Advertisements

ದುರ್ಯೋಧನ ತಂಗಿ ದುಶ್ಯಲೆ ಮಹಾಭಾರತದ ನಂತರ ಏನಾದಳು? ದುರ್ಯೋಧನನ ಅಳಿಯನನ್ನ ಬದುಕಲು ಬಿಟ್ಟಿದ್ದೇಕೆ ಅರ್ಜುನ!?

Adyathma

ನಮಸ್ತೆ ಸ್ನೇಹಿತರೆ. ದುರ್ಯೋಧನನಿಗೆ ಓರ್ವ ಸಹೋದರಿ ಇದ್ದಾಳೆ. ಆಕೆಯ ಹೆಸರು ದುಶ್ಯಲಾ.. ಅವಳನ್ನ ಸಿಂಧೂ ರಾಜ ಜಯದ್ರಥನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಆದರೆ ಕುರುಕ್ಷೇತ್ರದ ಯು’ದ್ಧದ ವೇಳೆ ಅರ್ಜುನನ ಮಗ ಅಭಿಮನ್ಯುವನ್ನ ವಧೆ ಮಾಡಲು ಜಯದ್ರಥ ಸಹಾಯ ಮಾಡಿದ್ದ. ಇದರಿಂದ ಕೋಪಕೊಂಡಿದ್ದ ಅರ್ಜುನ ಶ್ರೀಕೃಷ್ಣನ ಚಮತ್ಕಾರದಿಂದ ಜಯದ್ರಥನನ್ನು ವಧೆ ಮಾಡಿದ. ನಂತರ ಜಯದ್ರಥನ ಪುತ್ರ ಸಿಂಧೂ ರಾಜ್ಯದ ಅಧಿಪತಿಯಾಗಿದ್ದ. ಈಗಿರುವಾಗ ಒಂದು ದಿನ ಅರ್ಜುನ ಮತ್ತು ಸಿಂಧೂ ರಾಜ್ಯದ ಸೇನೆ ಮುಖಾಮುಖಿಯಾಗುತ್ತದೆ. ಈ ಬಗ್ಗೆ ಮಹಾಭಾರತದ ಅಶ್ವಮೇಧಿಕಪರ್ವದ ಅಂಗೀತಪರ್ವದಲ್ಲಿ ಉಲ್ಲೇಖವಿದೆ.

Advertisements

ಕುರುಕ್ಷೇತ್ರ ಯು’ದ್ಧ ಮುಗಿದ ಬಳಿಕ ಯುದಿಷ್ಠಿರನೇ ಹಸ್ತಿನಾಪುರದ ರಾಜನಾಗಿ ರಾಜ್ಯಾಭಿಷೇಕ ಮಾಡಲಾಯಿತು. ನಂತರದಲ್ಲಿ ಶ್ರೀ ಕೃಷ್ಣ ಮತ್ತು ಋಷಿಮುನಿಗಳಂತೆ ಪಾಂಡವರು ಅಶ್ವಮೇಧಯಾಗವನ್ನು ಮಾಡಲು ನಿರ್ಧಾರ ಮಾಡುತ್ತಾರೆ. ಅದರಂತೆಯೇ ಅಶ್ವಮೇಧ ಕುದುರೆಯನ್ನ ಅರ್ಜುನನ ನೇತೃತ್ವದಲ್ಲಿ ಸಂಚರಿಸಲು ಬಿಡಲಾಯಿತು. ಆ ಕುದುರೆ ಹಲವು ರಾಜ್ಯಗಳನ್ನು ದಾಟಿ ಮುಂದುವರೆಯುತ್ತದೆ. ಬಹುತೇಕ ಎಲ್ಲಾ ರಾಜ್ಯಗಳ ರಾಜರು ಯು’ದ್ಧ ಮಾಡದೆಯೇ ಹಸ್ತಿನಾಪುರದ  ಮಿತ್ರತ್ವವನ್ನ ಸ್ವೀಕರಿಸಿದರು. ಅದೇ ರೀತಿ ವಿರೋಧ ವ್ಯಕ್ತಪಡಿಸಿದ ರಾಜರನ್ನ ಅರ್ಜುನ ಸೋಲಿಸಿ ಮುಂದೆ ಸಾಗುತ್ತಾನೆ. ಇದೇ ರೀತಿ ಮುಂದುವರೆದ ಅರ್ಜುನ ಸೈನ್ಯದ ಜೊತೆಗೆ ಸಿಂಧೂ ರಾಜ್ಯಕ್ಕೆ ಆಗಮಿಸುತ್ತಾನೆ.

