Advertisements

ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಬಿದ್ದ ಯುವಕನನ್ನು ರಕ್ಷಿಸಲು ರೈಲು ಚಾಲಕ ಮಾಡಿದ ಸಖತ್ ಪ್ಲಾನ್ ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ. ಚಲಿಸುವ ರೈಲಿನಿಂದ ಆಕಸ್ಮಿಕವಾಗಿ ಕೆಳಗ್ಗೆ ಬಿದ್ದು ಮೃ’ತಪಟ್ಟಿರುವ ಸುದ್ದಿಗಳನ್ನು ನೀವು ಕೇಳಿರುತ್ತೀರಾ. ಇಲ್ಲಿಯೂ ಕೂಡ ಒಂದು ಘಟನೆ ನಡೆದಿದೆ‌.. ಚಲಿಸುತ್ತಿದ್ದ ರೈಲಿನಿಂದ ಬಿದ್ದ ಯುವಕನನ್ನು ರಕ್ಷಣೆ ಮಾಡಲು ರೈಲಿನ ಚಾಲಕ ಮಾಡಿದ ಕೆಲಸ ನೋಡಿದರೆ ನಿಜಕ್ಕೂ ಗ್ರೇಟ್ ಅನ್ನುತ್ತೀರ. ಮಹಾರಾಷ್ಟ್ರದಿಂದ ಹೋಗುತ್ತಿದ್ದ ಒಂದು ಎಕ್ಸ್ಪ್ರೆಸ್ ರೈಲಿನ ಡೋರ್ ಬಳಿ 27 ವರ್ಷದ ರಾಹುಲ್ ಎಂಬ ವ್ಯಕ್ತಿ ನಿಂತಿದ್ದ ಆದರೆ ರೈಲು ವೇಗವಾಗಿ ಹೋಗುತ್ತಿದ್ದಂತೆ ಡೋರ್ ಬಳಿ ನಿಂತಿದ್ದ ರಾಹುಲ್ ಆಕಸ್ಮಿಕವಾಗಿ ಕೆಳಗೆ ಬಿದ್ದುಬಿಡುತ್ತಾನೆ.

Advertisements

ರಾಹುಲ್ ಎಕಾ ಏಕಿ ಕೆಳಗೆ ಬಿದ್ದಿದ್ದನ್ನು ಗಮನಿಸಿದ ಟ್ರೈನ್ ಗಾರ್ಡ್ ರೈಲಿನ ಚಾಲಕನಿಗೆ ವಿಷಯವನ್ನು ತಿಳಿಸುತ್ತಾರೆ. ಈ ವಿಷಯ ತಿಳಿದ ರೈಲಿನ ಚಾಲಕ ತಕ್ಷಣ ಟ್ರೈನ್ ನಿಲ್ಲಿಸುತ್ತಾರೆ. ಆಗಾಗಲೇ ರಾಹುಲ್ ಕೆಳಗೆ ಬಿದ್ದ ಜಾಗದಿಂದ ಸುಮಾರು ಮೂರು ಕಿಲೋಮೀಟರ್ ನಷ್ಟು ದೂರ ರೈಲು ಮುಂದೆ ಹೋಗಿತ್ತು. ನಾವು ಆ ಯುವಕನನ್ನು ಹಾಗೆ ಬಿಟ್ಟು ಹೋದರೆ ಆತನನ್ನು ಯಾರೂ ಕೂಡ ರಕ್ಷಣೆ ಮಾಡುವುದಿಲ್ಲ.. ಹೇಗಾದರೂ ಮಾಡಿ ಆ ಹುಡುಗನನ್ನು ಉಳಿಸಬೇಕೆಂದು ರೈಲಿನ ಚಾಲಕ ಮತ್ತು ಗಾರ್ಡ್ ಮಾತಾಡಿಕೊಳ್ಳುತ್ತಾರೆ.

