Advertisements

ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮಹಾ ಪವಾಡ ನೋಡಿ! ಭಕ್ತರು ನೋಡಲೇಬೇಕು, ತಿಳಿದುಕೊಳ್ಳಲೇಬೇಕು.

Temples

ನಮಸ್ತೆ ಸ್ನೇಹಿತರೆ. ಧರ್ಮಸ್ಥಳದ ಬಗ್ಗೆ ನಿಮಗೆಷ್ಟು ಗೊತ್ತು?  ಧರ್ಮಸ್ಥಳದ ಸ್ಥಾಪನೆ ಏಗಾಯಿತು, ಇಲ್ಲಿ ಮಂಜುನಾಥ ಸ್ವಾಮಿ ಸ್ಥಾಪನೆಯಾಗಿದ್ದು ಹೇಗೆ, ಕರಾವಳಿ ಮಲ್ನಾಡಿನ ಜನ ವೀರೇಂದ್ರ ಹೆಗ್ಗಡೆ ಅವರನ್ನ ದೇವರಂತೆ ನೋಡೊದು ಯಾಕೆ ಗೊತ್ತಾ? ತಿಳಿಯೋಣ ಬನ್ನಿ. ಧರ್ಮಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪವಿತ್ರ ಧಾರ್ಮಿಕ ಸ್ಥಳ. ಶ್ರೀ ಮಂಜುನಾಥ ನೆಲೆಸಿರುವ ಈ ಊರು ಬಹಳ ಪ್ರಸಿದ್ಧ. ಶ್ರವಣಬೆಳಗೊಳದಂತೆ ಧರ್ಮಸ್ಥಳದಲ್ಲೂ ಕೂಡ ಬಾಹುಬಲಿ ಪ್ರತಿಮೆ ಇದೆ. ಈ ದೇವಾಲಯ ಕ್ಷೇತ್ರಕ್ಕೆ ಸರಿಸುಮಾರು 700 ವರ್ಷಗಳಷ್ಟು ಇತಿಹಾಸ ಇದೆ.

Advertisements

ನೇತ್ರಾವತಿ ನದಿ ದಡದಲ್ಲಿರುವ ಈ ಕ್ಷೇತ್ರದ ಆರಾಧ್ಯ ದೈವ ಶ್ರೀ ಮಂಜುನಾಥ ಸ್ವಾಮಿ. ಇನ್ನು ಧರ್ಮಸ್ಥಳ ಕ್ಷೇತ್ರದಲ್ಲಿ ಮಂಜುನಾಥ ಸ್ವಾಮಿ ನೆಲೆಸಿದ್ದು ಹೇಗೆ ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಸ್ನೇಹಿತರೆ ಧರ್ಮಸ್ಥಳ ಕ್ಷೇತ್ರಕ್ಕೆ ಸರಿ ಸುಮಾರು 700 ರಿಂದ 800 ವರ್ಷಗಳಷ್ಟು ಇತಿಹಾಸವನ್ನು ಹೊಂದಿದೆ. ಇನ್ನು ಧರ್ಮಸ್ಥಳಕ್ಕೆ ಇದ್ದ ಮೊದಲ ಹೆಸರು ಕುಡುಮ. ಇಲ್ಲಿನ ನೆಲ್ನಾಡಿ ಬೀರ್ಮಣ್ಣ ಪೇರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ಅನ್ನುವ ಗಂಡ ಹೆಂಡತಿ ವಾಸವಾಗಿದ್ದರು. ಜೈನ ಸಮುದಾಯವರಾಗಿದ್ದ ಬೀರ್ಮಣ್ಣ ಪೇರ್ಗಡೆ! ಚಂದ್ರಕಾಂತ ಸ್ವಾಮಿಯ ಪೂಜೆಯನ್ನು ಮಾಡುತ್ತಿದ್ದರು. ಬೀರ್ಮಣ್ಣ ಪೇರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ದಂಪತಿಗಳು ಅಪಾರ ದೈವ ಭಕ್ತರಾಗಿರುತ್ತಾರೆ.

