Advertisements

ಪಕ್ಕದ ಮನೆಯ ಬೆಕ್ಕಿಗೆ ಊಟ ಹಾಕಿ 25 ಲಕ್ಷ ಕಳೆದುಕೊಂಡ ಮಹಿಳೆ. ಹೇಗೆ ಗೊತ್ತಾ..?

Kannada Mahiti

ನಮಸ್ತೆ ಸ್ನೇಹಿತರೆ.. ಮನುಷ್ಯನಿಗೆ ನಿಜವಾದ ಶತ್ರು ಕೋಪ, ದ್ವೇಷ, ಅಟ ಎನ್ನುವುದು ಗೊತ್ತಿದ್ದರು ಗೊತ್ತಿಲ್ಲದೆ ಇರುತೋರ ಕೆಲವರು ವರ್ತಿಸುತ್ತಿರುತ್ತಾರೆ.. ಮನುಷ್ಯ ಒಂದಲ್ಲ ಒಂದು ದಿನ ನಾನು ಮಣ್ಣಿನಲ್ಲಿ ಮರೆಯಾಗುತ್ತೇ‌ನೆ ಎಂದು ಗೊತ್ತಿದ್ದರು ಎಲ್ಲಾ ನನ್ನದೇ ನಾನೇ ಎಂದು ಅಟ ಮಾಡುತ್ತಾ ಇನ್ನೊಬ್ಬರನ್ನ ದ್ವೇಷಿಸುತ್ತಾ ಕೊನೆಗೆ ತಾನೆ ಮುರ್ಖನಾಗುತ್ತಾನೆ.. ಇನ್ನೂ ಇಲ್ಲೊಬ್ಬ ಮಹಿಳೆ ಅಟಕ್ಕೆ ಬಿದ್ದು ಬೆಕ್ಕಿಗೆ ಊಟ ಹಾಕಿ 25 ಲಕ್ಷ ಕಳೆದುಕೊಂಡಿರುವ ಘ’ಟನೆ ನಡೆದಿದೆ..

Advertisements

ಇಂಗ್ಲೆಂಡ್ ನಲ್ಲಿ ವಾಸವಿದ್ದ ಜಾಕಿ ಹಾಲ್ ಎಂಬ ಮಹಿಳೆ 50 ಸಾವಿರ ರೂಪಾಯಿ ಬೆಲೆ ಬಾಳುವ ಒಂದು ಬೆಕ್ಕನ್ನು ಖರೀದಿ ಮಾಡಿ ಮಗಳ ಹುಟ್ಟುಹಬ್ಬದಂದು ಉಡುಗೊರೆಯಾಗಿ ಈ ಬೆಕ್ಕನ್ನು ನೀಡುತ್ತಾಳೆ.. ಇನ್ನೂ ದಿನಗಳು ಕಳೆದಂತೆ ಈ ಬೆಕ್ಕು ಜಾಕಿ ಹಾಲ್ ಅವರ ಮನೆಯಲ್ಲಿ ಇರುತ್ತಿರಲಿಲ್ಲ.. ಈಗಾಗಿ ಮನೆಯವರು ಬೆಕ್ಕಿಗೆ ಜಿ.ಪಿ.ಎಸ್ ಅಳವಡಿಸಿ ಬೆಕ್ಕು ಎಲ್ಲಿಗೆ ಹೊಗುತ್ತಿದೆ ಎಂದು ತಿಳಿದುಕೊಳ್ಳುತ್ತಾರೆ.‌.‌ ಹೌದು ಈ ಬೆಕ್ಕು ಪಕ್ಕದ ನಿಕೊಲ ಎಂಬುವವರ ಮನೆಗೆ ಹೋಗಿ ಹೆಚ್ಚಾಗಿ ಅಲ್ಲೇ ಇರುತ್ತಿದೆ ಎಂದು ಗೊತ್ತಾಗುತ್ತದೆ..

ಪಕ್ಕದ ಮನೆಯ ನಿಕೊಲಾ ಅವರು ಈ ಬೆಕ್ಕಿಗೆ ಸ್ನಾನ ಮಾಡಿಸಿ ತಿಂಡಿಯನ್ನು ಕೊಟ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು.. ಹೀಗಾಗಿ ಆ ಬೆಕ್ಕು ಪ್ರತಿದಿನವೂ ಕೂಡ ನಿಕೋಲಾ ಅವರ ಮನೆಯಲ್ಲಿ ಹೆಚ್ಚಾಗಿ ಕಾಲ ಕಳೆಯುತ್ತಿತ್ತು.. ಇದರಿಂದ ಕೋಪಗೊಂಡ ಬೆಕ್ಕಿನ ಓನರ್ ಜಾಕಿ ಹಾಲ್ ಇದು ನಮ್ಮ ಬೆಕ್ಕು ನೀವು ಇದಕ್ಕೆ ಊಟ ಆಕಬೇಡಿ ನಾವೇ ಅದಕ್ಕೆ ಊಟವನ್ನು ನೀಡಿ ಸಾಕುತ್ತೇವೆ ಎಂದು ತುಂಬಾ ಬಾರಿ ಏಳಿರುತ್ತಾರೆ.. ಆದರೆ ನಿಕೊಲಾ ಮಾತ್ರ ಬೆಕ್ಕಿಗೆ ಊಟ ಹಾಕಿದರೆ ಏನು ತಪ್ಪಿದೆ ಎಂದು ವಾದಿಸುತ್ತಾರೆ.‌‌.