ಇನ್ನು ಈ ವಿಷಯವನ್ನು ಹತ್ತಿರದ ಟ್ರೈನ್ ಸ್ಟೇಷನ್ ಗೆ ಕಾಲ್ ಮಾಡಿ ರೈಲನ್ನು ರಿವರ್ಸ್ ಹೊಗುವುದಕ್ಕೆ ಅನುಮತಿಯನ್ನು ಕೇಳುತ್ತಾರೆ. ಸ್ಟೇಷನ್ ಕಡೆಯಿಂದ ಅನುಮತಿ ಸಿಕ್ಕ ತಕ್ಷಣ ಚಾಲಕ ರೈಲನ್ನು ರಿವರ್ಸ್ ಹೊಡೆಯುತ್ತಾರೆ. ನಂತರ ಕೆಳಗೆ ಬಿದ್ದು ನರ’ಳುತ್ತಿದ್ದ ರಾಹುಲ್’ನನ್ನು ಎತ್ತಿಕೊಂಡು ಮುಂದಿ‌ನ ಸ್ಟೇಷನ್ ನಲ್ಲಿ ರೈಲನ್ನು ನಿಲ್ಲಿಸುತ್ತಾರೆ. ಈ ಮೊದಲೇ ಮುಂದಿನ ಸ್ಟೇಷನ್ ಗೆ ಆಂಬ್ಯುಲೆನ್ಸ್ ಬರಲು ತಿಳಿಸಿರುತ್ತಾರೆ. ರೈಲು ನಿಲ್ಲಿಸಿದ ತಕ್ಷಣ ಆಂಬ್ಯುಲೆನ್ಸ್ ನಲ್ಲಿ  ರಾಹುಲ್’ನನ್ನು ಅತ್ತಿರದ ಆಸ್ವತ್ರೆಗೆ ಕಳುಹಿಸಿ ತಕ್ಷಣ ಚಿಕಿ’ತ್ಸೆಯನ್ನು ಕೊಡಿಸುತ್ತಾರೆ‌. ರಾಹುಲ್ ಗೆ ಚಿಕಿತ್ಸೆ ಕೊಟ್ಟ ವೈದ್ಯರು ಇನ್ನು ಸ್ವಲ್ಪ ಸಮಯ ಲೇಟ್ ಆಗಿದ್ದರೂ ಆತ ಜೀವಂತವಾಗಿ ಇರುತ್ತಿರಲಿಲ್ಲ..

ಸರಿಯಾದ ಸಮಯಕ್ಕೆ ಆಸ್ವತ್ರೆಗೆ ಬಂದ ಕಾರಣ ಜೀವಂತವಾಗಿ ಇದ್ದಾನೆ ಎಂದು ಹೇಳುತ್ತಾರೆ.. ರಾಹುಲ್ ರೈಲಿನಿಂದ ಕೆಳಗೆ ಬಿದ್ದಾಗ ಚಾಲಕ ತಲೆಕೆಡೆಸಿಕೊಳ್ಳದೆ ಹೋಗಿದ್ದರೆ ರಾಹುಲ್ ಉಳಿಯುತ್ತಿರಲಿಲ್ಲ. ಆದರೆ ಚಾಲಕ ರೈಲನ್ನು ರಿವರ್ಸ್ ಹೊಡೆದು ಹುಡುಗನ ಪ್ರಾಣವನ್ನು ಕಾಪಾಡಿ ಮಾನವೀಯತೆ ಮೆರೆದಿದ್ದಾರೆ. ನೀವು ರೀಲ್ ಸಿನಿಮಾಗಳಲ್ಲಿ ಇಂತಹ ಘಟನೆಗಳನ್ನು ನೋಡಿರಬಹುದು ಆದರೆ ರೀಯಲ್ ಜೀವನದಲ್ಲಿ ಇಂತಹ ಘಟನೆ ನಡೆದಿದ್ದು.. ಹುಡುಗನ ಜೀವವನ್ನು ರಕ್ಷಣೆ ಮಾಡಿದ ರೈಲಿನ ಗಾರ್ಡ್ ಹಾಗೂ ಚಾಲಕನಿಗೆ ಎಷ್ಟು ಮೆಚ್ಚುಗೆ ತಿಳಿಸಿದರು ಕಡಿಮೆ. ಧನ್ಯವಾದಗಳು..