Advertisements

ಧೃತರಾಷ್ಟ್ರ ಕುರುಡ ಆಗಿದ್ದು ಹೇಗೆ ಗೊತ್ತಾ! ಹಿಂದಿ‌ನ ಜನ್ಮದ ಶಾಪ ಕಣ್ಣನ್ನೇ ಕಿತ್ತುಕೊಂಡಿತಾ? ಹೇಗೆ ನೋಡಿ.

Adyathma

ನಮಸ್ತೆ ಸ್ನೇಹಿತರೆ.. ಮಹಾಭಾರತದ ಬಗ್ಗೆ ನೀವು ಓದಿದ್ದರೆ ಗೊತ್ತಿರಬಹುದು ಶಂತನು ಮತ್ತು ಸತ್ಯವತಿಗೆ ಇಬ್ಬರು ಮಕ್ಕಳಿದ್ದರು ಅವರೇ ವಿಚಿತ್ರವೀರ್ಯ ಮತ್ತು ಚಿತ್ರಾಂಗದ. ಚಿತ್ರಾಂಗದ ಯು’ದ್ಧ ಮಾಡುತ್ತ ಸಾ’ವನ್ನಪ್ಪಿದ್ದ. ನಂತರ ಭೀಷ್ಮ ಪಿತಾಮಹ ಕಾಶಿ ರಾಜಕುಮಾರಿಯರಾದ ಅಂಬಿಕಾ ಮತ್ತು ಅಂಬಾಲಿಕ ಜೊತೆ ವಿಚಿತ್ರವೀರ್ಯನನ್ನು ಮದುವೆ ಮಾಡಿಸುತ್ತಾರೆ. ಮದುವೆ ಮಾಡಿ ಸ್ವಲ್ಪ ಸಮಯ ದಿನದ ಬಳಿಕ ಖಾ’ಯಿಲೆಗೆ ತು’ತ್ತಾಗಿ ಸಾ’ವನ್ನಪ್ಪುತ್ತಾನೆ. ಆದರೆ ವಿಚಿತ್ರವೀರ್ಯನ ಪತ್ನಿ ಅಂಬಿಕಾ ಮತ್ತು ಅಂಬಾಲಿಕಾಗೆ ಇನ್ನೂ ಮಕ್ಕಳಾಗಿರಲಿಲ್ಲ. ಇದರಿಂದ ಕುರುವಂಶವನ್ನು ಮುಂದುವರೆಸುವುದು ಹೇಗೆ ಎಂದು ಚಿಂತೆಯಾಗುತ್ತದೆ.

Advertisements

ಹೀಗಾಗಿ ಕುರುವಂಶವನ್ನು ಮುನ್ನಡೆಸುವ ಉದ್ದೇಶದಿಂದ ಸತ್ಯವತಿ ಮದುವೆಗೆ ಮುನ್ನವೇ ಜನ್ಮ ನೀಡಿದ್ದ ವೇದವ್ಯಾಸನನ್ನ ಕರೆಸಿದರು. ತನ್ನ ತಾಯಿಯ ಆಹ್ವಾನ ತಲಪುತ್ತಾ ಇದ್ದಾಗೆ ವೇದವ್ಯಾಸರು ಹಸ್ತಿನಾಪುರಕ್ಕೆ ಬರುತ್ತಾರೆ. ಅಲ್ಲದೇ ತನಗೆ ಆಹ್ವಾನ ಕಳುಹಿಸಿದ ಹಿಂದಿನ ಉದ್ದೇಶವನ್ನು ಕೇಳಿದರು. ಆಗ ಸತ್ಯವತಿ ಕುರುವಂಶವನ್ನು ಮುನ್ನಡೆಸಲು ಉಪಾಯವನ್ನು ಕೇಳಿದರು ಆಗ ವೇದವ್ಯಾಸರು ತಮ್ಮ ದಿವ್ಯಶಕ್ತಿಯಿಂದ ಅಂಬಿಕಾ ಮತ್ತು ಅಂಬಾಲಿಕಾಗೆ ಪುತ್ರರನ್ನ ಕರುಣಿಸುತ್ತಾರೆ.

ಇವರಲ್ಲಿ ಅಂಬಿಕಾ ವೇದವ್ಯಾಸರ ತೇಜಸ್ಸನ್ನು ಕಂಡು ಕಣ್ಣುಮುಚ್ಚಿದ್ದರು ಹೀಗಾಗಿ ಅವರ ಮಗ ಧೃತರಾಷ್ಟ್ರ ಕುರುಡನಾಗಿ ಜನಿಸಿದರು. ಎರಡನೇ ರಾಣಿ ಅಂಬಾಲಿಕಾ ವೇದವ್ಯಾಸರನ್ನು ಕಂಡು ತುಂಬಾ ಹೆದರಿದ್ದರು ಈಗಾಗಿ ಅವರಿಗೆ ಜನಿಸಿದ ಪಾಂಡು ಮೊದಲಿನಿಂದಲೂ ದುರ್ಬಲನಾಗಿದ್ದ. ನಂತರ ಓರ್ವ ದಾಸಿಯ ಮೇಲೂ ದಿವ್ಯ ಶಕ್ತಿಯನ್ನು ಪ್ರಯೋಗಿಸಿದ ವೇದವ್ಯಾಸರು ಒಂದು ಮಗುವನ್ನು ಕರುಣಿಸಿದರು ಆತನೇ ಮಹಾಜ್ಞಾನಿ ವಿಧುರ. ಇಷ್ಟೇ ಅಲ್ಲ ಧೃತರಾಷ್ಟ್ರ ಕುರುಡನಾಗಿ ಜನಿಸಲು ಹಿಂದಿನ ಜನ್ಮದ ಶಾ’ಪ ಕೂಡ ಕಾರಣವಾಗಿತ್ತು.

ಹಿಂದಿನ ಜನ್ಮದಲ್ಲಿ ಧೃತರಾಷ್ಟ್ರ ಓರ್ವ ದುಷ್ಟ ರಾಜನಾಗಿದ್ದ ಒಮ್ಮೆ ಆತ ಅರಣ್ಯದಲ್ಲಿ ಹೋಗುತ್ತಿದ್ದಾಗ ಕೊಳದ ಹತ್ತಿರದಲ್ಲಿ ಹಂಸವೊಂದು ತನ್ನ ಮರಿಗಳ ಜೊತೆ ಹೋಗುತ್ತಿತ್ತು. ಈ ವೇಳೆ ರಾಜ.. ಹಂಸದ ಕಣ್ಣುಗಳನ್ನ ಹೊಡೆದುಹಾಕುವಂತೆ ಆದೇಶ ನೀಡಿದ ಜೊತೆಗೆ ಅದರ ಮರಿಗಳನ್ನ ವಧೆ ಮಾಡಿಸಿದ್ದ. ಈ ವೇಳೆ ನ’ರಳುತ್ತಾ ಹಂಸ ಮುಂದಿನ ಜನ್ಮದಲ್ಲಿ ನೀನು ಕುರುಡನಾಗಿ ಜನಿಸುತ್ತೀಯ ನಿನ್ನ ಮಕ್ಕಳು ಕೂಡ ಇದೇ ರೀತಿ ಸಾ’ವನ್ನಪ್ಪುತ್ತಾರೆ ಅಂತ ರಾಜನಿಗೆ ಶಾ’ಪ ಕೊಟ್ಟಿತು. ಅದು ನಿಜ ಕೂಡ ಆಯಿತು ಮುಂದಿನ ಜನ್ಮದಲ್ಲಿ ಆ ರಾಜ ಧೃತರಾಷ್ಟ್ರನ ರೂಪದಲ್ಲಿ ಕುರುಡನಾಗಿ ಜನಸಿದ ಜೊತೆಗೆ ಆ ಹಂಸದ ಮರಿಗಳು ಸಾ’ವನ್ನಪ್ಪಿದಂತೆ ಧೃತರಾಷ್ಟ್ರನ ಎಲ್ಲಾ ಮಕ್ಕಳು ಕುರುಕ್ಷೇತ್ರ ಯು’ದ್ಧದಲ್ಲಿ ಘೋ’ರವಾಗಿ ಸಾ’ವನ್ನಪ್ಪುತ್ತಾರೆ. ಸ್ನೇಹಿತರೆ ಇದು ಧೃತರಾಷ್ಟ್ರ ಕುರುಡನಾಗಿ ಹುಟ್ಟಿದ್ದು ಯಾಕೆ ಅನ್ನೊದನ್ನ ತಿಳಿಸಿಕೊಡುವ ಪ್ರಯತ್ನ ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನ ತಿಳಿಸಿ.