ಅರ್ಜುನ ಸೇನೆಯೊಂದಿಗೆ ಬಂದಿರುವುದು ಕಂಡು ಸಿಂಧೂ ರಾಜ್ಯದ ಸೈನಿಕರು ತುಂಬಾ ಹೆದರುತ್ತಾರೆ. ಅರ್ಜುನ ಯು’ದ್ದಕ್ಕೆ ಬಂದಿರಬಹುದು ಎಂದು ಭಾವಿಸುತ್ತಾರೆ. ಈಗಾಗಿ ಅರ್ಜುನನ ಜೊತೆ ಯು’ದ್ಧ ಮಾಡಲು ಶುರುಮಾಡುವ ಅವರು ಬಾ’ಣದ ಮಳೆ ಸುರಿಸೋಕೆ ಶುರುಮಾಡುತ್ತಾರೆ. ಆದರೆ ಅರ್ಜುನ ಆರಂಭದಲ್ಲಿ ವಾಪಸ್ ಧಾ’ಳಿ ಮಾಡಲಿಲ್ಲ ಬದಲಿಗೆ ಸಿಂಧೂ ಸೈನಿಕರ ದಾ’ಳಿಯಿಂದ ತಪ್ಪಿಸಿಕೊಳ್ಳುತ್ತಾ ನಾನು ಯು’ದ್ಧ ಮಾಡೊಕೆ ಬಂದಿಲ್ಲ. ದುಶ್ಯಲಾನನ್ನ ನೋಡುವುದಕ್ಕೆ ಬಂದಿದ್ದೇನೆ ಎಂದು ಸೈನಿಕರ ಮನವೊಲಿಸಲು ಯತ್ನಿಸುತ್ತಾನೆ ಆದರೆ ಸಿಂಧೂ ಸೈನಿಕರು ಅರ್ಜುನನ ಮಾತು ಕೇಳಲೇ ಇಲ್ಲ. ಬಾ’ಣದ ಮಳೆಯನ್ನ ಮುಂದುವರೆಸುತ್ತಾರೆ. ಇದರಿಂದ ಸಿಟ್ಟಿಗೆದ್ದ ಅರ್ಜುನ ಗಾಂಡೀವ ಎತ್ತಿಕೊಂಡು ಒಂದೇ ಏ’ಟಲ್ಲಿ ಇಡೀ ಸಿಂಧೂ ಸೈನ್ಯವನ್ನ ನಾ’ಶಮಾಡುತ್ತಾನೆ.

