Advertisements

ನನ್ನ ಹೆಂಡ್ತಿ ಜೊತೆ ಇದು ಕೊನೆಯ ಸೆಲ್ಪಿ ಎಂದ ಗಂಡ! ಆ ಒಂದು ಕ್ಷಣ ಏನಾಯ್ತು ಗೊತ್ತಾ? ಕಣ್ಣಂಚಿನಲ್ಲಿ ನೀರು ತರಿಸಿದ ರಿಯಲ್ ಸ್ಟೋರಿ.

Life

ನಮಸ್ತೆ ಸ್ನೇಹಿತರೆ ಒಬ್ಬ ವ್ಯಕ್ತಿ ತನ್ನ ಪತ್ನಿಯ ಜೊತೆ ಸೆಲ್ಪಿ ತೆಗೆದುಕೊಂಡು ಇದೇ ನನ್ನ ಕೊನೆಯ ಸೆಲ್ಪಿ ಎಂದು ಹೇಳಿದ್ದಾರೆ. ನಿಜಕ್ಕೂ ಕಣ್ಣೀನ ಅಂಚಿನಲ್ಲಿ ಕಣ್ಣೀರನ್ನು ತರಿಸುವ ರಿಯಲ್ ಸ್ಟೋರಿ ಇದು ಅವರ ಮಾತುಗಳಲ್ಲೇ ಕೇಳಿ. ಜನವರಿಯಲ್ಲಿ ನಾನು ನನ್ನ ಪತ್ನಿ ಬೈಕ್ ನಲ್ಲಿ ಪ್ರಯಾಣ ಮಾಡುತಿದ್ದೆವು. ಚೆನ್ನೈನ ಒಂದು ನಗರದಲ್ಲಿ ಪ್ರಯಾಣ ಮಾಡತ್ತಿದ್ದ ವೇಳೆ ನನ್ನ ಪತ್ನಿ ಪ್ರಜ್ಞೆ ತಪ್ಪಿ ಬೈಕ್ ನಿಂದ ಕೆಳಗೆ ಬೀಳುತ್ತಾರೆ‌‌. ತಕ್ಷಣ ಆಸ್ವತ್ರೆಗೆ ಕರೆದುಕೊಂಡು ಹೋದೆ ಆದರೆ ವೈದ್ಯರು ನಿಮ್ಮ ಪತ್ನಿಯ ತಲೆಗೆ ಬಲವಾದ ಪೆಟ್ಟು ಬಿದ್ದಿರುವ ಕಾರಣ ಬದಕುವುದು ಕಷ್ಟ ಎಂದು ಹೇಳುತ್ತಾರೆ‌‌. ಇನ್ನು ಈ ಮಾತನ್ನು ಕೇಳಿದ ನನಗೆ ಸಹಿಸಿಕೊಳ್ಳಲು ಆಗಲಿಲ್ಲ.

Advertisements

ನನ್ನ ಪತ್ನಿಯ ಜೀವವನ್ನು ಹೇಗಾದರು ಮಾಡಿ ಉಳಿಸಿಕೊಳ್ಳಲೇಬೇಕು ಎಂಬ ಹೋರಾಟದಿಂದ ದೊಡ್ಡ ಖಾಸಗಿ ಆಸ್ವತ್ರೆಗೆ ಕರೆದುಕೊಂಡು ಹೋದೆ. ಕೊನೆಗೆ ಈ ಖಾಸಗಿ ಆಸ್ವತ್ರೆಯಲ್ಲಿ ಸ’ರ್ಜರಿ ಮಾಡಿದ ಮೇಲೆ ನನ್ನ ಪತ್ನಿಯ ಮೆದುಳು ಸಂಪೂರ್ಣ ಸ್ಪಂದಿಸುವ ಶಕ್ತಿಯನ್ನು ಕಳೆದುಕೊಂಡಿತ್ತು. ನನಗೆ ಏನು ಮಾಡಬೇಕು ಎನ್ನುವುದು ಗೊತ್ತಾಗಲೇ ಇಲ್ಲ. ಇದೇ ಸಮಯದಲ್ಲಿ ನನ್ನ ಪತ್ನಿ ಐದು ತಿಂಗಳು ಗರ್ಬಿಣಿಯಾಗಿದ್ದಳು‌. ತಾಯಿ ಕೋ’ಮದಲ್ಲಿ ಮಗು ಗ’ರ್ಭದಲ್ಲಿ ಇಬ್ಬರು ಕೂಡ ಬದುಕುವುದಕ್ಕೆ ಹೋರಾಟ ನಡೆಸುತ್ತಿದ್ದರು. ಆದರೆ ಆ ಮಗುವನ್ನು ಉಳಿಸಿಕೊಳ್ಳಲು ಹಾಗಲೇ ಇಲ್ಲ‌.

