನ ಕೈಯನ್ನು ಹುಡುಗಿಗೆ ಜೋಡಣೆ ಮಾಡಿರುವುದು ಪ್ರಪಂಚದಲ್ಲೇ ಮೊದಲು ಎಂದು ಡಾಕ್ಟರ್ಸ್ ತಿಳಿಸಿದ್ದಾರೆ.. ಇನ್ನೂ ಈ ಹುಡುಗಿಯ ಕೈ ಜೋಡಣೆ ಮಾಡುವಲ್ಲಿ ಯಶಸ್ವಿಯಾಗಿರುವುದು ಅಮೃತ ಆಸ್ವತ್ರೆಯ ವೈದ್ಯರು.. ಶ್ರೆಯಾ ಅವರಿಗಾಗಿ ಇನ್ನೊಂದು ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಕೈಗಳನ್ನು ದಾನ ಮಾಡಿದ ಸಚಿನ್, ಅವರ ತಂದೆ ತಾಯಿ.. ಹಾಗೂ ಕೈಗಳನ್ನು ಜೋಡೆಣೆ ಮಾಡುವಲ್ಲಿ ಯಶಸ್ವಿಯಾದ ವೈದ್ಯರಿಗೆ ಧನ್ಯವಾದಗಳು.. ಮುಖ್ಯವಾಗಿ ಕೈಗಳನ್ನು ದಾನ ಮಾಡಿದ ಸಚಿನ್ ಅವರನ್ನು ಕೂಡ ಇಲ್ಲಿ ಎಲ್ಲರೂ ನೆನೆಯಲೇ ಬೇಕು.. ಶ್ರೇಯಾ ಅವರ ಕೈಗಳಲ್ಲಿ ಸಚಿನ್ ಸದಾ ಅಮರರಾಗಿರುತ್ತಾರೆ..