ಇದರಿಂದ ಕೋಪಗೊಂಡ ಜಾಕಿ ಹಾಲ್ ಪಕ್ಕದ ಮನೆಯ ನಿಕೋಲಾ ಅವರ ಮೇಲೆ ಕೇ’ಸ್ ಹಾಕಿ ಕೊರ್ಟ್ ಮೂಲಕ ನೋಟಿಸ್ ಕಳುಹಿಸುತ್ತಾರೆ.. ಈ ಬೆಕ್ಕಿನ ವಿಷಯಕ್ಕೆ ಇವರಿಬ್ಬರ ವಾದ ವಿವಾದಗಳು ಸುಮಾರು ಆರು ವರ್ಷಗಳ ಕಾಲ ಕೋರ್ಟ್ ನಲ್ಲಿ ನಡೆದಿದೆ.. ಆಗಲೂ ಸಹ ಕೇಸ್ ಕೊನೆಗೊಳ್ಳದ ಕಾರಣ ಇವರಿಬ್ಬರೂ ರಾಜಿ ಆಗುವ ತಿರ್ಮಾನಕ್ಕೆ ಬರುತ್ತಾರೆ.‌. ಕೊನೆಗೆ ನಿಕೋಲಾ ಅವರು ನಾನು ಬೆಕ್ಕಿಗೆ ಊಟ ಹಾಕುವುದಿಲ್ಲ ಎಂದು ಹೇಳುತ್ತಾರೆ.. ಆದರೆ ಈ ಆರುವರ್ಷದ ಲಾಯರ್ ಪೀಸ್ ಗಾಗಿ ನಿಕೋಲಾ ಅವರು ಸುಮಾರು 25 ಲಕ್ಷ ಹಣವನ್ನು ಖರ್ಚು ಮಾಡಿದ್ದಾರೆ.. 30 ಸಾವಿರ ರೂಪಾಯಿ ಕೊಟ್ಟಿದ್ದರೆ ಅವರು ಇನ್ನೊಂದು ಬೆಕ್ಕನ್ನು ತೆಗೆದುಕೊಳ್ಳಬಹುದಾಗಿತ್ತು ಆದರೆ ಅಟಕ್ಕೆ ಬಿದ್ದ ನಿಕೋಲಾ ಅವರು ಸುಮಾರು 25 ಲಕ್ಷದವರೆಗೆ ಕಳೆದುಕೊಂಡಿದ್ದಾರೆ..

ನೋಡಿದರಲ್ವಾ ಸ್ನೇಹಿತರೆ ನಮ್ಮ ಅಟಕ್ಕೆ ನಾವೇ ಕೊನೆಗೆ ದುಂಡಿ ತೋಡಿಕೊಳ್ಳುತ್ತೇವೆ.. ಇದರಿಂದ ಸಾಧಿಸಿದಾದರು ಎನು.. ಈಗೆ ಎಷ್ಟೊ ಜನ ಅಟಕ್ಕೆ ಬಿದ್ದು ಮನೆಯ ಪಕ್ಕದವರ ಜೊತೆ, ಅಕ್ಕಪಕ್ಕದ ಜಮೀನಿನವರ ಜೊತೆ ಜಗಳ ಮಾಡಿಕೊಂಡು ಕೊನೆಗೆ ಕೊರ್ಟಿಗೆ ಅಲೆದಾಡಿ ಲಕ್ಷಗಳವರೆಗೆ ಹಣವನ್ನು ಕಳೆದುಕೊಂಡಿರುವ ಘಟನೆಗಳು ನಡೆದಿದೆ.. ನಡೆದಿರುವ ಉದಾಹರಣೆಗಳನ್ನು ಹಳ್ಳಿಗಳ ಕಡೆ, ನಗರಗಳ ಕಡೆ ನೀವು ನೋಡಿರಬಹುದು.. ಕೋಪ, ದ್ವೇಷ, ಅಟ ಸಾದಿಸುವವನು ಮೂರ್ಖ.. ಇದನ್ನೆಲ್ಲ ಮರೆತು ಮುಂದೆ ಹೋಗುವವನು ಬುದ್ದಿವಂತ ಎನ್ನುವ ಮಾತಿದೆ.. ನ್ಯಾಯಕ್ಕಾಗಿ ಹೋರಾಡಿದರೆ ಅದಕ್ಕೆ ಅರ್ಥ ಇದೆ ಆದರೆ ಸಣ್ಣ ಪುಟ್ಟ ವಿಷಯವನ್ನು ದೊಡ್ಡದಾಗಿ ಮಾಡಿಕೊಂಡು ಅಟ ಸಾದಿಸಲು ಹೊರಟರೆ ಅವನಷ್ಟು ಮೂರ್ಖ ಇನ್ಯಾರು ಇಲ್ಲ.. ಜಾಕಿ ಹಾಲ್ ಮತ್ತು ನಿಕೋಲಾ ನಡುವೆ ನಡೆದ ಘಟನೆ ಪ್ರತಿಯೊಬ್ಬರಿಗೂ ಪಾಠವಾಗಿದೆ..