Advertisements

ಮಾಸ್ಟರ್ ಮಂಜುನಾಥ್ ಈ ಕಾರಣಕ್ಕೇ ನಟನೆ ಬಿಟ್ರಾ! ಈಗ ಮಾಡುತ್ತಿರುವ ಕೆಲಸ ಏನು ಗೊತ್ತಾ?

Uncategorized

ನಮಸ್ತೆ ಸ್ನೇಹಿತರೆ. ಮಾಸ್ಟರ್ ಮಂಜುನಾಥ್ ಈ ಹೆಸರು ಯಾರಿಗೆ ತಾನೆ ನೆನಪಿಲ್ಲ ಹೇಳಿ. ಯಾಕೆಂದ್ರೆ ಕನ್ನಡ ಚಿತ್ರರಂಗದಲ್ಲಿ 70-80 ರ ದಶಕದಲ್ಲಿ ಬಾಲನಟನಾಗಿ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಪ್ರತಿಭೆ ಮಾಸ್ಟರ್ ಮಂಜುನಾಥ್. ಅತಿ ಹೆಚ್ಚು ಕನ್ನಡ ಚಿತ್ರಗಳಲ್ಲಿ ಬಾಲನಟನಾಗಿ ಅಭಿನಯಿಸಿರುವ ಮಾಸ್ಟರ್ ಮಂಜುನಾಥ್ ಚಿಕ್ಕ ವಯಸ್ಸಿನಲ್ಲೇ ಮನೆ ಮಾತಾಗಿದ್ದವರು. ಇವರು ಮೂಲತಃ ಬೆಂಗಳೂರಿನವರು. ಮೂರು ವರ್ಷದ ವಯಸ್ಸಿನಲ್ಲೇ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಇವರು ಕನ್ನಡ, ತೆಲುಗು ಹಿಂದಿ ಭಾಷೆ ಸೇರಿದಂತೆ 68 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ..

Advertisements

ಇವರ ಹುಟ್ಟು ಹೆಸರು ಮಂಜುನಾಥ್ ನಾಯಕರ್ ಆದರೆ ಸಿನಿಮಾ ರಂಗದಲ್ಲಿ ಮಾಸ್ಟರ್ ಮಂಜುನಾಥ್ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. ಇನ್ನು ಇವರು ಅತಿ ಹೆಚ್ಚು ಹೆಸರುವಾಸಿಯಾದ ಸಿನಿಮಾಗಳು ಅಂದರೆ ಮಾಲ್ಗುಡಿ ಡೇಸ್ ಮತ್ತು ರಣಧೀರ.. ಮಾಲ್ಗುಡಿ ಡೇಸ್ ಚಿತ್ರವನ್ನು 1985-86 ನೇ ಶಾಲೆಯ ರಜೆ ಸಮಯದಲ್ಲಿ ಚಿತ್ರೀಕರಣ ಮಾಡಿ. ತದನಂತರ 1987 ರಲ್ಲಿ ಬಿಡುಗಡೆ ಮಾಡಲಾಯಿತು. ಈ ಚಿತ್ರದಲ್ಲಿ ಬಾಲಕನ ಪಾತ್ರದಲ್ಲಿ ಅಭಿನಯಿಸಿದ ಮಾಸ್ಟರ್ ಮಂಜುನಾಥ್ ಅವರಿಗೆ ಅಂತಾರಾಷ್ಟ್ರೀಯ, ಒಂದು ರಾಷ್ಟ್ರೀಯ ಮತ್ತು ಒಂದು ರಾಜ್ಯ ಪ್ರಶಸ್ತಿ ಕೂಡ ದೊರಕಿದೆ..

