Advertisements

ಆ್ಯಂಕರ್ ಅನುಶ್ರೀ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯಗಳು! ಇವೇ ನೋಡಿ..

Cinema

ನಮಸ್ತೆ ಸ್ನೇಹಿತರೆ.. ಆ್ಯಂಕರ್ ಅನುಶ್ರಿಯವರು ಕನ್ನಡಲ್ಲೇ ಅದ್ಬುತ ಆ್ಯಂಕರ್ ಏನಿಸಿಕೊಂಡಿದ್ದಾರೆ.‌. ಹೌದು ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿರುವ ಒಬ್ಬ ಆ್ಯಂಕರ್ ಇದ್ದಾರೆ ಅಂದರೆ ಅದು ಅನುಶ್ರೀ ಅವರು.. ಅನುಶ್ರೀ ಅವರ ಆ್ಯಂಕರಿಂಗ್ ಗೆ ಸಾಲು ಸಾಲು ರಿಯಾಲಿಟಿ ಶೋಗಳು ಕಾಯುತ್ತಾ ಇರುತ್ತದೆ.. ಇನ್ನೂ ಈ ಉನ್ನತ ಮಟ್ಟಕ್ಕೆ ಬರಲು ಅನುಶ್ರಿಯವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ.. ಹೌದು ಸ್ನೇಹಿತರೆ ಅನುಶ್ರೀ ಅವರು ಒಂದು ಕಡು ಬಡತನ ಕುಟುಂಬದಲ್ಲಿ ಹುಟ್ಟಿದವರು.. ಇವರಿಗೆ ಇದ್ದಿದ್ದು ಒಂದೇ ಆಸೆ ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಬೇಕು ಎನ್ನುವುದು‌ ಚಿಕ್ಕಂದಿನ ಆಸೆಯಾಗಿತ್ತು..

Advertisements

ಇನ್ನೂ ಅನುಶ್ರಿಯವರು ಚಿಕ್ಕ ವಯಸ್ಸಿನಲ್ಲಿ ಇದ್ದಾಗಲೇ ಇವರ ತಂದೆ ತಾಯಿ ಬೇರೆಯಾದರು.. ಗಂಡ ಬೇರ್ಪಟ್ಟ ನಂತರ ತಾಯಿ ಎಲ್ಲಾ ಜವಾಬ್ದಾರಿಯನ್ನು ಹೊತ್ತು ಮಕ್ಕಳನ್ನು ಚೆನ್ನಾಗಿ ಓದಿಸುತ್ತಿದ್ದರು.. ಅನುಶ್ರಿಯವರು ಪಿಯುಸಿ ಓದುವಾಗಲೇ ತಾಯಿಯ ಕಷ್ಟವನ್ನ ನೋಡಲಾಗದೆ ಏನಾದರೂ ಸಂಪಾದನೆ ಮಾಡಬೇಕು ಅಮ್ಮ ಮತ್ತು ತಮ್ಮನ ಜವಾಬ್ದಾರಿಯನ್ನು ತಾನೇ ಹೊರಬೇಕೆಂದು ನಿರ್ದಾರ ಮಾಡುತ್ತಾರೆ.. ಆದರೆ ಅನುಶ್ರಿಯವರಿಗೆ ಏನು ಮಾಡಬೇಕೆಂದು ತಿಳಿಯದೇ ತನ್ನ ಮಾತಿನ ಚಾತುರ್ಯವನ್ನೇ ಬಂಡವಾಳವನ್ನಾಗಿಸಿಕೊಂಡು ಮಂಗಳೂರಿಗೆ ಬಂದು ನಮ್ಮ ಟಿವಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ..

