ನಮಸ್ತೆ ಸ್ನೇಹಿತರೆ.. ದ್ವಾಪರ ಯುಗದಲ್ಲಿ ದು’ಷ್ಟಶಕ್ತಿಗಳ ಪ್ರಭಾವ ಹೆಚ್ಚಾಗುತ್ತಲೇ ಹೋದಾಗ ಭೂಮಿ ತಾಯಿಗೆ ಆತಂಕ ಶುರುವಾಗುತ್ತದೆ. ಈಗಾಗಿ ಬ್ರಹ್ಮ ದೇವನ ಬಳಿ ಹೋಗಿ ತನ್ನ ಸ’ಮಸ್ಯೆಯನ್ನು ಹೇಳಿಕೊಳ್ಳುತ್ತಾರೆ.. ಭೂಮಿ ತಾಯಿಯ ವ್ಯತೆಯನ್ನು ಕಂಡ ಬ್ರಹ್ಮ ದೇವ ಎಲ್ಲ ದೇವತೆಗಳನ್ನು ತನ್ನ ಬಳಿ ಕರಿಸಿಕೊಂಡು.. ನೀವೆಲ್ಲರೂ ಭೂಮಿ ಮೇಲಿನ ಅಧರ್ಮವನ್ನು ಅಳಿಸಿ ಹಾಕಿ ಧರ್ಮ ಸ್ಥಾಪನೆ ಮಾಡಲು ಭೂಮಿಮೇಲೆ ಜನ್ಮ ತಾಳುವಂತೆ ದೇವತೆಗಳಿಗೆ ಹೇಳುತ್ತಾರೆ.. ಆಗ ದೇವತೆಗಳು ಇಂದ್ರನ ನೇತೃತ್ವದಲ್ಲಿ ಮಹಾವಿಷ್ಣುವಿನ ಬಳಿ ಹೋಗಿ ನೀವು ಕೂಡ ಭೂಮಿ ಮೇಲೆ ಅವತಾರ ಎತ್ತಬೇಕು ಎಂದು ವಿಷ್ಣುವಿನ ಬಳಿ ಕೇಳಿಕೊಳ್ಳುತ್ತಾರೆ.. ಆಗ ಮಹಾವಿಷ್ಣು ಕೂಡ ಎಲ್ಲಾ ದೇವತೆಗಳ ಮನವಿಯನ್ನು ಒಪ್ಪಿಕೊಂಡು ಭೂಮಿಯ ಮೇಲೆ ಅವತಾರ ಎತ್ತಿದರು.. ನಿಮೆಗಲ್ಲ ಗೊತ್ತಿರುವ ಹಾಗೆ ಮಹಾವಿಷ್ಣು..
ಕೃಷ್ಣನ ಅವತಾರ ತಾಳಿದರೆ, ತನ್ನ ಹಾಸಿಗೆ ಆದಿಶೇಷ. ಅಣ್ಣನ ರೂಪದಲ್ಲಿ ಬಲರಾಮ ಜನ್ಮ ತಾಳುತ್ತಾನೆ.. ಅದೇ ರೀತಿ ಮಹಾವಿಷ್ಣುವಿನ ಪತ್ನಿ ಲಕ್ಷ್ಮಿ ರುಕ್ಮಿಣಿಯ ರೂಪದಲ್ಲಿ ಜನಿಸುತ್ತಾರೆ.. ಇನ್ನು ಕಾಳನೇಮಿ ಎಂಬ ರಾ’ಕ್ಷಸ ಕಂಸನ ರೂಪದಲ್ಲಿ ಜನಿಸುತ್ತಾನೆ.. ರಾ’ಕ್ಷಸ ರಾಜ ಜರಾಸಂಧ ಮತ್ತು ಹಿರಣ್ಯ ಕಶಿಪು ಶಿಶುಪಾಲನ ರೂಪದಲ್ಲಿ ಜನ್ಮ ತಾಳುತ್ತಾರೆ.. ಪ್ರಹ್ಲಾದನ ಸಹೋದರ ಸಹ್ಲಾದ ಶಲ್ಯನ ರೂಪದಲ್ಲಿ ಜನಿಸಿದರೆ ಅನುಹ್ಲಾದ ದೃ’ಷ್ಟಕೇತುವಿನ ರೂಪದಲ್ಲಿ ಜನ್ಮ ತಾಳಿದನು.. ಗಂಧರ್ವ ರಾಜನಾದ ಹಂಸ ದೃತರಾಷ್ಟ್ರನ ರೂಪದಲ್ಲಿ ಜನಸಿದರೆ, ಹಂಸನ ತಮ್ಮ ಪಾಂಡುರಾಜನಾಗಿ ಜನಿಸಿದ.. ಯಮ ವಿಧುರನ ರೂಪದಲ್ಲಿ ಜನಸಿದವರು, ಸಿದ್ದಿಯ ಅಂಶದಿಂದ ಕುಂತಿ ಜನ್ಮತಾಳುತ್ತಾರೆ.. ದೃತಿಯ ಅಂಶದಿಂದ ಮಾದ್ರಿ ಜನಿಸುತ್ತಾರೆ..