ಇನ್ನು ಸೂಪರ್ ಹಿಟ್ ಸಿನಿಮಾ ನಟ ನಿರ್ದೇಶಕ ಶಂಕರ್ ನಾಗ್ ರವರ, ನೋಡಿ ಸ್ವಾಮಿ ನಾವಿರೋದೆ ಹೀಗೆ, ಎಸ್.ಪಿ.ಸಾಂಗ್ಲಿಯಾನಾ, ಮತ್ತು ಅಮಿತಾಭ್ ಬಚ್ಚನ್ ಅಭಿನಯಿಸಿದ ಬಾಲಿವುಡ್ ನ ಅಗ್ನಿಪಥ್ ಚಿತ್ರದಲ್ಲಿನ ಯುವ ವಿಜಯ್ ದೀನನಾಥ್ ಚೌಹಾಣ್ ಪಾತ್ರದಲ್ಲಿ ಮಾಸ್ಟರ್ ಮಂಜುನಾಥ್ ಅಭಿನಯಿಸಿದ್ದಾರೆ.. ಅನಂತರ ದೊಡ್ಡವರಾದ ಮೆಲೆ ಕೆಲವು ಚಿತ್ರಗಳಲ್ಲಿ ನಟಿಸಿದ ಇವರಿಗೆ ಆ ಸಿನಿಮಾಗಳು ಅಷ್ಟೊಂದು ಕೈ ಹಿಡಿಯಲಿಲ್ಲ. ಹಾಗಾಗಿ ಮಾಸ್ಟರ್ ಮಂಜುನಾಥ್ ವಿದ್ಯಾಭ್ಯಾಸ ಮಾಡುವ ಕಡೆಗೆ ಗಮನ ಕೊಡುತ್ತಾರೆ.

ಇವರು ಮೈಸೂರು ವಿಶ್ವವಿದ್ಯಾನಿಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ.ಎ ಪದವಿ, ಹಾಗೂ ಎಂ.ಎ ಪದವಿಯನ್ನು ಮುಗಿಸಿಕೊಂಡಿದ್ದಾರೆ.. ಅಷ್ಟೇ ಅಲ್ಲದೇ ಛಾಯಾಗ್ರಹಣ ಮತ್ತು CA ಫೌಂಡೇಷನ್ ಕೋರ್ಸ್ನಲ್ಲಿ ಡಿಪ್ಲೊಮವನ್ನು ಕೂಡ ಹೊಂದಿದ್ದಾರೆ. ಇನ್ನು ಓದು ಮುಗಿಸಿದ ನಂತರ ಐಟಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡ ಮಾಸ್ಟರ್ ಮಂಜುನಾಥ್ ಆ ಕೆಲಸವನ್ನು ತೊರೆದು ತನ್ನದೇ ಆದ ಸ್ವಂತ ಪಿ.ಆರ್ ಸಲಹಾ ಕಂಪನಿಯನ್ನು ನಡೆಸುತ್ತಿದ್ದಾರೆ..

ಇನ್ನು ಮಂಜುನಾಥ್ ಅವರು ಕ್ರೀಡಾಪಟು, ಒಟ ಹಾಗು ಜಿಗಿತ ಪಟು ಸ್ವರ್ಣರೇಖಾರನ್ನು ವಿವಾಹವಾಗಿದ್ದು ಒಬ್ಬ ಮಗ ಕೂಡ ಇದ್ದಾನೆ‌.. ಸಿನಿಮಾಗಳು ಕೈ ಹಿಡಿಯದಿದ್ದರೆ ಎಲ್ಲಾ ಮುಗಿಯಿತು ಅನ್ನುವ ರೀತಿಯಲ್ಲಿ ಕೆಲವರು ಇರುತ್ತಾರೆ ಆದರೆ ಮಾಸ್ಟರ್ ಮಂಜುನಾಥ್ ವಿದ್ಯಾಭ್ಯಾಸ ಮುಗಿಸಿ ತನ್ನದೇ ಆದ ಜೀವನವನ್ನು ರೂಪಿಸಿಕೊಂಡಿದ್ದಾರೆ.. ಕನ್ನಡ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ನಮ್ಮನ್ನು ರಂಜಸಿದ ಮಾಸ್ಟರ್ ಮಂಜುನಾಥ್ ಅವರಿಗೆ ಧನ್ಯವಾದಗಳು..