ಒಂದು ಬಾರಿ ದೇವತೆಗಳು ಧರ್ಮಸ್ಥಾನವನ್ನು ಹುಡುಕಿ ಹೊರಟಿದ್ದಾಗ ಕುಡುಮ ಬಳಿ ಒಂದೇ ಕೊಳದಲ್ಲಿ ಹುಲಿ ಮತ್ತು ಗೋವು ನೀರು ಕುಡಿಯುತ್ತಿರುವುದನ್ನ ನೋಡುತ್ತಾರೆ. ಇದನ್ನು ನೋಡಿ ತುಂಬಾ ಸಂತೋಷ ಪಟ್ಟ ದೇವತೆಗಳು ಇದೆ ಧರ್ಮಸ್ಥಳ ಇರುವ ಸ್ಥಳ ಎಂದು ತಿರ್ಮಾನ ಮಾಡುತ್ತಾರೆ. ಈಗಾಗಿ ಅತೀಥಿಯ ರೂಪದಲ್ಲಿ ಬೀರ್ಮಣ್ಣನ ಪೇರ್ಗಡೆ ಮನೆಗೆ ಬರುತ್ತಾರೆ. ಈ ದಂಪತಿ ಅತ್ಯಂತ ಪೂಜ್ಯ ಭಾವದಿಂದ ಅತಿಥಿ ಸತ್ಕಾರವನ್ನು ಮಾಡುತ್ತಾರೆ. ಅದೇ ದಿನ ರಾತ್ರಿ ಒಂದು ಪವಾಡ ನಡೆಯುತ್ತದೆ ಆ ನಾಲ್ಕು ಅತಿಥಿಗಳು ದರ್ಮದೇವತೆಗಳ ರೂಪದಲ್ಲಿ ಬೀರ್ಮಣ್ಣ ಪೇರ್ಗಡೆಯವರ ಕನಸಿನಲ್ಲಿ ಪ್ರತ್ಯಕ್ಷವಾಗುತ್ತಾರೆ.

ಎಲ್ಲಾ ದೇವತೆಗಳು ನಾವು ಇಲ್ಲೇ ನೆಲೆಸುತ್ತೇವೆ ಎಂಬ ಆಸೆಯನ್ನು ವ್ಯಕ್ತಪಡಿಸುತ್ತಾರೆ. ದೇವತೆಗಳ ಆಸೆಯಂತೆ ಬೀರ್ಮಣ್ಣ ಪೇರ್ಗಡೆಯವರು ತನ್ನ ಮನೆಯನ್ನು ಖಾಲಿ ಮಾಡಿ ದೇವರಿಗೆ ಬಿಟ್ಟು ಕೊಡುತ್ತಾರೆ. ಈ ರೀತಿ ಕಾಳರಾಹು ಪುರುಷ ದೈವ, ಕಾಳರ್ಕಾಯಿ ಸ್ತ್ರೀ ದೈವ, ಕುಮಾರಸ್ವಾಮಿ ಪುರುಷ ದೈವ, ಹಾಗು ಕನ್ಯಾಕುಮಾರಿ ಸ್ತ್ರೀ ದೈವರಾಗಿ ಅಂದಿನಿಂದ ಆ ಮನೆಯಲ್ಲಿ ನೆಲೆ ನಿಲ್ಲುತ್ತಾರೆ‌. ಈ ದೇವತೆಗಳ ಆಜ್ಞೆಯಂತೆ ಬೀರ್ಮಣ್ಣ ಪೇರ್ಗಡೆಯವರು ದೇವರ ಗುಡಿ ಕಟ್ಟಿಸಿ, ನಿತ್ಯ ಪೂಜ್ಯ ಸತ್ಕಾರಕ್ಕೆ ಅರ್ಚಕರನ್ನು ನೇಮಿಸುತ್ತಾರೆ‌. ಇನ್ನು ಇಲ್ಲಿ ಶಿವಲಿಂಗ ನೆಲೆಸಿದ್ದು ಹೇಗೆ ಅಂದರೆ! ಮೊದಲು ಕುಡುಮದಲ್ಲಿ ನಾಲ್ಕು ದೇವತೆಗಳು ನೆಲೆಯಾಗಿದ್ದರು ಆದರೆ ಶಿವಲಿಂಗ ಇರಲಿಲ್ಲ.

