ನಮಸ್ತೆ ಸ್ನೇಹಿತರೆ. ಚಿರಂಜೀವಿ ಸರ್ಜಾ ಅವರನ್ನು ಕಳೆದಕೊಂಡ ಬೇಸರ ಒಂದು ಕಡೆ ಆದರೆ ಇನ್ನೊಂದು ಕಡೆ ಚಿರು ಮತ್ತೆ ಹುಟ್ಟಿ ಬರುವ ವಿಶೇಷ ಸುದ್ದಿ ಕೇಳಿ ಅಭಿಮಾನಿಗಳು ತುಂಬಾ ಸಂತೋಷ ಪಟ್ಟಿದ್ದಾರೆ. ಇನ್ನು
ಮೊನ್ನೆಯಷ್ಟೇ ಮೊದಲನೇ ಬಾರಿಗೆ ಚಿರಂಜೀವಿ ಸರ್ಜಾ ಇಲ್ಲದೆ ಹುಟ್ಟು ಹಬ್ಬ ನಡೆದಿದೆ. ಚಿರುಸರ್ಜಾ ಅವರ ಹುಟ್ಟು ಹಬ್ಬದ ದಿನ ಮೇಘನಾ ರಾಜ್ ಅವರು ಸಮಾಧಿ ಮುಂದೆ ಚಿರು ಅವರನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಹಾಗೆಯೇ ಮೇಘನ ರಾಜ್ ಅವರು ಹುಟ್ಟು ಹಬ್ಬದ ಸಂಭ್ರಮದಲ್ಲಿ ಸಿಹಿ ಸುದ್ದಿಯನ್ನು ಕೂಡ ತಿಳಿಸಿದ್ದಾರೆ.
ಇನ್ನು ಈ ವಿಷಯದ ಬಗ್ಗೆ ಮಾತನಾಡಿದ ನಟಿ ಮೇಘನಾ ರಾಜ್ ತನಗೆ ಹುಟ್ಟುವ ಮಗು ಅದು ಚಿರು ನಿರ್ಧಾರ. ಚಿರುಗೆ ಯಾವಾಗ ಬರಬೇಕು ಅನಿಸುತ್ತದೆಯೊ ಆಗ ಬರಲಿ ಎಂದು ಹೇಳಿದ್ದಾರೆ. ಇನ್ನು ಚಿರು ಹುಟ್ಟು ಹಬ್ಬದ ದಿನ ಸ್ಯಾಂಡಲ್ ವುಡ್ ಹೀರೊ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿದ ಅದೊಂದು ಕೆಲಸ ಇಂದಿಗೂ ನಾವು ನೆನಪು ಮಾಡಿಕೊಳ್ಳಬೇಕು. ಚಿರು ಅಭಿನಯಿಸಿದ ಕೊನೆಯ ಸಿನಿಮಾ ಸಂಪೂರ್ಣ ಜವಾಬ್ದಾರಿಯನ್ನ ದರ್ಶನ್ ಅವರು ವಹಿಸಿ ಕೊಂಡಿದ್ದಾರೆ.
ಚಿರು ಸರ್ಜಾ ಕೊನೆಯ ಸಿನಿಮಾ ರಾಜಮಾರ್ತಾಂಡ ವಾಗಿದ್ದು! ಚಿರು ಸರ್ಜಾರನ್ನ ಕಳೆದುಕೊಂಡ ಕಾರಣ ಈ ಸಿನಿಮಾದ ಹಲವು ಕೆಲಸಗಳು ಅರ್ಧದಲ್ಲೇ ನಿಂತು ಹೋಗಿದ್ದವು. ಆದರೆ ದರ್ಶನ್ ಅವರು ರಾಜಮಾರ್ತಾಂಡ ಸಿನಿಮಾ ಪ್ರಮೋಷನ್ ಮಾಡುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಚಿರು ಇಲ್ಲದ ಸಮಯದಲ್ಲಿ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿರುವ ದರ್ಶನ್ ಅವರಿಗೆ ಎಷ್ಟು ಮೆಚ್ಚುಗೆಯನ್ನು ನೀಡಿದರು ಸಾಲದು. ಚಿರು ಅವರು ನಟಿಸಿದ ರಾಜಮಾರ್ತಾಂಡ ಸಿನಿಮಾ ಸೂಪರ್ ಹಿಟ್ ಕಾಣಲಿ ಎಂದು ಎಲ್ಲರೂ ಆಶಿಸೋಣ.