ಐದು ದಿನಗಳ ನಂತರ ಕೊಮಾದಲ್ಲಿ ಇದ್ದ ನನ್ನ ಪತ್ನಿಯ ಗ’ರ್ಭದಲ್ಲೇ ಮಗು ಮೃ’ತಪಟ್ಟಿತು. ಕಣ್ಣು ತೆರೆದು ಪ್ರಪಂಚದ ನೋಡುವ ಭಾಗ್ಯ ನನ್ನ ಮಗುವಿಗೆ ಸಿಗಲಿಲ್ಲ. ಗರ್ಭದಲ್ಲೇ ನಮ್ಮಿಂದ ದೂರವಾಯಿತು. ಇನ್ನು ಅದೇ ದಿನದಂದು ಸಾಯಂಕಾಲ ನಿನ್ನ ಪತ್ನಿಯ ಮೆದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ತಿಳಿಸುತ್ತಾರೆ. ನಾನು ನನ್ನ ಪತ್ನಿ ಈ ಹಿಂದೆ ಅಂಗಾಗಳನ್ನು ದಾನ ಮಾಡುವುದರ ಬಗ್ಗೆ ಮಾತನಾಡಿದ್ದೆವು. ಅಳುತ್ತಲೇ ನನ್ನ ಪತ್ನಿಯ ಅಂಗಾಂಗಗಳನ್ನು ದಾನ ಮಾಡಲು ಪೇಪರ್ ಮೇಲೆ ಸಹಿ ಹಾಕಿದೆ. ಜನವರಿ 13 ರಂದು ನನ್ನ ಹೆಂಡತಿ, ಮಗು ಇಬ್ಬರು ಕೂಡ ಬಿಟ್ಟು ಹೋದರು.

ಅತಿ ಹೆಚ್ಚು ಪ್ರಿತಿಸುತ್ತಿದ್ದ ನನ್ನ ಹೆಂಡತಿಯನ್ನು ಕಳೆದುಕೊಂಡುಬಿಟ್ಟೆ. ಕೊನೆಗೆ ನಾನು ಅನಾಥನಾದೆ, ಸುಂದರವಾದ ನನ್ನ ಕುಟುಂಬ ಈ ರೀತಿ ಛಿದ್ರವಾಗುತ್ತದೆ ಎಂದು ಊಹಿಸಿರಲಿಲ್ಲ. ಆ ದಿನ ಪ್ರಯಾಣ ಮಾಡುತಿದ್ದಾಗ ನಾನು ಹೆಲ್ಮೆಟ್ ಧರಿಸಿದ್ದೇ ಆದರೆ ನನ್ಮ ಪತ್ನಿ ಹೆಲ್ಮೆಟ್ ಧರಿಸಿರಲಿಲ್ಲ‌. ನನ್ನ ಪತ್ನಿಗೆ ಒಂದು ಹೆಲ್ಮೆಟ್ ಅನ್ನು ಕೊಡಿಸಿದ್ದರೆ ಈ ದಿನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ನನ್ನ ಪತ್ನಿಯನ್ನು ಕಳೆದುಕೊಳ್ಳುತ್ತಿರಲಿಲ್ಲ.

ಸ್ನೇಹಿತರೆ ನೋಡಿದರಲ್ವಾ ಹೆಲ್ಮೆಟ್ ಆಕಿದ್ದರೆ ಆ ವ್ಯಕ್ತಿ ತುಂಬಾ ಪ್ರೀತಿಸುವ ಹೆಂಡತಿಯನ್ನು ಕಳೆದುಕೊಳ್ಳುತ್ತಿರಲಿಲ್ಲ. ಹೆಲ್ಮೆಟ್ ಹಾಕದೆ ಎಷ್ಟೊ ಜನ ಜೀವವನ್ನು ಕಳೆದುಕೊಂಡಿದ್ದಾರೆ, ಕುಟುಂಬಗಳು ಅನಾಥವಾಗಿದೆ. ಈ ರಿಯಲ್ ಸ್ಟೋರಿ ಒಂಬತ್ತು ತಿಂಗಳ ಹಿಂದೆ ನಡೆದಿರುವಂತದ್ದು ಆದರೆ ಈ ಸ್ಟೋರಿ ಇಂದ ಒಂದು ಮೆಸೆಜ್ ಇದೆ ಅದನ್ನ ಅರ್ಥಮಾಡಿಕೊಳ್ಳಿ. ದಯವಿಟ್ಟು ಪಬ್ಲಿಕ್ ಮಾಸ್ಟರ್ ಕಡೆಯಿಂದ ನಿಮ್ಮಲ್ಲಿ ಒಂದು ವಿನಂತಿ ಹೆಲ್ಮೆಟ್ ಧರಿಸಿ ನಿಮ್ಮ ಜೀವವನ್ನು ಕಾಪಾಡಿಕೊಳ್ಳಿ ನಿಮ್ಮ ಕುಟುಂಬವನ್ನು ಅನಾಥರನ್ನಾಗಿ ಮಾಡಬೇಡಿ.