ಈ ವಿಚಾರ ದುರ್ಯೋಧನನ ಸಹೋದರಿ ದುಶ್ಯಲಾಗೆ ಗೊತ್ತಾಗಿ ಗಾಬರಿಯಾಗುತ್ತಾಳೆ. ಈ ವೇಳೆ ಸಿಂದೂ ರಾಜ್ಯದ ರಾಜನಾಗಿದ್ದ ಜಯದ್ರಥನ ಮಗ ಸುರಥ್ ಕಂಗಾಲಾಗಿ ಕು’ಸಿದು ಬೀಳುತ್ತಾನೆ. ಆಗ ದುಶ್ಯಲಾ ಸೂರಥ್ ನ ಚಿಕ್ಕ ಮಗುವನ್ನು ಕರೆದುಕೊಂಡು ಅರ್ಜುನ ಇದ್ದಲ್ಲಿಗೆ ಬರುತ್ತಾಳೆ. ಮೊಮ್ಮಗುವನ್ನು ಅರ್ಜುನನ ಮುಂದಿರಿಸಿ ಬಿಕ್ಕಿ ಬಿಕ್ಕಿ ಅಳಲು ಶುರುಮಾಡುತ್ತಾಳೆ. ಇದನ್ನ ಕಂಡ ಅರ್ಜುನ ತನ್ನ ಧನಸ್ಸನ್ನು ಕೆಳಗೆ ಇಳಿಸುತ್ತಾನೆ. ಅಲ್ಲದೇ ತನ್ನ ತಂಗಿ ದುಶ್ಯಲಾಳನ್ನ ಸಮಾಧಾನ ಮಾಡುತ್ತಾ ಸಹೋದರಿ ನಾನು ನಿನ್ನ ಯಾವ ಕೆಲಸ ಮಾಡಬೇಕು ಅಂತ ಏಳು ಎಂದು ಕೇಳುತ್ತಾನೆ. ಆಗ ಮಾತನಾಡುವ ದುಶ್ಯಲಾ! ಅಣ್ಣ ಇವನು ನಿನ್ನ ಅಳಿಯ ಸೂರಥ್ ನ ಮಗ. ಆದರೆ ಈ ಮಗುವಿನ ತಂದೆ ಸುರಥ್ ನೀನು ಬಂದ ವಿಚಾರ ತಿಳಿದು ಪ್ರ’ಜ್ಞೆ ತಪ್ಪಿದ್ದಾನೆ‌. ನೀನು ಕುರುಕುಲದಲ್ಲೇ ಶ್ರೇಷ್ಠನಾಗಿದ್ದಿಯಾ ಧರ್ಮದ ಬಗ್ಗೆ ನಿನಗೆ ಗೊತ್ತಿದೆ ದಯಮಾಡಿ ದುಃಖದಲ್ಲಿರುವ ಈ ನಿನ್ನ ತಂಗಿಯನ್ನು ನೋಡು, ನಿನ್ನ ಅಳಿಯನ ಮಗುವನ್ನು ನೋಡು.

ಕೆಟ್ಟ ಬುದ್ದಿಯ ದುರ್ಯೋಧನ ಮತ್ತು ಜಯದ್ರಥನನ್ನ ಮರೆತು ಇವನನ್ನ ಸ್ವೀಕರಿಸು. ಈ ಮಗುವಿನ ಮೇಲೆ ಕೃಪೆ ತೋರಿಸು ಎಂದು ರೋ’ದಿಸುತ್ತಾಳೆ. ಸೋದರಿ ನೋವನ್ನ ಕಂಡ ಅರ್ಜುನನಿಗೆ ತುಂಬಾ ಬೇಸರವಾಗುತ್ತದೆ. ನನ್ನ ಕುಟುಂಬದವರನ್ನೇ ವಧೆ ಮಾಡುವಂತಹ ಸ್ಥಿತಿ ತಂದಿಟ್ಟ ಈ ಕ್ಷತ್ರಿಯ ಧರ್ಮಕ್ಕೆ ದಿಕ್ಕಾರ ಅನ್ನುತ್ತಾ ಸಹೊದರಿ ದುಶ್ಯಲಾ ಮತ್ತು ಸುರಥ್ ನ ಮಗುವನ್ನು ಅಪ್ಪಿಕೊಳ್ಳುತ್ತಾನೆ. ಬಳಿಕ ಅಶ್ವಮೇಧ ಕುದುರೆಯೊಂದಿಗೆ ಅಲ್ಲಿಂದ ಮುಂದೆ ಹೊರಟುಹೋಗುತ್ತಾನೆ. ಇದನ್ನು ಕಂಡ ಸಿಂಧೂ ರಾಜ್ಯದ ಸೈನಿಕರು ಕೂಡ ಸುಮ್ಮನಾಗುತ್ತಾರೆ. ಸ್ನೇಹಿತರೆ ಇದು ಮಹಾಭಾರತದ ಯು’ದ್ಧದ ಬಳಿಕ ದುರ್ಯೋಧನನ ಸಹೋದರಿ ದುಶ್ಯಲಾ ಮತ್ತು ಅರ್ಜುನನ ಮುಖಾಮುಖಿಯಾದ ಕಥೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ.