Advertisements

ಸಾಲು ಸಾಲು ಸಿನಿಮಾಗಳು ಮುಂದಿದ್ದರೂ.. ನಾನು ನಟಿಸುವುದಿಲ್ಲ ಎಂದು ಚಿತ್ರರಂಗವನ್ನು ಬಿಟ್ಟ ಈ ಖ್ಯಾತ ನಟಿ! ಹಳ್ಳಿಯಲ್ಲಿ ಮಾಡುತ್ತಿರುವುದೇನು ನೋಡಿ..

Inspire

ನಮಸ್ತೆ ಸ್ನೇಹಿತರೆ. ಶ್ರೀಮಂತ ಜೀವನಕ್ಕೆ ಒಂದು ಸಾರಿ ಒಗ್ಗಿದರೆ ಅದರಿಂದ ಹೊರಗಡೆ ಬರುವುದು ತುಂಬಾ ಕಷ್ಟ ಆದರೆ ಇಲ್ಲೊಬ್ಬ ಸ್ಟಾರ್ ನಟಿ ಸಿನಿಮಾಗಳಲ್ಲಿ ಎಷ್ಟೇ ಅವಕಾಶಗಳು ಸಿಕ್ಕರೂ, ಸಿನಿಮಾ ರಂಗಕ್ಕೆ ಗುಡ್ ಬಾಯ್ ಹೇಳಿ ಹಳ್ಳಿ ಒಂದರಲ್ಲಿ ಜೀವನ ನಡೆಸುತ್ತಿದ್ದಾರೆ. ಅಷ್ಟಕ್ಕೂ ಈ ಖ್ಯಾತ ನಟಿ ಯಾರು, ಹಳ್ಳಿಯಲ್ಲಿ ಇದ್ದು ಇವರು ಮಾಡುತ್ತಿರುವ ಕೆಲಸವೇನು ಎಂಬುದನ್ನ ತಿಳಿಯೋಣ ಬನ್ನಿ. ದ್ರುವತಾರೆ, ನಾನಿರುವುದು ನಿನಗಾಗಿ ಸೇರಿಂದರೆ ಹಲವು ಕನ್ನಡ ಹಿಟ್ ಸಿನಿಮಾಗಳಲ್ಲಿ ನಟಿಸಿದ ನಟಿ ದೀಪ ಅವರು. ಆ ಕಾಲಕ್ಕೆ ಸೌಂದರ್ಯ ನಟಿಯರಲ್ಲಿ ಇವರು ಕೂಡ ಒಬ್ಬರಾಗಿದ್ದರು.

Advertisements

ರೊ’ಮ್ಯಾಂಟಿಕ್ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿರುವ ದೀಪ ಮೂಲತಃ ಕೇರಳ ರಾಜ್ಯದವರು. ಇನ್ನು ಕೇರಳ ರಾಜ್ಯದಲ್ಲಿ ಇವರು ಹುನ್ನಿ ಮೇರಿ ಎಂದು ಗುರುತಿಸಿಕೊಂಡಿದ್ದು ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ಸಮಯದಲ್ಲೇ ಮನೆಯವರು ದೀಪ ಅವರಿಗೆ ಮದುವೆ ನಿಶ್ಚಯ ಮಾಡುತ್ತಾರೆ. 1982 ರಲ್ಲಿ ಕಾಲೇಜು ಉಪನ್ಯಾಸಕರಾದ ರೆಜೊರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ‌. ನಂತರವೂ ಕೂಡ ಹಲವು ಸಿನಿಮಾಗಳಲ್ಲಿ ನಟಿಸಿದ ದೀಪ ಅವರಿಗೆ ಇನ್ನಷ್ಟು ಸಾಲು ಸಾಲು ಸಿನಿಮಾಗಳು ಮುಂದಿದ್ದವು. ಆದರೆ 1992 ರಲ್ಲಿ ನಟಿ ದೀಪ ಅವರು ನಾನು ಸಿನಿಮಾಗಳಲ್ಲಿ ನಟಿಸಲಾರೆ ಎಂದು ಹೇಳುತ್ತಾರೆ.