ಈಗಿರುವಾಗ ಒಂದು ದಿನ ಅಷ್ಟ ಸ್ವಾಮಿಗಳು ಎಂಬುವವರು ಇಲ್ಲಿ ಉಳಿದುಕೊಂಡಿರುತ್ತಾರೆ. ಆದರೆ ಅಷ್ಟ ಸ್ವಾಮಿ ನನಗೆ ಶಿವಲಿಂಗ ಬೇಕು‌ ಎಂದು ಅಟಕ್ಕೆ ಬೀಳುತ್ತಾರೆ. ಜೊತೆಗೆ ಇಲ್ಲಿಯೂ ಒಂದು ಈಶ್ವರ ಲಿಂಗವನ್ನು ಸ್ಥಾಪನೆ ಮಾಡಿ ಎಂದು ಪಟ್ಟು ಹಿಡಿಯುತ್ತಾರೆ‌. ಈಗಾಗಿ ಮಂಜುನಾಥ ಸ್ವಾಮಿ ಲಿಂಗವನ್ನು ತರಲು ಅಣ್ಣಪ್ಪ ಸ್ವಾಮಿಯನ್ನು ಪ್ರತಿನಿಧಿಯಾಗಿ ಕದ್ರಿಗೆ ಕಳುಹಿಸುತ್ತಾರೆ ಆಗೆ ಕದ್ರಿಗೆ ಬಂದ ಅಣ್ಣಪ್ಪಸ್ವಾಮಿ ಕದ್ರಿಯಿಂದ ಶಿವಲಿಂಗವನ್ನು ಎತ್ತುಕೊಂಡು ಧರ್ಮಸ್ಥಳಕ್ಕೆ ಹೋಗುತ್ತಾರೆ.  ಆದರೆ ಅಷ್ಟರಲ್ಲಿ ಒಂದು ಪವಾಡ ನಡೆದಿತ್ತು. ಆಗಲೆ ನೆಲೆಸಿದ್ದ ಧರ್ಮ ದೇವತೆಗಳು ಸೇರಿಕೊಂಡು ಶಿವನಿಗಾಗಿ ಒಂದು ದೇವಾಲಯವನ್ನೇ ಸ್ತಾಪನೆ ಮಾಡಿಬಿಟ್ಟಿರುತ್ತಾರೆ.

ನಂತರ ಅಷ್ಟಸ್ವಾಮಿಗಳು ಕುಡುಮಕ್ಕೆ ಧರ್ಮಸ್ಥಳ ಎಂದು ಹೆಸರಿಟ್ಟರು ಎಂದು ಪ್ರತೀತಿ ಇದೆ. ಇಂತಹ ಧರ್ಮಸ್ಥಳ ಈಗ ವಿದ್ಯೆ, ಅನ್ನ, ಆರೋಗ್ಯ, ಅಭಯ, ದಾನದ ಮೂಲಕ ಸೇವೆ ಸಲ್ಲಿಸುತ್ತಿದೆ. ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ‌. ವೀರೇಂದ್ರ ಹೆಗ್ಗಡೆಯವರಿಗೆ ಈಗ 71 ವರ್ಷ. ಈ ಕ್ಷೇತ್ರದ ಜನ ಇವರ ಮಾತು ಅಂದರೆ ತಂದೆಯ ಮಾತು, ದೇವರ ಮಾತು ಎಂದು ಗೌರವ ಕೊಡುತ್ತಾರೆ. ಇವರು 1968 ರಲ್ಲಿ ಅಂದರೆ 20 ನೇ ವಯಸ್ಸಿನಲ್ಲಿ ಧರ್ಮಾಧಿಕಾರಿಯಾಗಿ ಇಂದಿಗೂ ಧರ್ಮಸ್ಥಳ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ.

ಇವರಿಗಿಂತ ಮೊದಲು ಇವರ ಮನೆತನದ ಹಲವು ಪೀಳಿಗೆಯವರು ಈ ಕ್ಷೇತ್ರದ ಧರ್ಮಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಮುಖವಾಗಿ ವೀರೇಂದ್ರ ಹೆಗ್ಗಡೆಯವರ ಹಿಂದಿನವರಾದ ರತ್ನವರ್ಮ ಹೆಗ್ಗಡೆ ಹಾಗೂ ಮಂಜಯ್ಯ ಹೆಗ್ಗಡೆಯವರನ್ನ ಇಲ್ಲಿ ಸ್ಮರಿಸಬಹುದು. ಈ ರೀತಿ ಬರೀ ಕರ್ನಾಟಕ ಮಾತ್ರವಲ್ಲದೇ ದೇಶ ವಿದೇಶಗಳಿಂದಲೂ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಭಕ್ತರು ಬರುತ್ತಾರೆ. ಹರಕೆ ಹೊತ್ತವರು ಇಲ್ಲಿ ಮುಡಿ ನೀಡಿ ಮಂಜುನಾಥನ ಕೃಪೆಗೆ ಪಾತ್ರರಾಗಿದ್ದಾರೆ. ಸ್ನೇಹಿತರೆ ಇದು ಮಂಜುನಾಥನ ಹಾಗು ಧರ್ಮಸ್ಥಳ ನಡುವಿ‌ನ ರೋಚಕ ಕಥೆಯಾಗಿದೆ.