ನಮಸ್ತೆ ಸ್ನೇಹಿತರೆ. ಸ್ಯಾಂಡಲ್ ವುಡ್’ನ ಸಿನಿಮಾ ಪ್ರಿಯರಿಗೆ ಗೊತ್ತಿಲ್ಲದ ವಿಷಯವೇನೆಂದರೆ.. ಕನ್ನಡ ಕಿರುತೆರೆಯ ನಟಿ, ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ಯಾರ ತಂಗಿ ಎನ್ನುವುದು. ದೀಪಿಕ್ ದಾಸ್ ಅವರು ಖ್ಯಾತ ನಟ ರಾಕಿಂಗ್ ಭಾಯ್ ಯಶ್ ಅವರ ತಂಗಿ ಅನ್ನುವುದು ಹಲವರಿಗೆ ತಿಳಿದಿಲ್ಲ.. ಆದರೆ ಯಶ್ ಹಾಗೂ ದಿಪಿಕಾ ದಾಸ್ ನಾವು ಅಣ್ಣ ತಂಗಿ ಎಂದು ಎಲ್ಲಿಯೂ ಕೂಡ ಹೇಳಿಕೊಂಡಿಲ್ಲ.

ದೀಪಿಕಾ ದಾಸ್ ಅವರು ಮೂಲತಃ ಹಾಸನದವರು.. ದೂದ್ ಸಾಗರ ಎನ್ನುವ ಕನ್ನಡ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ದೀಪಿಕಾ ದಾಸ್ ನಾ’ಗಿಣಿ ಧಾರವಾಹಿಯ ಮೂಲಕ ಪ್ರಸಿದ್ದಿಯಾದರು.. ಯಶ್, ದೀಪಿಕಾ ದಾಸ್ ಅವರ ಅಭಿಮಾನಿಗಳಿಗೆ ಇವರಿಬ್ಬರು ಅಣ್ಣ ತಂಗಿ ಎನ್ನುವುದು ತಿಳಿದಿಲ್ಲ. ಯಶ್ ಅವರ ಚಿಕ್ಕಮ್ಮನ ಮಗಳೇ ಈ ದೀಪಿಕಾ ದಾಸ್. ಆದರೇ ದೀಪಿಕಾ ದಾಸ್ ನನ್ನ ಅಣ್ಣ ಯಶ್ ಎಂದು ಯಾಕೆ ಹೇಳಿಕೊಂಡಿಲ್ಲ ಅಂದರೆ ಅದಕ್ಕೂ ಕಾರಣವಿದೆ..

ಒಂದು ಸಂದರ್ಶನದಲ್ಲಿ ಮಾತನಾಡಿದ ದೀಪಿಕಾ ದಾಸ್ ನನ್ನ ಅಣ್ಣ ಯಶ್ ಹೆಸರು ಹೇಳಿದರೆ.. ನಾನು ಯಶ್ ತಂಗಿ ಎಂದು ಹೇಳಿ ಅವಕಾಶಗಳನ್ನು ಪಡೆಯುತ್ತಿದ್ದೇನೆ ಎಂದು ಜನರು ಮಾತನಾಡಿಕೊಳ್ಳುತ್ತಾರೆ ಈ ಕಾರಣಕ್ಕೆ ನಾನು ಎಲ್ಲಿಯೂ ಹೇಳಿಕೊಂಡಿರಲಿಲ್ಲ.. ಯಶ್ ಹೆಸರು ಹೇಳಿ ಅವಕಾಶಗಳನ್ನು ಪಡೆಯುವುದು ಸಹ ನನಗೆ ಇಷ್ಟವಿಲ್ಲ ಎಂದು ಹೆಳಿದ್ದಾರೆ.. ಹೆಸರು ಇಟ್ಟುಕೊಂಡು ಬರುವುದರಿಂದ ಯಾವುದೇ ಪ್ರಯೋಜನವಿಲ್ಲ ಪ್ರತಿಭೆ ಇದ್ದರೆ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ಹೇಳುವ ಇವರು ಅಣ್ಣನ ಮೇಲೆ ಇಟ್ಟಿರುವ ಗೌರವ ಹಾಗೂ ಸಾಧನೆಯನ್ನು ಮೆಚ್ಚುವಂತಹದ್ದು..