ಮಥಿಯ ಅಂಶದಿಂದ ದುತರಾಷ್ಟ್ರನ ಪತ್ನಿ ಗಾಂಧಾರಿಯ ಜನನವಾಗುತ್ತದೆ. ವಸಿಷ್ಠ ಋಷಿಯ ಶಾಪದಿಂದ ಎಂಟು ಮಂದಿ ವಸುಗಳು ಶಾಂತನು ಮಕ್ಕಳಾಗಿ ಗಂಗಾ ಮಾತೆಯ ಗರ್ಭದಿಂದ ಜನಸಿದರು.. ಅವರ ಪೈಕಿ ಕಿರಿಯರಾದ ಬೀಷ್ಮ ಮಾತ್ರವೇ ಜೀವಂತವಾಗಿ ಉಳಿಯುತ್ತಾರೆ.. ದೇವತೆಗಳ ಗುರು ಬ್ರಹ್ಮಸ್ಪತಿಯ ಅಂಶದಿಂದ ಭಾರದ್ವಾಜ್ ಋಷಿಯ ಮೂಲಕ ಗುರು ದ್ರೋಣಾಚಾರ್ಯರ ಜನನವಾಗುತ್ತದೆ. ಶಿವ, ಯಮ, ಕಾಲ ಮತ್ತು ಕ್ರೋಧದ ಅಂಶದಿಂದ ಅಶ್ವತ್ಥಾಮನ ಜನನವಾಗುತ್ತದೆ.. ರುದ್ರಗಳ ಒಂದು ಗಣ ಕೃಪಾಚಾರ್ಯರ ರೂಪದಲ್ಲಿ ಜನಿಸಿದರು. ಅದೇ ರೀತಿ ದ್ವಾಪರಯುಗದ ಅಂಶದಿಂದ ಶಕುನಿಯ ಜನನವಾಗಿತ್ತು.. ಇನ್ನು ಮಾರದ್ಗಣನಿಂದ! ಸಾತ್ಯಕಿ, ದೃಪದ್, ಕೃತವರ್ಮ, ಮತ್ತು ವಿರಾಟ ರಾಜನ ಜನನವಾಗಿತ್ತು.. ಇನ್ನು ಯುಧಿಷ್ಠರ ಯಮದರ್ಮನ ಅಂಶವಾಗಿದ್ದರು. ಭೀಮ ವಾಯುದೇವನ ಅಂಶವಾಗಿದ್ರೆ ಅರ್ಜುನ ಇಂದ್ರನ ಅಂಶವಾಗಿ ಜನಸಿದ್ದ..
ಇಬ್ಬರು ಅಶ್ವಿನಿ ಕುಮಾರರ ಅಂಶವಾಗಿ ನಕುಲ ಮತ್ತು ಸಹದೇವನ ಜನನವಾಗಿತ್ತು.. ದೃಪದನ ಅ’ಗ್ನಿ ಕುಂ’ಡದಿಂದ ಜನಿಸಿದ ದ್ರೌಪದಿ. ಇಂದ್ರನ ಪತ್ನಿ ಇಂದ್ರಾಣಿಯ ಅಂಶವಾಗಿದ್ದರು.. ವಿಶ್ವದೇವ ಗಣಗಳು ದ್ರೌಪದಿಯ ಮಕ್ಕಳಾಗಿ ಪ್ರತಿವಿಂದ್ಯ, ಶುತಸೋಮ, ಶುತಕೀರ್ತಿ, ಶತಾನಿಕ್ ಮತ್ತು ಶುತಸೇನನ ರೂಪದಲ್ಲಿ ಜನಸಿದರು.. ಚಂದ್ರನ ಮಗ ಅರ್ಚ, ಅರ್ಜುನ ಮತ್ತು ಸುಭದ್ರೆಯ ಮಗ ಅಭಿಮನ್ಯು ರೂಪದಲ್ಲಿ ಜನಿಸಿದರು.. ಅ’ಗ್ನಿ ದೇವನ ವಂಶದಿಂದ ದೃ’ಷ್ಟದ್ಯುಮ್ನನ ಜನನವಾಗಿತ್ತು.. ಓರ್ವ ರಾ’ಕ್ಷಸನ ಅಂಶದೊಂದಿಗೆ ಅಂಬ, ಶಿಖಂಡಿನಿಯ ರೂಪದಲ್ಲಿ ಪುನರ್ಜನ್ಮ ಪಡೆಯುತ್ತಾರೆ..
ಸೂರ್ಯದೇವನ ಅಂಶದಿಂದ ಕರ್ಣನ ಜನನವಾಗಿತ್ತು. ಅದೇ ರೀತಿ ಕಲಿಯುಗ ದುರ್ಯೋಧನನ ರೂಪದಲ್ಲಿ ಜನಿಸಿದ್ದ.. ದುರ್ಯೊಧನನ ಉಳಿದ ನೂರು ಮಂದಿ ಸಹೋದರರ ರೂಪದಲ್ಲಿ ಪುಲಸ್ಯ ಕುಲದ ರಾ’ಕ್ಷಸರು ಪುನರ್ಜನ್ಮ ಪಡೆಯುತ್ತಾರೆ.. ಇನ್ನು ಅಪ್ಸರೆಯರು ಇಂದ್ರನ ಆದೇಶದಂತೆ 16 ಸಾವಿರ ಸ್ತ್ರೀಯರ ರೂಪದಲ್ಲಿ ಜನಿಸಿದರು.. ಸ್ನೇಹಿತರೆ ಈ ರೀತಿ ದೇವತೆಗಳು ಮತ್ತು ರಾಕ್ಷಸರು ಭೂಮಿಯ ಮೇಲಿನ ಅಧರ್ಮವನ್ನು ಅಳಿಸಿ ಹಾಕಿ ಧರ್ಮವನ್ನು ಸ್ತಾಪಿಸಲು ದ್ವಾಪರಯುಗದಲ್ಲಿ ಜನ್ಮ ತಾಳುತ್ತಾರೆ.. ಇವರ ಮೂಲಕ ಬ್ರಹ್ಮ ಮತ್ತು ಕೃಷ್ಣ ಭೂಮಿಯ ಮೇಲಿನ ಧರ್ಮವನ್ನು ಸ್ಥಾಪಿಸುತ್ತಾರೆ..