ನಮಸ್ತೆ ಸ್ನೇಹಿತರೆ.. ಸಾಮಾನ್ಯವಾಗಿ ಎಲ್ಲಾ ಗ್ರಾಮಗಳಲ್ಲೂ ಅದರದ್ದೇ ಆದಂತಹ ವಿಶೆಷತೆ ಇರುತ್ತದೆ.. ಹೌದು ಕೆಲವೊಂದು ಗ್ರಾಮಗಳು ತನ್ನದೆ ಆದ ಸಾಂಪ್ರದಾಯಿಕ ಶೈಲಿ ಆಚರಣೆಗಳು ಹೊಂದಿರುತ್ತದೆ.. ಕೆಲವೊಂದು ಆಚರಣೆಗಳು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದ್ದು ಹಾಗೆ ಮುಂದುವರೆಸಿಕೊಂಡು ಹೋಗುತ್ತಾರೆ.. ಇನ್ನೂ ಇಲ್ಲೊಂದು ವಿಶೇಷ ಗ್ರಾಮವಿದೆ.. ಭಕ್ತಿಯ ಪ್ರತಿರೂಪವೇ ಈ ಗ್ರಾಮ..

ಈ ಗ್ರಾಮದಲ್ಲಿ ಹುಟ್ಟಿದ ಪ್ರತಿಯೊಂದು ಮಕ್ಕಳಿಗೂ ಒಂದೇ ಹೆಸರನ್ನು ಇಡುತ್ತಾರೆ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು.. ಅಷ್ಟಕ್ಕೂ ಈ ಗ್ರಾಮದಲ್ಲಿ ಅಡಗಿರುವಂತಹ ವಿಶೇಷತೆ ಏನು.. ಅಲ್ಲಿ ಹುಟ್ಟುವ ಮಕ್ಕಳಿಗೆ ಒಂದೇ ಹೆಸರಿಡಲು ಕಾರಣವೇನು ಎಂದು ತಿಳಿದುಕೊಳ್ಳೋಣ.. ಅಷ್ಟಕ್ಕೂ ಈ ಸ್ಥಳ ಎಲ್ಲಿದೆ ಅಂದರೆ ನಮ್ಮ ಕರ್ನಾಟಕದಲ್ಲಿ .. ಹೌದು ಬಾದಾಮಿ ತಾಲೂಕಿನ ಹುಲ್ಲಿಕೆರೆ ಇನಾಮು ಗ್ರಾಮ ಎಂಬುದೇ ವಿಶೇಷ ಗ್ರಾಮವಾಗಿದೆ..

ಈ ಗ್ರಾಮದ ದೇವತೆ ಗದ್ದೆಮ್ಮ ದೇವಿ.. ಒಟ್ಟಾಗಿ ಈ ಗ್ರಾಮದಲ್ಲಿ 500 ಕ್ಕೂ ಹೆಚ್ಚು ಮನೆಗಳು ಇದ್ದು ಸುಮಾರು 2000 ಜನರು ಇಲ್ಲಿ ವಾಸ ಮಾಡುತ್ತಿದ್ದಾರೆ.. ಈ ಗ್ರಾಮದಲ್ಲಿ ಜನಿಸುವ ಗಂಡು ಮಕ್ಕಳಿಗೆ ಗದ್ದೆಪ್ಪ ಎಂದು ಹೆಸರಿಟ್ಟರೆ ಹೆಣ್ಣು ಮಕ್ಕಳಿಗೆ ಗದ್ದೆಮ್ಮ ಎಂದು ಹೆಸರಿಡುತ್ತಾರೆ.. ಅಷ್ಟೇ ಅಲ್ಲದೇ ಮನೆಗೆ ಬರುವ ಸೊಸೆಗೂ ಕೂಡ ಗದ್ದೆಮ್ಮ ಎಂದು ಕರೆಯುತ್ತಾರೆ.. ಅಷ್ಟಕ್ಕೂ ಎಲ್ಲರಿಗೂ ಯಾಕೆ ಒಂದೇ ಹೆಸರು ಇಡುತ್ತಾರೆ ಅಂದರೆ.. ಇದಕ್ಕೆ ಮೂಲ ಕಾರಣ ಇವರು ನಂಬಿಕೊಂಡು ಬಂದ ಪದ್ದತಿ..

ಹೌದು ಈ ಗ್ರಾಮದ ದೇವತೆಯ ಹೆಸರು ಗದ್ದೆಮ್ಮ ಆಗಿದ್ದು ಈ ದೇವಿಯ ಹೆಸರನ್ನು ಇಡದೇ ಇದ್ದರೆ ಗದ್ದೆಮ್ಮ ತನ್ನ ಮನೆತನವನ್ನು ಕಾಡುತ್ತಾಳೆ ಎಂಬುದು ಇವರ ನಂಬಿಕೆಯಾಗಿದೆ.. ಇಲ್ಲಿರುವ ಮತ್ತೊಂದು ವಿಶೇಷವೇನೆಂದರೆ ಮಕ್ಕಳಾಗದೆ ಇರುವವರು ಇಲ್ಲಿಗೆ ಬಂದು ದೇವಿಯ ಹತ್ತಿರ ಕೇಳಿಕೊಂಡರೆ ಮಕ್ಕಳು ಹಾಗುತ್ತವೆ.. ಹಾಗಿರುವ ಉದಾಹರಣೆಗಳು ಕೂಡ ಇದೆ ಎಂದು ಹೇಳುತ್ತಾರೆ.. ಆಧುನಿಕತೆ ಇರುವ ಈ ಕಾಲದಲ್ಲಿ ಇಂತಹ ಒಂದು ಗ್ರಾಮವಿದೆ ಎಂದರೆ ಮತ್ತೊಂದು ಆಶ್ಚರ್ಯಕರ ವಿಷಯ..

ಬಹುಶಃ ಇಂತಹ ಆಚರಣೆ ಹಾಗೂ ಇಲ್ಲಿನ ಪದ್ದತಿಯಂತಹ ಗ್ರಾಮ.. ನಮ್ಮ ದೇಶದಲ್ಲೇ ಅಲ್ಲ ಪ್ರಪಂಚದಲ್ಲೇ ಇಲ್ಲ ಅನಿಸುತ್ತದೆ.. ಇಂತಹ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬರುವುದು ಸಲಭದ ಮಾತಲ್ಲ.. ಈ ದೇವಿಯ ಬಗ್ಗೆ ಜನರು ನಂಬಿಕೆ ಇಟ್ಟಿದ್ದಾರೆ ಅಂದರೆ ಇಲ್ಲಿ ಒಂದು ಸತ್ಯ ಅಡಗಿದೆ ಎಂದರ್ಥ.. ಪ್ರಪಂಚ ಎಷ್ಟೇ ಬದಲಾವಣೆ ಆದರೂ ಈ ಗ್ರಾಮದಲ್ಲಿರುವ ಜನರ ನಂಬಿಕೆ ಮಾತ್ರ ಹಾಗೆ ಉಳಿದುಕೊಂಡಿದೆ..