Advertisements

ಜನುಮದ ಜೋಡಿ ಶಿಲ್ಪಾ ಮಗಳು ಹೇಗಿದ್ದಾಳೆ. ಈ ನಟಿ ಈಗ ಯಾವ ಕೆಲಸ ಮಾಡ್ತಿದ್ದಾರೆ ಗೊತ್ತಾ! ನೋಡಿ..

Cinema

ನಮಸ್ತೆ ಸ್ನೇಹಿತರೆ.. ಕೆಲವರ ಮುಖದಲ್ಲಿ ಏದ್ದು ಕಾಣುವ ಛಾಯೆ ಅವರ ಹೃದಯದ ಭಾವನೆಗಳನ್ನು ತೋರಿಸುತ್ತದೆ.. ಅವರ ಒಳ್ಳೆಯ ನಡತೆ ಗುಣ ಅವರ ಮುಖದಲ್ಲಿ ಎದ್ದು ಕಾಣುತ್ತದೆ. ಅಂತಹ ಛಾಯೆ ಹಾಗೂ ಒಳ್ಳೆಯ ಹೃದಯವಂತಿಕೆ ಹೊಂದಿದ್ದ ನಟಿ ಎಂದರೆ ಶಿಲ್ಪಾ ಅವರು.. ಹಳ್ಳಿ ಹುಡುಗಿಯ ಪಾತ್ರಗಳಲ್ಲಿ ಮಿಂಚಿ ಕನ್ನಡಿಗರ ಹೃದಯ ಗೆದ್ದ ನಟಿ ಶಿಲ್ಪ ಅವರು ಜನುಮದ ಜೋಡಿ ಸಿನಿಮಾದಲ್ಲೂ ಅಭಿನಯಿಸಿ ಖ್ಯಾತಿ ಪಡೆದಿದ್ದಾರೆ..
ನಟಿ ಶಿಲ್ಪ ಅವರು ಮೂಲತಃ ಕೇರಳ ರಾಜ್ಯದವರು ಆದರೆ  ಅತಿ ಹೆಚ್ಚು ಪ್ರಸಿದ್ಧಿ ಗಳಿಸಿದ್ದು ಕರ್ನಾಟಕದಲ್ಲಿ..

Advertisements

ಇನ್ನೂ ಇವರ ನಿಜವಾದ ಹೆಸರು ಚಿಪ್ಪಿ.. ಇವರು ನಟಿಸಿದ ಕೊನೆಯ ಸಿನಿಮಾ ಕೂಡ ಕನ್ನಡದಲ್ಲೇ.. ಹೌದು 2004 ರಲ್ಲಿ ರಿಲಿಸ್ ಆದ ಪಾಂಡವ ಚಿತ್ರದಲ್ಲಿ ನಟಿಸಿದ ಶಿಲ್ಪ ಅವರು ಮತ್ತೆ ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿಲ್ಲ.. 2001 ರಲ್ಲಿ ನಿರ್ಮಾಪಕ ರಂಜಿತ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ. ಶಿಲ್ಪ ಅವರಿಗೆ ಅವಂತಿಕಾ ಎಂಬ ಮುದ್ದಾದ ಮಗಳಿದ್ದಾಳೆ.. ಇನ್ನೂ ನಟಿ ಶಿಲ್ಪ ಅವರು ಸ್ವಂತ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ ನಂತರ ಗಂಡನ ನಿರ್ದೇಶನದಲ್ಲಿ ಸಿನಿಮಾಗಳನ್ನು ಮಾಡುತ್ತಾರೆ.. ಆದರೆ ಆ ಸಿನಿಮಾಗಳು ಅಷ್ಟೊಂದು ಸಕ್ಸಸ್ ಕಾಣಲಿಲ್ಲ.. ಇನ್ನೂ ಈ ಸಿನಿಮಾಗಳು ಸಕ್ಸಸ್ ಆಗದೆ ಇದ್ದ ಕಾರಣ ಸ್ವಲ್ಪ ಹಣವನ್ನು ಕಳೆದುಕೊಂಡ ಶಿಲ್ಪ ಅವರು ಧಾರವಾಹಿಗಳಲ್ಲಿ ನಟಿಸಲು ಶುರುಮಾಡುತ್ತಾರೆ..

ನಂತರ ಈ ಧಾರವಾಹಿಗಳಿಂದ ತಮ್ಮ ಆರ್ಥಿಕ ಸಮಸ್ಯೆಯನ್ನು ಕಡಿಮೆ ಮಾಡಿಕೊಂಡ ಶಿಲ್ಪ ಅವರು ಸ್ವಂತ ಧಾರವಾಹಿಗಳ ನಿರ್ಮಾಣಕ್ಕೆ ಕೈ ಹಾಕಿ ಸಕ್ಸಸ್ ಕಾಣುತ್ತಾರೆ.. ಇನ್ನೂ ಶಿಲ್ಪಾ ಅವರ ನಿರ್ಮಾಣದ ಮಳಿಯಾಳಂ ವಾನಂಬಡಿ ಹಾಗೂ ತಮಿಳಿನ ಮೌನರಾಗಂ ಧಾರವಾಹಿಗಳು ಪ್ರಸಾರವಾಗುತ್ತಿದ್ದು ಎರಡು ಸೀರಿಯಲ್ ಗಳು ಪ್ರಸಿದ್ಧಿಯಾಗಿದೆ.. ಈಗ ದೊಡ್ಡ ನಿರ್ಮಾಪಕಿಯಾಗಿ ಬೆಳೆದಿರುವ ನಟಿ ಶಿಲ್ಪಾ ಅವರ ಮನಸ್ಸು ಮಾತ್ರ ಎಲ್ಲರೂ ಮೆಚ್ಚುವಂತಹದ್ದು.. ಹೌದು ಸೀರಿಯಲ್ ಸೆಟ್ ನ ಕ್ಯಾಮರ್ ಮ್ಯಾನ್ ನಿಂದ ಹಿಡಿದು ಪ್ರತಿಯೊಬ್ಬರನ್ನು ಕೂಡ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ.. ಅಷ್ಟೇ ಅಲ್ಲದೇ ನಾನು ಓನರ್ ಎಂಬ ಮನೋಭಾವವಿಲ್ಲದೆ ಚಿಕ್ಕ ಪುಟ್ಟ ಕೆಲಸವನ್ನ ಅವರೇ ಮಾಡಿಕೊಳ್ಳುತ್ತಾರೆ.. ಕೇರಳದಿಂದ ಬಂದ ಹುಡುಗಿ ಕನ್ನಡದಲ್ಲಿ ಪ್ರಸಿದ್ಧಿಯನ್ನು ಪಡೆದು ಈಗ ದೊಡ್ಡ ನಿರ್ಮಾಪಕಿಯಾಗಿ ಬೆಳೆದಿರುವ ನಟಿ ಶಿಲ್ಪ ಅವರ ಸಾಧನೆ ಎಲ್ಲರೂ ಮೆಚ್ಚುವಂತದ್ದು..