ಸಿನಿಮಾ ರಂಗಕ್ಕೆ ಗುಡ್ ಭಾಯ್ ಹೇಳಿದ ಇವರು ಹೊಸ ಕೆಲಸವನ್ನು ಮಾಡಲು ಶುರುಮಾಡುತ್ತಾರೆ. ಎಲ್ಲರಿಗೂ ಉಪಯೋಗವಾಗುವಂತಹ ಕೆಲಸವನ್ನು ಮಾಡಬೇಕೆಂದು. ಆಲೋಚನೆ ಮಾಡಿದ ದೀಪ ಅವರು ಹಳ್ಳಿ ಹಾಗೂ ಬುಡಕಟ್ಟು ಜನಾಂಗದ ಜೊತೆ ಬೆರೆತು ಅವರ ಪರಸ್ಥಿತಿಗಳ ಬಗ್ಗೆ ತಿಳಿದುಕೊಂಡು, ಮೆ’ಡಿಕಲ್ ಕ್ಯಾಂಪ್ ಗಳನ್ನು ಏರ್ಪಡಿಸಿ, ಶಾಲೆಗೆ ಹೋಗದಿರುವ ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸವನ್ನು ಮಾಡುತ್ತಿದ್ದಾರೆ. ಹಳ್ಳಿಯಲ್ಲೇ ಉಳಿದುಕೊಂಡಿರುವ ನಟಿ ದೀಪ ಅವರು ಸುತ್ತಮುತ್ತ ಹಳ್ಳಿಯ ಜನರ ಕಷ್ಟಗಳ ಬಗ್ಗೆ ಆಲಿಸಿ ಅಭಿವೃದ್ಧಿ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.

ಖ್ಯಾತ ನಟಿಯಾಗಿದ್ದ ದೀಪ ಅವರಿಗೆ ಸಾಲು ಸಾಲು ಸಿನಿಮಾ ಅವಕಾಶಗಳು ಮುಂದಿದ್ದರು! ಆ ಸಿನಿಮಾಗಳನ್ನು ನಿರಾಕರಿಸಿ ಸಾಮಾನ್ಯ ಮಹಿಳೆಯಂತೆ ಹಳ್ಳಿ ಒಂದರಲ್ಲಿ ಇದ್ದು ಹಳ್ಳಿಯ ಜನರಿಗೆ, ಬುಡಕಟ್ಟು ಜನಾಂಗದವರಿಗೆ ಹಾಗೂ ಹಿಂದುಳಿದ ಹಳ್ಳಿಗಳ ಅಭಿವೃದ್ಧಿಗಾಗಿ ಶ್ರಮಿಸಿ ಸಾಮಾಜಿಕ ಸೇವಕಿಯಾಗಿದ್ದಾರೆ‌. ಇತ್ತೀಚಿಗೆ ಮಾಧ್ಯಮದವರು ನಟಿ ದೀಪ ಅವರ ಅತ್ತಿರ ನೀವು ಮತ್ತೆ ಸಿನಿಮಾಗಳಲ್ಲಿ ನಟಿಸುತ್ತೀರ ಎಂದು ಕೇಳಿದ ಪ್ರಶ್ನೆಗೆ ನಾನು ಸಿನಿಮಾಗಳನ್ನು ನೋಡಿ ವರ್ಷಗಳೇ ಕಳೆದು ಹೋಗಿದೆ ಸಿನಿಮಾದಲ್ಲಿ ನನಗೆ ಯಾವುದೇ ಆಸಕ್ತಿಯಿಲ್ಲ ಎಂದು ಹೇಳಿದ್ದಾರೆ. ಒಂದಂತೂ ನಿಜ! ಕಷ್ಟದ ಪರಿಸ್ಥಿತಿಯಲ್ಲಿರುವವರಿಗೆ ಸೇವೆ ಮಾಡಿದರೆ ಅದರಲ್ಲಿ ಸಿಗುವ ಸಂತೋಷನೇ ಬೇರೆ. ಇನ್ನಷ್ಟು ದೇವರು ನಟಿ ದೀಪ ಅವರಿಗೆ ಸಾಮಾಜಿಕ ಸೇವೆ ಮಾಡಲು ಶಕ್ತಿಯನ್ನು ನೀಡಲಿ ಎಂದು ಎಲ್ಲರೂ ಆರೈಸೋಣ.