ಇನ್ನೂ ಅಲ್ಲಿ ಕೆಲಸ ಮಾಡುತ್ತಿದ್ದ ಅನುಶ್ರಿಯವರಿಗೆ ಬರುತ್ತಿದ್ದ ಸಂಬಳ ಸ್ವಲ್ಪಮಟ್ಟಿಗೆ ಮಾತ್ರ.. ಇದರಿಂದ ಕುಟುಂಬವನ್ನು ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ.. ಈಗಾಗಿ ಅನುಶ್ರೀ ಆತಂಕ ಭಯದ ಜೊತೆ ಅತ್ತಾರು ಕನಸನ್ನು ಹೊತ್ತಿಕೊಂಡು ಬೆಂಗಳೂರಿಗೆ ಬಂದು ಇಳಿಯುತ್ತಾರೆ.. ನಂತರ ತನ್ನ ಪ್ರತಿಭೆಯಿಂದ ಮೊದಲಿಗೆ ಇಟಿವಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ‌‌.. ಇನ್ನೂ ಇಟಿವಿಯಲ್ಲಿ ಒಂದು ಎಪಿಸೋಡ್ ಗೆ ಅನುಶ್ರಿಯವರಿಗೆ ಸಿಗುತ್ತಿದ್ದ ಸಂಬಳ ಕೇವಲ 250 ರೂಪಾಯಿ.. ಆದರೂ ಛಲದಿಂದ ಅನುಶ್ರೀ ಆ್ಯಂಕರಿಂಗ್ ಹಾಗೂ ಡಬ್ಬಿಂಗ್ ಗಳನ್ನು ಮಾಡುತ್ತಾ ಕಷ್ಟಪಟ್ಟ ಅನುಶ್ರೀ ಒಂದು ದಿನ ತನ್ನ ಗುರಿಯನ್ನು ತಲುಪಿ ಕನ್ನಡಿಗರ ಮನೆ ಮಾತಾಗುತ್ತಾರೆ..

ನೂರಾರು ಪ್ರತಿಭಾವಂತರು ಇದ್ದರು ಅವರಿಗೆ ಪೈಪೋಟಿಯನ್ನು ಕೊಟ್ಟು ಕೊನೆಗೆ ಕಿರುತೆರೆಯಲ್ಲೇ ನಂಬರ್ ಒನ್ ಆ್ಯಂಕರ್ ಹಾಗಿ ಬೆಳೆಯುತ್ತಾರೆ.. ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತ ಅನುಶ್ರಿಯವರು.. ತಾಯಿಯನ್ನು ಚೆನ್ನಾಗಿ ನೋಡಿಕೊಂಡು ತಮ್ಮನನ್ನು ಕೂಡ ಚೆನ್ನಾಗಿ ಓದಿಸಿ ವಿದ್ಯಾವಂತನನ್ನಾಗಿ ಮಾಡುತ್ತಾರೆ.. ಇನ್ನೂ ತುಂಬಾ ಜನಕ್ಕೆ ಅನುಶ್ರಿಯವರ ಬಗ್ಗೆ ಗೊತ್ತಿಲ್ಲದ ಒಂದು ವಿಚಾರವೇನೆಂದರೆ ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ನಟಿಸಲು ನಿರ್ದೇಶಕ ಶಶಾಂಕ್ ಮೊದಲು ಕೇಳಿದ್ದು ಅನುಶ್ರೀ ಅವರನ್ನು..

ಆದರೆ ಅನುಶ್ರಿಯವರು ಸ್ವಲ್ಪ ನಾಚಿಕೆಯ ಸ್ವಭಾವದವರಾಗಿದ್ದ ಕಾರಣ ನಟನೆ ಮಾಡಲು ಹಿಂಜರಿಯುತ್ತಾರೆ.. ಇನ್ನೂ ಡಬ್ಬಿಂಗ್ ಆರ್ಟಿಸ್ಟ್ ವಿಭಾಗದಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ ಎನ್ನುವುದು ಇನ್ನೊಂದು ಮೆಚ್ಚುಗೆಯ ವಿಷಯವಾಗಿದೆ.. ಬಡ ಕುಟುಂಬದಲ್ಲಿ ಬೇಳೆದ ಅನುಶ್ರಿ ವಿದ್ಯಾಭ್ಯಾಸ ಬಿಟ್ಟು ಕುಟುಂಬದ ಜವಾಬ್ದಾರಿಯ ಜೊತೆಗೆ ಕೊನೆಗೆ ಕನ್ನಡ ರಿಯಾಲಿಟಿ ಶೋಗಳಲ್ಲಿ ಆ್ಯಂಕರ್ ಆಗಿರುವ ಅನುಶ್ರಿಯವರು ಈ ಸಾಧನೆಯನ್ನು ಎಲ್ಲರೂ ಮೆಚ್ಚುಲೇಬೇಕು..